Tuesday, December 24, 2024

ಸತ್ಯ | ನ್ಯಾಯ |ಧರ್ಮ

ದೇಶದಲ್ಲಿ ವಲಸೆ ಪ್ರಮಾಣ ತಗ್ಗಿದೆಯೆಂದ ಪ್ರಧಾನಮಂತ್ರಿಯ ಸಲಹಾ ಮಂಡಳಿ; ವಲಸಿಗರ ನೆಚ್ಚಿನ ಸ್ಥಳಗಳ ಪೈಕಿ ಬೆಂಗಳೂರಿಗೂ ಸ್ಥಾನ!

ದೆಹಲಿ: ದೇಶದಲ್ಲಿ ವಲಸೆ ಪ್ರಮಾಣ ತಗ್ಗಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಅಂದಾಜಿಸಿದೆ. 2011ರ ಜನಗಣತಿಯ ಪ್ರಕಾರ, ದೇಶಾದ್ಯಂತ 45,57,87,621 ಜನರು ವಲಸೆ ಹೋಗಿದ್ದರು.

2023ರ ವೇಳೆಗೆ ಈ ಸಂಖ್ಯೆ 40,20,90,396ಕ್ಕೆ ತಲುಪಿದೆ ಎಂದು ಅದು ಹೇಳಿದೆ. 2011ಕ್ಕೆ ಹೋಲಿಸಿದರೆ ಇದು ಶೇ.11.78ರಷ್ಟು ಕಡಿಮೆ. 2011ರ ಜನಗಣತಿ ಪ್ರಕಾರ ವಲಸೆ ಪ್ರಮಾಣ ಶೇ.37.64ರಷ್ಟಿದ್ದರೆ ಪ್ರಸ್ತುತ ಜನಗಣತಿ ಪ್ರಕಾರ ಶೇ.28.88ಕ್ಕೆ ಇಳಿದಿದೆ. ಆಗಿನ ಕಾಲಕ್ಕೆ ಹೋಲಿಸಿದರೆ, ದೇಶಾದ್ಯಂತ ಶಿಕ್ಷಣ, ವೈದ್ಯಕೀಯ, ಮೂಲಸೌಕರ್ಯ ಮತ್ತು ಸಂಪರ್ಕದಂತಹ ಸೇವೆಗಳ ಹೆಚ್ಚಳ ಮತ್ತು ಆರ್ಥಿಕ ಅವಕಾಶಗಳ ಸುಧಾರಣೆಯೇ ವಲಸೆ ಕಡಿಮೆಯಾಗಲು ಮುಖ್ಯ ಕಾರಣ ಎಂದು ಆರ್ಥಿಕ ಸಲಹಾ ಮಂಡಳಿ ಅಭಿಪ್ರಾಯಪಟ್ಟಿದೆ.

ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾ ನಗರಗಳಿಗೆ ಸಮೀಪದ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ವಲಸಿಗರು ಬಂದಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ. ಅತಿ ಹೆಚ್ಚು ವಲಸಿಗರನ್ನು ಆಕರ್ಷಿಸುವ ಟಾಪ್-5 ರಾಜ್ಯಗಳ ಪಟ್ಟಿಯಲ್ಲಿ ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ಪ್ರಸ್ತುತ ಇವೆ. ಇದೇ ವೇಳೆ ಮಹಾರಾಷ್ಟ್ರ, ಆಂಧ್ರಪ್ರದೇಶಕ್ಕೆ ಬರುವವರ ಸಂಖ್ಯೆಯೂ ತಗ್ಗಿದೆ ಎಂಬ ಅಂಶ ಬಯಲಾಗಿದೆ.

ಮುಂಬೈ, ಬೆಂಗಳೂರು ಅರ್ಬನ್, ಹೌರಾ, ಸೆಂಟ್ರಲ್ ದೆಹಲಿ ಮತ್ತು ಹೈದರಾಬಾದ್‌ಗೆ ಹೆಚ್ಚು ಜನರು ವಲಸೆ ಹೋಗುತ್ತಿದ್ದಾರೆ ಎನ್ನಲಾಗಿದೆ. ವಲ್ಸಾದ್, ಚಿತ್ತೂರು, ಪಶ್ಚಿಮ ಬರ್ದಮಾನ್, ಆಗ್ರಾ, ಗುಂಟೂರು, ವಿಲ್ಲುಪುರಂ ಮತ್ತು ಸಹರ್ಸಾ ಜಿಲ್ಲೆಗಳಿಂದ ಹೆಚ್ಚಿನ ಜನರು ವಲಸೆ ಹೋಗುತ್ತಿದ್ದಾರೆ ಎಂದು ಹೇಳಲಾಗಿದೆ.

ಮುರ್ಷಿದಾಬಾದ್‌ನಿಂದ ಕೋಲ್ಕತ್ತಾಗೆ, ಪಶ್ಚಿಮ ಬರ್ದಮಾನ್‌ನಿಂದ ಹೌರಾಗೆ, ವಲ್ಸಾದ್‌ನಿಂದ ಮುಂಬೈಗೆ, ಚಿತ್ತೂರಿನಿಂದ ಬೆಂಗಳೂರು ನಗರಕ್ಕೆ ಮತ್ತು ಸೂರತ್‌ನಿಂದ ಮುಂಬೈಗೆ ಹೆಚ್ಚು ವಲಸೆ ಇದೆ ಎಂದು ಅದು ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page