Wednesday, November 27, 2024

ಸತ್ಯ | ನ್ಯಾಯ |ಧರ್ಮ

ಮನೆಯೇ ಹೆಣ್ಣಿನ ಪಾಲಿಗೆ ನರಕ! ಸಂಬಂಧಿಕರು ಮತ್ತು ಸಂಗಾತಿಗಳಿಂದ ದಿನಕ್ಕೆ ಸರಾಸರಿ 140 ಮಹಿಳೆಯರ ಕೊಲೆ! ವಿಶ್ವಸಂಸ್ಥೆಯ ವರದಿಯಲ್ಲಿ ಬಹಿರಂಗ

ನ್ಯೂಯಾರ್ಕ್: ಈ ಭೂಮಿಯ ಮೇಲಿನ ಮಹಿಳೆಯರಿಗೆ, ಹೆಣ್ಣುಮಕ್ಕಳ ಪಾಲಿಗೆ ಅತ್ಯಂತ ಅಪಾಯಕಾರಿ ಸ್ಥಳವೆಂದರೆ ಅದು ಅವರ ಮನೆ ಎಂದು ಯುಎನ್ ಅಂಗಸಂಸ್ಥೆಗಳು ಹೇಳುತ್ತವೆ.

ಕಳೆದ ವರ್ಷ, ಈ ಜಾಗತಿಕ ಸಂಸ್ಥೆಗೆ ಸೇರಿದ ಎರಡು ಸಂಸ್ಥೆಗಳ ಪ್ರಕಾರ, ಪ್ರತಿದಿನ ಸರಾಸರಿ 140 ಮಹಿಳೆಯರು ಮತ್ತು ಹುಡುಗಿಯರು ತಮ್ಮ ಸಂಂಗಾತಿ ಅಥವಾ ಸಂಬಂಧಿಕರ ಕೈಯಲ್ಲಿ ಸಾವು ಕಂಡಿದ್ದಾರೆ. ಯುಎನ್ ವುಮೆನ್ ಮತ್ತು ಯುಎನ್ ಆಫೀಸ್ ಆಫ್ ಡ್ರಗ್ಸ್ ಮತ್ತು ಕ್ರೈಮ್ ಸಂಸ್ಥೆಗಳ ಪ್ರಕಾರ, 2023ರಲ್ಲಿವೇ ಮಾತ್ರ ಸುಮಾರು 51,300 ಮಹಿಳೆಯರು ಈ ರೀತಿ ಕೊಲ್ಲಲ್ಪಟ್ಟಿದ್ದಾರೆ. 2022ರಲ್ಲಿ ಈ ಸಂಖ್ಯೆ 48,800. ದೇಶಗಳಿಂದ ಹೆಚ್ಚಿನ ಡೇಟಾ ಲಭ್ಯವಾಗಿರುವುದರಿಂದ ಈ ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.

ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿವಾರಣೆ ದಿನವಾದ ಸೋಮವಾರ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ.

ಜಗತ್ತಿನಾದ್ಯಂತ ಮಹಿಳೆಯರು ಯಾವುದೋ ಒಂದು ರೂಪದಲ್ಲಿ ಲೈಂಗಿಕ ದೌರ್ಜನ್ಯದಿಂದ ಬಳಲುತ್ತಿದ್ದಾರೆ ಎಂದು ಎರಡು ಸಂಸ್ಥೆಗಳು ಒತ್ತಿ ಹೇಳಿವೆ. ಯಾವ ಪ್ರದೇಶವೂ ಇದಕ್ಕೆ ಹೊರತಾಗಿಲ್ಲ. ಅವರು ವಾಸಿಸುವ ಮನೆ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ಸ್ಥಳವಾಗಿ ಮಾರ್ಪಟ್ಟಿದೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.

ಈ ಹತ್ಯೆಗಳಲ್ಲಿ ಹೆಚ್ಚಿನವು ಆಫ್ರಿಕಾದಲ್ಲಿ ನಡೆದಿವೆ. 2023ರಲ್ಲಿ ಅಂದಾಜು 21,700 ಜನರು ಹತ್ಯೆಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಪ್ರತಿ ಲಕ್ಷ ಜನರಲ್ಲಿ 2.9 ಸಂತ್ರಸ್ತರು ಎಂದು ಅದು ಹೇಳಿದೆ. ಕಳೆದ ವರ್ಷ ಅಮೆರಿಕದಲ್ಲಿ ಈ ಸಾವಿನ ಪ್ರಮಾಣ ಹೆಚ್ಚಾಗಿತ್ತು. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಏಷ್ಯಾದ ದೇಶಗಳಲ್ಲಿ ಈ ಅಪರಾಧಗಳು ಕಡಿಮೆ. ಪ್ರತಿ ಲಕ್ಷ ಜನಸಂಖ್ಯೆಯಲ್ಲಿ 0.8 ಸಂತ್ರಸ್ತರು ದಾಖಲಾಗಿದ್ದಾರೆ. ಯುರೋಪಿನಲ್ಲಿ ಈ ಸಂಖ್ಯೆ 0.6.

ಇದಕ್ಕೆ ವ್ಯತಿರಿಕ್ತವಾಗಿ, ಮನೆಯ ಹೊರಗೆ ಮತ್ತು ಕುಟುಂಬದ ಹೊರಗೆ ಪುರುಷರ ಕೊಲೆಗಳು ನಡೆಯುತ್ತಿವೆ ಎಂದು ವರದಿ ಹೇಳಿದೆ. 2023ರಲ್ಲಿ ಕೊಲೆಯಾದವರಲ್ಲಿ 80 ಪ್ರತಿಶತ ಪುರುಷರು ಮತ್ತು 20 ಪ್ರತಿಶತ ಮಹಿಳೆಯರು.

ಆದರೆ, ಕುಟುಂಬಗಳಲ್ಲಿ ಮಾರಣಾಂತಿಕ ಹಿಂಸೆಯು ಮುಖ್ಯವಾಗಿ ಮಹಿಳೆಯರ ಮೇಲೆ ನಡೆಯುತ್ತದೆ. ಈ ಹತ್ಯೆಗಳನ್ನು ತಡೆಯಲು ಸರ್ಕಾರಗಳು ಪ್ರಯತ್ನಿಸುತ್ತಿದ್ದರೂ, ಹತ್ಯೆಗಳು ಆತಂಕಕಾರಿ ಪ್ರಮಾಣದಲ್ಲಿ ನಡೆಯುತ್ತಿವೆ ಎಂದು ವರದಿ ಹೇಳಿದೆ. ಸಾಮಾನ್ಯವಾಗಿ ಈ ಹತ್ಯೆಗಳು ಈ ಲಿಂಗಾಧಾರಿತ ಹಿಂಸೆಯ ಪರಾಕಾಷ್ಠೆಯಾಗಿದ್ದು, ಸಮಯೋಚಿತ ಮತ್ತು ಪರಿಣಾಮಕಾರಿ ಮಧ್ಯಸ್ಥಿಕೆಯಿಂದ ಇದನ್ನು ತಡೆಯಬಹುದಿತ್ತು ಎಂದು ವಿಶ್ವಸಂಸ್ಥೆಯ ಏಜೆನ್ಸಿಗಳು ವರದಿಯಲ್ಲಿ ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page