Saturday, October 26, 2024

ಸತ್ಯ | ನ್ಯಾಯ |ಧರ್ಮ

ಪೊಲೀಸ್ ಠಾಣೆ ಎದುರೇ ಗಾಂದೀಜಿ ವೇಷದಲ್ಲಿ ಮಕ್ಕಳ ಭಿಕ್ಷಾಟನೆ

ಹಾಸನ: ಪೊಲೀಸ್ ಠಾಣೆ ಎದುರೇ ಎನ್.ಆರ್. ವೃತ್ತದಲ್ಲಿ ಮೈಗೆ ಸಿಲ್ವರ್ ಬಣ್ಣ ಬಳಿದುಕೊಂಡು ಗಾಂದೀಜಿ ವೇಶದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಐವರು ಮಕ್ಕಳನ್ನು ಶ್ರೀರಾಮ ಸೇನೆಯವರು ರಕ್ಷಣೆ ಮಾಡಿ ಅವರನ್ನು ಮೊದಲು ಪೊಲೀಸ್ ಠಾಣೆಗೆ ಕರೆತಂದು ನಂತರ ಪೊಲೀಸರ ಸಲಹೆ ಮೆರೆಗೆ ಮಕ್ಕಳನ್ನು ಕಲ್ಯಾಣ ಇಲಾಖೆಗೆ ಒಪ್ಪಿಸಿದ ಘಟನೆ ನಡೆದಿದೆ.

ಶ್ರೀರಾಮಸೇನೆ ಜಾನೆಕೆರೆ ಹೇಮಂತ್ ಮಾಧ್ಯಮದೊಂದಿಗೆ ಮಾತನಾಡಿ, ಮಹಾರಾಷ್ಟ್ರ, ಅಸ್ಸಾಂ, ಬಿಹಾರ ಸೇರಿದಂತೆ ಇತರೆ ಭಾಗಗಳಿಂದ ನಮ್ಮ ರಾಜ್ಯ ಜಿಲ್ಲೆಗೆ ಮಕ್ಕಳು ಹಾಗೂ ಇತರರು ಕರೆತಂದು ಭಿಕ್ಷಾಟನೆ ಮಾಡಿಸುವ ಜಾಲವಿದ್ದು, ಹಾಸನ ನಗರದ ಎನ್.ಆರ್. ವೃತ್ತದಲ್ಲಿ ಪೊಲೀಸ್ ಠಾಣೆ ಎದುರೇ ಐದು ಜನ ಮಕ್ಕಳು ಮೈಗೆ ಸಿಲ್ವರ್ ಬಣ್ಣ ಬಳಿದುಕೊಂಡು ಗಾಂಧೀಜಿ ವೇಶದಲ್ಲಿ ಭಿಕ್ಷಾಟನೆ ಮಾಡುತ್ತಿರುವ ಬಗ್ಗೆ ತಿಳಿದು ಶ್ರೀರಾಮ ಸೇನೆಯಿಂದ ಅವರನ್ನು ರಕ್ಷಣೆ ಮಾಡಿ ಪೊಲೀಶ್ ಠಾಣೆಗೆ ಒಪ್ಪಿಸಲಾಯಿತು. ಆದರೇ ನಂತರ ಸಲಹೆ ಮೆರೆಗೆ ಮಕ್ಕಳ ಕಲ್ಯಾಣ ಸಮಿತಿಯ ಇಲಾಖೆಗೆ ಒಪ್ಪಿಸಲಾಗಿದೆ. ಇಂತಹ ಮಕ್ಕಳು ಇಲ್ಲಿ ೨೦೦ಕ್ಕೂ ಹೆಚ್ಚು ಇದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಮನವಿ ಎಂದು ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿಯ ಛೇರ್ ಪರ್ಸನ್ ಕೋಮಲ ಮಾತನಾಡಿ, ಶ್ರೀರಾಮ ಸೇನೆಯವರು ಮಕ್ಕಳನ್ನು ಕರೆತಂದು ಉತ್ತಮ ಕೆಲಸ ಮಾಡಿದ್ದಾರೆ. ಇಲ್ಲಿರುವ ಮಕ್ಕಳಲ್ಲಿ ೧೦ ವರ್ಷ, ೧೪, ೧೭ ವರ್ಷದವರು ಬಾಲಕರು ಇದ್ದಾರೆ. ಪ್ರಸ್ತೂತದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಹೊರಗಿನಿಂದ ಈ ಮಕ್ಕಳು ಬಂದಿದ್ದು, ಮಕ್ಕಳ ಕಲ್ಯಾಣ ಸಮಿತಿಯಿಂದ ಇಂತಹ ಮಕ್ಕಳನ್ನು ವಿಚಾರಿಸಿ ಎಜಕೇಶನ್ ಕೊಡಲು ಮುಂದಾಗುತ್ತೇವೆ. ಇಂತಹ ಮಕ್ಕಳ ಸಂಖ್ಯೆ ದಿನೆದಿನೆ ಹೆಚ್ಚಾಗಿ ಅವ್ಯವಸ್ಥೆ ಉಂಟಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಸಂಬಂಧ ಪಟ್ಟ ಇಲಾಖೆಗಳು ಗಮನವಹಿಸಬೇಕು ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page