Monday, January 6, 2025

ಸತ್ಯ | ನ್ಯಾಯ |ಧರ್ಮ

ಪತ್ರಕರ್ತ ಮುಖೇಶ್ ಚಂದ್ರಕರ್ ಕೊಲೆ: ಪ್ರಮುಖ ಆರೋಪಿ ಬಂಧನ

ಬೆಂಗಳೂರು: ಛತ್ತೀಸ್‌ಗಢ ಬಿಜಾಪುರ ಜಿಲ್ಲೆಯಲ್ಲಿ ಪತ್ರಕರ್ತ ಮುಖೇಶ್‌ ಚಂದ್ರಕರ್ ಕೊಲೆಯಾದ ಕೆಲವೇ ದಿನಗಳಲ್ಲಿ ಹೈದರಾಬಾದ್‌ನ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಮುಖ ಆರೋಪಿ ಸುರೇಶ್ ಚಂದ್ರಕರ್‌ನನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.  ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಮೂವರನ್ನು – ರಿತೇಶ್ ಚಂದ್ರಕರ್ ಮತ್ತು ದಿನೇಶ್ ಚಂದ್ರಕರ್ ಮತ್ತು ಮೇಲ್ವಿಚಾರಕ ಮಹೇಂದ್ರ ರಾಮ್ಟೆಕೆ – ಈಗಾಗಲೇ ಈ ಪ್ರಕರಣದಲ್ಲಿ ಬಂಧಿಸಲಾಗಿದೆ.

ಶುಕ್ರವಾರ ಗುತ್ತಿಗೆದಾರರೊಬ್ಬರ ಜಮೀನಿನ ಸೆಪ್ಟಿಕ್ ಟ್ಯಾಂಕ್‌ನಲ್ಲಿ 28 ವರ್ಷದ ಫ್ರೀಲಾನ್ಸ್ ಪತ್ರಕರ್ತ ಮುಖೇಶ್ ಚಂದ್ರಕರ್ ಅವರ ದೇಹವು ಪತ್ತೆಯಾಗಿತ್ತು. ಪೊಲೀಸರು ಅವರ ಮೊಬೈಲ್ ಫೋನ್ ಟ್ರ್ಯಾಕಿಂಗ್ ಮೂಲಕ ಪತ್ತೆ ಮಾಡಿದರು. ಕಟ್ಟಡ ನಿರ್ಮಾಣವು ಗುತ್ತಿಗೆದಾರ ಸುಖೇಶ್ ಚಂದ್ರಕರ್‌ಗೆ ಸಂಬಂಧಿಸಿದೆ ಎಂದು ವರದಿಯಾಗಿದೆ ಮತ್ತು ಕೊಲೆಯಲ್ಲಿ ಅವನ ಪಾತ್ರವನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ.

ಬಸ್ತಾರ್ ಪ್ರದೇಶದಲ್ಲಿ ನಕ್ಸಲ್ ಸಂಘರ್ಷ ಮತ್ತು ರಸ್ತೆ ನಿರ್ಮಾಣ ಯೋಜನೆಗಳಲ್ಲಿನ ಭ್ರಷ್ಟಾಚಾರದ ಕುರಿತು ತನಿಖಾ ವರದಿಗೆ ಹೆಸರುವಾಸಿಯಾಗಿದ್ದ ಮುಖೇಶ್ ಅವರು ಜನವರಿ 1 ರ ಸಂಜೆ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. 

ಹಣ ಖರ್ಚು ವ್ಯಯ ಮಾಡಿದರೂ ದುಸ್ಥಿತಿಯಲ್ಲಿರುವ ಆ ಪ್ರದೇಶದ 52 ಕಿ.ಮೀ ರಸ್ತೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಮುಖೇಶ್‌ ಮಾಡಿದ್ದ ವರದಿಯನ್ನು ಎನ್‌ಡಿಟಿವಿ  ಬಹಿರಂಗಪಡಿಸಿದ ಎರಡು ವಾರಗಳ ನಂತರ ಈ ಘಟನೆ ಸಂಭವಿಸಿದೆ . ಅವರ ವರದಿಯನ್ನು ಅನುಸರಿಸಿ, ಜಗದಲ್‌ಪುರ ಲೋಕೋಪಯೋಗಿ ಇಲಾಖೆಯು ಆಪಾದಿತ ಅಕ್ರಮಗಳನ್ನು ಪರಿಶೀಲಿಸಲು ತನಿಖಾ ಸಮಿತಿಯನ್ನು ರಚಿಸಿತ್ತು.

ಅವರು 167,000 ಚಂದಾದಾರರನ್ನು ಹೊಂದಿರುವ ಯೂಟ್ಯೂಬ್ ಚಾನೆಲ್ ಬಸ್ತಾರ್ ಜಂಕ್ಷನ್‌ ನಡೆಸುತ್ತಿದ್ದ ಇವರು, ಬಸ್ತಾರ್ ಪ್ರದೇಶದ ಭ್ರಷ್ಟಾಚಾರ ಮತ್ತು ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ವ್ಯಾಪಕವಾಗಿ ವರದಿ ಮಾಡುತ್ತಿದ್ದರು. ಅವರ ಮೃತದೇಹ ಪತ್ತೆಯಾಗುವ ಕೆಲವೇ ಗಂಟೆಗಳ ಮೊದಲು ಅವರ ಸಹೋದರ ಸಹಾಯ ಯಾಚಿಸಿ ಅದೇ ಚಾನೆಲ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ, “ನನ್ನ ಸಹೋದರ ನಿಜವಾದ ಹೀರೋ. ಇವತ್ತು ನಾನು ಅವನ ಅಣ್ಣ ಅನ್ನಿಸುತ್ತಿಲ್ಲ. ಇಂದು ಮಗುವನ್ನು ಕಳೆದುಕೊಂಡಂತೆ ಅನಿಸುತ್ತಿದೆ” ಎಂದು ಹೇಳಿದ್ದರು.

ಪತ್ರಕರ್ತರ ಸುರಕ್ಷತೆಗೆ ಸಂಪಾದಕರ ಸಂಘ ಆಗ್ರಹಿಸಿದೆ

ಶಂಕಿತ ಕೊಲೆಗೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿದ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, “ಯುವ ಪತ್ರಕರ್ತನ ಸಾವು ಗಂಭೀರ ಕಳವಳಕಾರಿ ವಿಷಯವಾಗಿದೆ ಏಕೆಂದರೆ ಇದು ಫೌಲ್ ಪ್ಲೇಯ ಅನುಮಾನವನ್ನು ಹುಟ್ಟುಹಾಕುತ್ತದೆ. ಪ್ರಕರಣವನ್ನು ತ್ವರಿತವಾಗಿ ತನಿಖೆ ಮಾಡಲು ಮತ್ತು ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೆ ತರಲು ಯಾವುದೇ ಪ್ರಯತ್ನಗಳನ್ನು ಮಾಡಿ ಎಂದು ಸಂಪಾದಕರ ಸಂಘವು ಛತ್ತೀಸ್‌ಗಢ ಸರ್ಕಾರಕ್ಕೆ ಕರೆ ನೀಡುತ್ತದೆ,” ಎಂದು ಹೇಳಿದೆ.

ಪತ್ರಕರ್ತರ ಸುರಕ್ಷತೆಗೆ – ವಿಶೇಷವಾಗಿ ಸಣ್ಣ ಪಟ್ಟಣಗಳು ​​ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ – “ಯಾವುದೇ ಹಾನಿ ಅಥವಾ ಅಡೆತಡೆಗಳು ಉಂಟಾಗದಂತೆ ಖಚಿತಪಡಿಸಿಕೊಳ್ಳಲು ದೇಶಾದ್ಯಂತ ಅಧಿಕಾರಿಗಳು ತಮ್ಮ ಕೈಲಾದಷ್ಟು ಪ್ರಯತ್ನಿಸಬೇಕು,” ಎಂದು ಸಂಪಾದಕರ ಸಂಘವು ಒತ್ತಾಯಿಸಿದೆ.

“ಯಾವುದೇ ಪ್ರಜಾಪ್ರಭುತ್ವದಲ್ಲಿ ಭಯವಿಲ್ಲದೆ ಕೆಲಸ ಮಾಡಲು ಅನುವು ಮಾಡಿಕೊಡುವ ಮುಕ್ತ ಪತ್ರಿಕಾ ವ್ಯವಸ್ಥೆಯು ಮುಖ್ಯವಾಗಿದೆ” ಎಂದು ಅದು ಹೇಳಿದೆ.

ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಪ್ರಕಾರ, ಪರಿಸರ ಸಂಬಂಧಿತ ವಿಷಯಗಳ ಬಗ್ಗೆ ವರದಿ ಮಾಡುವ ಪತ್ರಕರ್ತರು – ಮುಖ್ಯವಾಗಿ ಭೂ ಸ್ವಾದೀನ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಅಕ್ರಮ ಗಣಿಗಾರಿಕೆ ವರದಿ ಮಾಡುವವರ ಮೇಲೆ ಭಾರತದಲ್ಲಿ ಉದ್ದೇಶಿತ ದಾಳಿಯ ಹೆಚ್ಚಿದೆ. 2014 ರಿಂದ ಕೊಲ್ಲಲ್ಪಟ್ಟ 28 ಪತ್ರಕರ್ತರಲ್ಲಿ ಕನಿಷ್ಠ 13 ಮಂದಿ ಈ ಸಮಸ್ಯೆ-ಅಕ್ರಮಗಳ ಬಗ್ಗೆ ವರದಿ ಮಾಡುತ್ತಿದ್ದರು.

ಮೇ 2022 ರಲ್ಲಿ, ಮರಳು ಮಾಫಿಯಾದ ವರದಿಗಾಗಿ ಹೆಸರುವಾಸಿಯಾದ ಸ್ವತಂತ್ರ ವರದಿಗಾರ 26 ವರ್ಷದ ಸುಭಾಷ್ ಕುಮಾರ್ ಮಹ್ತೋ ಅವರನ್ನು, ಅವರ ಬಿಹಾರದ ಮನೆಯ ಹೊರಗೆ ನಾಲ್ವರು  ತಲೆಗೆ ಗುಂಡು ಹೊಡೆದು ಸಾಯಿಸಿದ್ದರು. ಫೆಬ್ರವರಿ 2023 ರಲ್ಲಿ, ಅಕ್ರಮ ಭೂ ಸ್ವಾಧೀನ ಅಕ್ರಮದ ಬಗ್ಗೆ ವರದಿ ಮಾಡಿದ್ದ ತನಿಖಾ ವರದಿಗಾರ ಶಶಿಕಾಂತ್ ವಾರಿಶೆ ಕೊಲೆಯಾಗಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page