Friday, January 3, 2025

ಸತ್ಯ | ನ್ಯಾಯ |ಧರ್ಮ

ಜ.4ರಂದು ಡಾ. ಗುರುರಾಜ ಹೆಬ್ಬಾರ್ ಹೆಸರಿನರಸ್ತೆಗೆ ನಾಮಫಲಕ – ಬಿ.ವಿ. ಕರೀಗೌಡ

ಹಾಸನ: ನಗರದ ಸರಕಾರಿ ಮಹಿಳಾ ಕಾಲೇಜು ಮುಂಬಾಗ ಜನವರಿ 4 ರಂದುಡಾ. ಗುರುರಾಜ ಹೆಬ್ಬಾರ್ ಹೆಸರಿನರಸ್ತೆಯ ನಾಮಫಲಕಅನಾವರಣ ಮತ್ತುರಕ್ತದಾನ ಶಿಬಿರ ಹಾಗೂ ದೇಹದಾನ ನೇತ್ರದಾನ ನೊಂದಣಿಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದುಜನಕಲ್ಯಾಣರೀಸರ್ಚ್ಅAಡ್‌ಚಾರಿಟಬಲ್ ಟ್ರಸ್ಟ್ಅಧ್ಯಕ್ಷ ಬಿ.ವಿ. ಕರೀಗೌಡ ಮತ್ತುಟ್ರಸ್ಟ್ಗೌರವಾಧ್ಯಕ್ಷ ಹೆಚ್.ಪಿ. ಮೋಹನ್ ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಡಾ|| ಗುರುರಾಜ ಹೆಬ್ಬಾರ್ ಮೆಮೋರಿಯಲ್‌ ಚಾರಿಟೇಬಲ್ ಟ್ರಸ್ಟ್ ಹಾಗೂ ಜನಕಲ್ಯಾಣ ರಿಸರ್ಚ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಂಜೀವಿನಿ ಸಹಕಾರಿ ಆಸ್ಪತ್ರೆ, ಭಾರತೀಯ ರೆಡ್‌ ಕ್ರಾಸ್ ಸಂಸ್ಥೆ. ರಾಷ್ಟಿಯ ಸೇವಾ ಯೋಜನೆ, ಹಿಮ್ಸ್, ಪರಿಪೂರ್ಣ ಚಾರಿಟಬಲ್ ಟ್ರಸ್ಟ್, ಕಾಮಧೇನು ಸಹಕಾರಿ ವಿದ್ಯಾಶ್ರಮ, ರೈತ ಬಂದು ಸಹಕಾರಿ ಸಂಘ, ವಿದ್ಯಾಸೌಧ ಶಿಕ್ಷಣ ಸಂಸ್ಥೆ ಮತ್ತು ಪ್ರಶಾಂತಿ ಸೇವಾ ಟ್ರಸ್ಟ್, ಕಟ್ಟಾಯ ಹೋಬಳಿ ಗ್ರಾಮಸ್ಥರು ಸೇರಿದಂತೆ ವಿವಿಧ ಸಂಘ-ಸಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಾ.ಗುರುರಾಜ ಹೆಬ್ಬಾರ್‌ರವರ ಹುಟ್ಟು ಹಬ್ಬದ ಪ್ರಯುಕ್ತ ಜನವರಿ 4 ರಂದು ಬೆಳಿಗ್ಗೆ 8 ಗಂಟೆಗೆ ಸರ್ಕಾರಿ ಮಹಿಳಾ ಕಾಲೇಜು ಮುಂಭಾಗದರ ಸ್ತೆಯಲ್ಲಿ ಡಾ.ಗುರುರಾಜ ಹೆಬ್ಬಾರ್ ಹೆಸರಿನರ ಸ್ತೆಯ ನಾಮಫಲಕ ಅನಾವರಣ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ಕೆಂಗೇರಿ ವಿಶ್ವಒಕ್ಕಲಿಗರ ಮಹಾ ಸಂಸ್ಥಾನ ಮಠದಡಾ. ನಿಶ್ಚಲಾನಂದನಾಥ ಮಹಾಸ್ವಾಮೀಜಿ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಅಂದು ಬೆಳಿಗ್ಗೆ 10:30ಕ್ಕೆ ಜನಕಲ್ಯಾಣರೀಸರ್ಚ್ಚಾರಿಟೆಬಲ್ ಟ್ರಸ್ಟ್ಆವರಣದಲ್ಲಿರಕ್ತದಾನ ಶಿಬಿರ ಹಾಗೂ ದೇಹದಾನ-ನೇತ್ರದಾನ ನೊಂದಣಿಕಾರ್ಯಕ್ರಮವನ್ನುಆಯೋಜಿಸಲಾಗಿದೆ. ಬೆಳಗಾವಿ ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿಗಳಾದ ಡಾ. ಕರಿಸಿದ್ದಪ್ಪ ಉದ್ಘಾಟನೆ ಮಾಡಲಿದ್ದಾರೆ. ನಾನು ಅಧ್ಯಕ್ಷತೆ ವಹಿಸಲಿದ್ದು, ಸಂಸದರಾದ ಶ್ರೇಯಸ್ ಎಂ. ಪಟೇಲ್, ಶಾಸಕರು ಹಾಗೂ ಸಂಜೀವಿನಿ ಸಹಕಾರಿಆಸ್ಪತ್ರೆಯಅಧ್ಯಕ್ಷರಾದ, ಹೆಚ್.ಪಿ. ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಬಿ.ಆರ್. ಪೂರ್ಣಿಮಾ, ಎಸ್.ಪಿ. ಮಹಮ್ಮದ್ ಸುಜೀತಾ, ನಗರಸಭೆಯ ಪೌರಾಯುಕ್ತರಾದಟಿ.ಎನ್. ನರಸಿಂಹಮೂರ್ತಿ ಅವರುಗೌರವ ಉಪಸ್ಥಿತಿಯನ್ನು ವಹಿಸಲಿದ್ದಾರೆಎಂದು ಹೇಳಿದರು.
ಡಾ|| ಗುರುರಾಜ ಹೆಬ್ಬಾರ್ ಮೆಮೋರಿಯಲ್‌ ಚಾರಿಟೇಬಲ್ ಟ್ರಸ್ಟ್ಅಧ್ಯಕ್ಷೆಡಾ. ಜಿ. ಪ್ರತಿಭಾ ಮಾತನಾಡಿ, ಡಾ|| ಗುರುರಾಜ ಹೆಬ್ಬಾರ್ ಸೇವಾ ಪ್ರಶಸ್ತಿ ಪುರಸ್ಕೃತವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಬೆಂಗಳೂರಿನ ಐಗಾಟ್ ಸಂಸ್ಥಾಪಕ ನಿರ್ದೇಶಕಡಾ|| ಎನ್.ಎಸ್. ನಾಗೇಶ್, ಸಮಾಜಸೇವಾಕ್ಷೇತ್ರದಲ್ಲಿ ಬೆಂಗಳೂರಿನ ಕರ್ನಾಟಖ ಗಾಂಧಿ ಸ್ಮಾರಕ ನಿಧಿ ನಿರ್ದೇಶಕರಾದ ಜಿ.ಬಿ. ಶಿವರಾಜು ಹಾಗೂ ಪ್ರತಿಭಾ ಪುರಸ್ಕಾರದಲ್ಲಿ ಕಟ್ಟಾಯ ಸರಕಾರಿ ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ ಎಂ. ಬಿಂದುಲತಾಇವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಕಾರ್ಯಕ್ರಮ ಬಗ್ಗೆ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿಡಾ|| ಗುರುರಾಜ ಹೆಬ್ಬಾರ್ ಮೆಮೋರಿಯಲ್‌ ಚಾರಿಟೇಬಲ್ ಟ್ರಸ್ಟ್ಗೌರವಾಧ್ಯಕ್ಷ ಹೆಚ್.ಪಿ. ಮೋಹನ್, ಅಧ್ಯಕ್ಷೆಡಾ. ಜಿ. ಪ್ರತಿಭಾ, ಕಾಮಧೇನು ಸಹಕಾರಿ ವಿದ್ಯಾಶ್ರಮದ ಅಧ್ಯಕ್ಷ ಮಾಧವ್ ಶೆಣ್ಯೆ, ಡಾ. ವೈ.ಎಸ್. ವೀರಭದ್ರಪ್ಪ, ಪರಿಪೂರ್ಣಚಾರಿಟಬಲ್ ಟ್ರಸ್ಟ್ಅಧ್ಯಕ್ಷರಾದ ಹೆಚ್.ವಿ. ಲಕ್ಷಿö್ಮÃನಾರಾಯಣ್‌ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page