Tuesday, December 24, 2024

ಸತ್ಯ | ನ್ಯಾಯ |ಧರ್ಮ

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಜಸ್ಟೀಸ್ ವಿ ರಾಮಸುಬ್ರಮಣಿಯನ್ ನೇಮಕ

ದೆಹಲಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ವಿ.ರಾಮಸುಬ್ರಮಣಿಯನ್ ಅವರ ನೇಮಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮೋದನೆ ನೀಡಿದ್ದಾರೆ.

ಪ್ರಿಯಾಂಕ್ ಕನುಂಗೋ ಮತ್ತು ಡಾ. ನ್ಯಾಯಮೂರ್ತಿ ಬಿದ್ಯುತ್‌ ರಂಜನ್ ಶಾಡಂಗಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಯಿತು. ಎನ್‌ಎಚ್‌ಆರ್‌ಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ಅವರು ಈ ವರ್ಷ ಜೂನ್ 1ರಂದು ನಿವೃತ್ತರಾಗಿದ್ದರೆ, ಸದಸ್ಯೆ ವಿಜಯ ಭಾರತಿ ಸಯಾನಿ ಪ್ರಸ್ತುತ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಿ.18ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಉನ್ನತ ಮಟ್ಟದ ಸಭೆ ನಡೆದಿತ್ತು. ಇದರ ನಂತರ ನ್ಯಾಯಮೂರ್ತಿ ರಾಮಸುಬ್ರಮಣಿಯನ್ ಅವರನ್ನು ನೇಮಕ ಮಾಡುವ ನಿರ್ಧಾರ ಸೋಮವಾರ ಹೊರಬಿದ್ದಿದೆ.

ಅವರ ಹುಟ್ಟೂರು ತಮಿಳುನಾಡಿನ ಮನ್ನಾರ್‌ ಗುಡಿ. 30 ಜೂನ್ 1958ರಂದು ಜನಿಸಿದರು. ನ್ಯಾಯಮೂರ್ತಿ ರಾಮಸುಬ್ರಮಣಿಯನ್ ಅವರು ಸೆಪ್ಟೆಂಬರ್ 23, 2019ರಿಂದ ಜೂನ್ 29, 2023ರವರೆಗೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. 1983 ಫೆಬ್ರವರಿ 16ರಂದು ವಕೀಲರಾಗಿ ದಾಖಲಾದ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ 23 ವರ್ಷಗಳ ಕಾಲ ಅಭ್ಯಾಸ ಮಾಡಿದರು.

ಅವರು ಮೊದಲು 31 ಜುಲೈ 2006ರಂದು ಮದ್ರಾಸ್ ಹೈಕೋರ್ಟ್‌ನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. 9 ನವೆಂಬರ್ 2009 ರಂದು ಕಾಯಂ ನ್ಯಾಯಾಧೀಶರಾಗಿ ಬಡ್ತಿ. ಏಪ್ರಿಲ್ 27, 2016 ರಂದು, ಅವರು ಹೈದರಾಬಾದ್‌ನಿಂದ ಕೆಲಸ ಮಾಡಿದ ತೆಲಂಗಾಣ-ಆಂಧ್ರಪ್ರದೇಶ ಹೈಕೋರ್ಟ್‌ಗೆ ವರ್ಗಾವಣೆಗೊಂಡರು. ಜನವರಿ 1, 2019 ರಂದು, ಜಂಟಿ ಹೈಕೋರ್ಟ್ ಅನ್ನು ಎಪಿ ಮತ್ತು ತೆಲಂಗಾಣ ಹೈಕೋರ್ಟ್‌ಗಳಾಗಿ ವಿಂಗಡಿಸಿದ ನಂತರ ಅವರು ತೆಲಂಗಾಣ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಮುಂದುವರೆದರು.

ಜೂನ್ 22, 2019ರಂದು ಅವರು ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು. ಅಲ್ಲಿದ್ದಾಗ, ಅವರು ಸೆಪ್ಟೆಂಬರ್ 23, 2019 ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು. ಮತ್ತೊಂದೆಡೆ, ಎನ್‌ಎಚ್‌ಆರ್‌ಸಿ ಸದಸ್ಯರಾಗಿ ನೇಮಕಗೊಂಡ ಪ್ರಿಯಾಂಕ್ ಕನುಂಗೋ ಅವರು ಈ ಹಿಂದೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿದ್ದರು. ಅವರ ಸ್ಥಳೀಯ ರಾಜ್ಯ ಮಧ್ಯಪ್ರದೇಶ. ಇನ್ನೊಬ್ಬ ಸದಸ್ಯ ನ್ಯಾಯಮೂರ್ತಿ ಬಿದ್ಯುತ್ರಂಜನ್ ಷಡಂಗಿ ಸ್ವರಾಷ್ಟ್ರ ಒಡಿಶಾ. ಅವರು ಈ ವರ್ಷ ಜುಲೈ 5 ರಿಂದ 19 ರವರೆಗೆ ಜಾರ್ಖಂಡ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಈ ಹಿಂದೆ ಅವರು ಒಡಿಶಾ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.

ಈ ನಡುವೆ ನಿವೃತ್ತ ಸುಪ್ರೀಮ್‌ ಕೋರ್ಟ್‌ ಮುಖ್ಯ ನ್ಯಾಯಾಧೀಶ ಚಂದ್ರಚೂಡ್‌ ಅವರು ಈ ಹುದ್ದೆಗೆ ಬರಲಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬಂದಿದ್ದವು. ಇದೀಗ ವಿ.ರಾಮಸುಬ್ರಮಣಿಯನ್ ನೇಮಕಾತಿಯೊಂದಿಗೆ ಈ ಎಲ್ಲಾ ಊಹೆಗಳಿಗೆ ತೆರೆ ಬಿದ್ದಂತಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page