Friday, December 27, 2024

ಸತ್ಯ | ನ್ಯಾಯ |ಧರ್ಮ

ಮನಮೋಹನ್ ಸಿಂಗ್ ಗೌರವಾರ್ಥ ಕಾಂಗ್ರೆಸ್ಸಿನಿಂದ 7 ಶೋಕಾಚರಣೆ

ಹೊಸದಿಲ್ಲಿ: ಗುರುವಾರ ನಿಧನ ಹೊಂದಿದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಗೌರವಾರ್ಥ ಕಾಂಗ್ರೆಸ್‌ ಪಕ್ಷದಿಂದ7 ದಿನಗಳವರೆಗೆ ಆಚರಿಸಲಾಗುತ್ತಿದೆ. ಮುಂದಿನ ಏಳು ದಿನಗಳಲ್ಲಿ ನಿಗದಿಯಾಗಿದ್ದ ಸ್ಥಾಪನಾ ದಿನ ಸೇರಿ ಎಲ್ಲ ಅಧಿಕೃತ ಕಾರ್ಯಕ್ರಮಗಳನ್ನು ರದ್ದು ಮಾಡುವುದಾಗಿ ಕಾಂಗ್ರೆಸ್‌ ತಿಳಿಸಿದೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ‘ಎಲ್ಲಾ ಆಂದೋಲನ ಮತ್ತು ಪ್ರಚಾರ ಕಾರ್ಯಕ್ರಮಗಳೂ ರದ್ದು ಮಾಡಲಾಗಿದೆ. ಪಕ್ಷದ ಕಾರ್ಯಕ್ರಮಗಳು 3 ಜನವರಿ 2025 ರಂದು ಪುನರಾರಂಭಗೊಳ್ಳುತ್ತವೆ. ಈ ಶೋಕಾಚರಣೆಯ ಅವಧಿಯಲ್ಲಿ ಪಕ್ಷದ ಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page