Thursday, December 12, 2024

ಸತ್ಯ | ನ್ಯಾಯ |ಧರ್ಮ

ಛತ್ತೀಸ್ ಗಢದಲ್ಲಿ ಭಾರೀ ಎನ್ ಕೌಂಟರ್, 12 ಮಾವೋವಾದಿಗಳು ಬಲಿ

ಬಸ್ತಾರ್: ಛತ್ತೀಸ್‌ಗಢದ ಅಬುಜ್ಮದ್ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಈ ಎನ್‌ಕೌಂಟರ್‌ನಲ್ಲಿ 12 ಮಾವೋವಾದಿಗಳು ಹತರಾಗಿದ್ದಾರೆ.

ದಾಂತೇವಾಡ ಮತ್ತು ನಾರಾಯಣಪುರ ಗಡಿಯಲ್ಲಿರುವ ದಕ್ಷಿಣ ಅಬುಜಮದ್ ​​ಅರಣ್ಯದಲ್ಲಿ ಭದ್ರತಾ ಸಿಬ್ಬಂದಿ ಮಾವೋವಾದಿಗಳಿಗಾಗಿ ಶೋಧ ನಡೆಸಿದ್ದಾರೆ. ಈ ವೇಳೆ ಪೊಲೀಸರನ್ನು ಎದುರಿಸಿದ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮಾವೋವಾದಿಗಳು ಹತರಾಗಿದ್ದಾರೆ. ಗುರುವಾರ ಮುಂಜಾನೆ 3 ಗಂಟೆಯಿಂದ ಗುಂಡಿನ ಚಕಮಕಿ ನಡೆದಿದೆ ಎಂದು ಬಸ್ತಾರ್ ಪೊಲೀಸರು ಬಹಿರಂಗಪಡಿಸಿದ್ದಾರೆ. ನಾರಾಯಣಪುರ, ದಾಂತೇವಾಡ, ಜಗದಲ್‌ಪುರ, ಕೊಂಡಗಲ್ ಜಿಲ್ಲೆಯ ಭದ್ರತಾ ಪಡೆಗಳು ಡಿಆರ್‌ಜಿ, ಎಸ್‌ಟಿಎಫ್ ಮತ್ತು ಸಿಆರ್‌ಪಿಎಫ್ ಪಡೆಗಳೊಂದಿಗೆ ಕೂಂಬಿಂಗ್‌ನಲ್ಲಿ ಭಾಗವಹಿಸಿದ್ದವು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page