Thursday, December 5, 2024

ಸತ್ಯ | ನ್ಯಾಯ |ಧರ್ಮ

‘ಪುಷ್ಪ 2’ ಪ್ರಿಮಿಯರ್ ಶೋ ವೇಳೆ ಕಾಲ್ತುಳಿತ, ಓರ್ವ ಮಹಿಳೆ ಸಾ*ವು, ಒಂದು ಮಗು ಗಂಭೀರ ಅಸ್ವಸ್ಥ

ಪುಷ್ಪ 2 ಚಿತ್ರಕ್ಕೆ ಆರಂಭದಲ್ಲೇ ವಿಘ್ನ ಉಂಟಾಗಿದ್ದು, ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಚಿಕ್ಕಡ್‌ಪಲ್ಲಿಯ ಥಿಯೇಟರ್‌ನಲ್ಲಿ ಬುಧವಾರ ತಡರಾತ್ರಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, 12 ವರ್ಷದ ಮಗ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಸಿನೆಮಾದ ಪ್ರೀಮಿಯರ್‌ ಶೋ ನೋಡಲು ಹೈದರಾಬಾದ್‌ನ ಕುಟುಂಬ ಚಿತ್ರಮಂದಿರಕ್ಕೆ ಭೇಟಿ ನೀಡಿತ್ತು. ಮೃತ ಮಹಿಳೆಯನ್ನು 39 ವರ್ಷದ ರೇವತಿ ಎಂದು ಗುರುತಿಸಲಾಗಿದೆ. ಅವರ ಒಂಬತ್ತು ವರ್ಷದ ಮಗ ಶ್ರೀ ತೇಜಾನನ್ನು ಆಂಬ್ಯುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ, ತೇಜಾ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ತಡರಾತ್ರಿಯೇ ಅಲ್ಲಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರವಾನಿಸಲಾಗಿದೆ.

ಜನಸಂದಣಿಯಿಂದ ಕಾಲ್ತುಳಿತ ಹಾಗೂ ಗದ್ದಲ ಸಂಭವಿಸಿದೆ. ಅಸ್ವಸ್ಥನಾಗಿದ್ದ ಬಾಲಕನನ್ನು ಸ್ಥಳದಲ್ಲಿದ್ದ ಪೊಲೀಸರು ಸಿಪಿಆರ್ ಮೂಲಕ ಪ್ರಜ್ಞೆ ಬರುವಂತೆ ಮಾಡಲು ಪ್ರಯತ್ನಿಸಿದ್ದಾರೆ. ಬಳಿಕ ಅವರನ್ನು ಬೇಗಂಪೇಟೆಯ ಆಸ್ಪತ್ರೆಗೆ ರವಾನಿಸಲಾಗಿದ್ದಾರೆ. ಥಿಯೇಟರ್‌ಗೆ ಹೋಗುವ ರಸ್ತೆಗಳು ಮಧ್ಯರಾತ್ರಿಯವರೆಗೂ ಸಾವಿರ ಅಭಿಮಾನಿಗಳಿಂದ ಗಿಜಿಗುಡುತ್ತಿದ್ದವು. ಹೀಗಾಗಿ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್‌ ಮಾಡಿದ್ದಾರೆ. ಇದರಿಂದಾಗಿ ಸಂಚಾರ ದಟ್ಟಣೆ ಕೂಡಾ ಉಂಟಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page