Saturday, November 16, 2024

ಸತ್ಯ | ನ್ಯಾಯ |ಧರ್ಮ

ಪ್ರೇಮಿಯನ್ನು ಚುಂಬಿಸುವುದು ಮತ್ತು ಅಪ್ಪಿಕೊಳ್ಳುವುದು ಅಪರಾಧವಲ್ಲ: ಮದ್ರಾಸ್ ಹೈಕೋರ್ಟ್

ಪ್ರೇಮಿಗಳು ಚುಂಬಿಸುವುದು ಮತ್ತು ಅಪ್ಪಿಕೊಳ್ಳುವುದು ಸಹಜ ಮತ್ತು ಅದು ಅಪರಾಧವಲ್ಲ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಕೃತ್ಯಗಳನ್ನು ಸೆಕ್ಷನ್ 354A (1)(i) ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆದರೆ, ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಇಂತಹ ಕೃತ್ಯಗಳನ್ನು ಎಸಗಿದರೆ ಅದು ಅಪರಾಧವಾಗುತ್ತದೆ ಎಂದು ಕೋರ್ಟ್‌ ಹೇಳಿದೆ. ಯುವಕನೊಬ್ಬನ ವಿರುದ್ಧ ದಾಖಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ನ್ಯಾಯಾಲಯದ ವರದಿಗಳ ಪ್ರಕಾರ, ಈ ಯುವಕ 2020ರಿಂದ 19 ವರ್ಷದ ಯುವತಿಯೊಂದಿಗೆ ಸಂಬಂಧ ಹೊಂದಿದ್ದನು. ಹೀಗಿರುವಾಗ ಒಂದು ದಿನ ಅವನು ಯುವತಿಯನ್ನು ಒಂದು ಸ್ಥಳಕ್ಕೆ ಬರುವಂತೆ ಕರೆದಿದ್ದಾನೆ. ಇಬ್ಬರೂ ಅಲ್ಲಿ ಬಹಳ ಸಮಯ ಕಳೆದ ನಂತರ, ಅವನು ಅವಳನ್ನು ಚುಂಬಿಸಿ ತಬ್ಬಿಕೊಂಡನು. ಇದಾದ ಬಳಿಕ ಆಕೆ ತನ್ನ ತಂದೆ-ತಾಯಿಗೆ ಈ ವಿಷಯ ತಿಳಿಸಿದ್ದಾಳೆ. ಆಕೆ ಯುವಕನನ್ನು ಮದುವೆಯಾಗುವಂತೆ ಕೇಳಿದಳು.

ಆದರೆ ಆಕೆಯ ಪ್ರಸ್ತಾಪವನ್ನು ನಿರಾಕರಿಸಿದ ಯುವಕ ಆಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ. ಇದರಿಂದ ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ನಂತರ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಎನ್.ಆನಂದ್ ವೆಂಕಟೇಶ್, ಯುವಕರ ಕೃತ್ಯಗಳಿಗೆ ಸೆಕ್ಷನ್ 354 ಎ (1) (ಐ) ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರೇಮಿಗಳ ನಡುವಿನ ಅಪ್ಪುಗೆ ಮತ್ತು ಚುಂಬನಗಳು ಸಹಜ ಮತ್ತು ಈ ಪ್ರಕರಣದಲ್ಲಿ ಕ್ರಿಮಿನಲ್ ವಿಚಾರಣೆಗೆ ಅವಕಾಶ ನೀಡುವುದು ಕಾನೂನಿನ ದುರುಪಯೋಗವಾಗುತ್ತದೆ ಎಂದು ಅದು ತೀರ್ಪು ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page