Wednesday, December 18, 2024

ಸತ್ಯ | ನ್ಯಾಯ |ಧರ್ಮ

ಹತ್ರಾಸ್ ಸಂತ್ರಸ್ತರ ಕುಟುಂಬಕ್ಕೆ ಯುಪಿ ಸರ್ಕಾರ ಇಂದಿಗೂ ನ್ಯಾಯ ಒದಗಿಸಿಲ್ಲ: ರಾಹುಲ್ ಗಾಂಧಿ ಟೀಕೆ

ದೆಹಲಿ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 2020ರ ಸೆಪ್ಟೆಂಬರ್‌ನಲ್ಲಿ ನಡೆದ ಸಾಮೂಹಿಕ ಹತ್ಯೆಯ ಸಂತ್ರಸ್ತೆಯ ಕುಟುಂಬಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.

ಬಿಜೆಪಿ ಸರ್ಕಾರ ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ಹಲವು ಭರವಸೆಗಳನ್ನು ನೀಡಿದ್ದು, ಅವುಗಳಲ್ಲಿ ಒಂದನ್ನು ಸಹ ಈಡೇರಿಸಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ. ಮತ್ತೊಂದೆಡೆ, ಸಂತ್ರಸ್ತ ಬಾಲಕಿಯ ಸಹೋದರ ಸಂದೀಪ್ ಸಿಂಗ್ ಮಂಗಳವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಅವರು ತಮ್ಮ ಸಹೋದರಿಯ ಚಿತಾಭಸ್ಮವನ್ನು ತಮ್ಮ ಮನೆಯಲ್ಲಿ ಇರಿಸಿದ್ದು, ತಮ್ಮ ಕುಟುಂಬಕ್ಕೆ ಸಂಪೂರ್ಣ ನ್ಯಾಯ ದೊರೆತ ನಂತರವೇ ಅದನ್ನು ವಿಸರ್ಜಿಸುವುದಾಗಿ ಹೇಳಿದ್ದಾರೆ.

ಸೋನಿಯಾ ಕಾರ್ಯದರ್ಶಿಗೆ ರಾಹುಲ್ ಗೌರವ

ತ್ರಿಶೂರ್: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿ ಪಿಪಿ ಮಾಧವನ್ ಅವರು ಸೋಮವಾರ ದೆಹಲಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯ ಚೆರುಸ್ಸೇರಿ ಗ್ರಾಮದಲ್ಲಿರುವ ಮಾಧವನ್ ಅವರ ಮನೆಗೆ ಆಗಮಿಸಿದ ರಾಹುಲ್ ಪಾರ್ಥಿವ ಶರೀರಕ್ಕೆ ಅವರ ತಾಯಿ ಸೋನಿಯಾ ಪರವಾಗಿ ಪುಷ್ಪಗುಚ್ಛ ಇಟ್ಟು ಗೌರವ ಸಲ್ಲಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page