Saturday, November 30, 2024

ಸತ್ಯ | ನ್ಯಾಯ |ಧರ್ಮ

ವಾರಣಾಸಿ ರೈಲು ನಿಲ್ದಾಣದಲ್ಲಿ ಭಾರೀ ಬೆಂಕಿ: ಸುಟ್ಟು ಕರಕಲಾದ 200 ಬೈಕ್‌ಗಳು

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಶನಿವಾರ ಮುಂಜಾನೆ ದಂಡು ಪ್ರದೇಶದ ರೈಲು ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.

ಈ ಘಟನೆಯಲ್ಲಿ ಸುಮಾರು 200 ವಾಹನಗಳು ಸುಟ್ಟು ಕರಕಲಾಗಿವೆ.

ಪೊಲೀಸರ ಪ್ರಕಾರ, ಶನಿವಾರ ಮುಂಜಾನೆ ವಾಹನ ನಿಲುಗಡೆ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಜಾಗೃತರಾದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. 12 ಅಗ್ನಿಶಾಮಕ ವಾಹನಗಳು ಜಿಆರ್‌ಪಿ, ಆರ್‌ಪಿಎಫ್ ಮತ್ತು ಸ್ಥಳೀಯ ಪೊಲೀಸರ ಸಹಾಯದಿಂದ ಸ್ಥಳಕ್ಕೆ ತಲುಪಿ ಸುಮಾರು 2 ಗಂಟೆಗಳ ಕಾಲ ಬೆಂಕಿಯನ್ನು ನಿಯಂತ್ರಿಸಲು ಶ್ರಮಿಸಿದವು.

ಈ ಘಟನೆಯಲ್ಲಿ 200 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಶಾಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸುಟ್ಟು ಕರಕಲಾದ ಬಹುತೇಕ ದ್ವಿಚಕ್ರ ವಾಹನಗಳು ರೈಲ್ವೇ ನೌಕರರದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page