Tuesday, January 7, 2025

ಸತ್ಯ | ನ್ಯಾಯ |ಧರ್ಮ

ಪ್ರಿಯಾಂಕಾ ಗಾಂಧಿ, ಆತಿಶಿ ಕುರಿತು ರಮೇಶ್ ಬಿಧುರಿ ಹೇಳಿಕೆಗೆ ಬಿಜೆಪಿಯಲ್ಲೇ ವಿರೋಧ

ಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ದಿಲ್ಲಿ ಮುಖ್ಯಮಂತ್ರಿ ಆತಿಶಿ ಅವರ ಬಗ್ಗೆ ಕಲ್ಕಾಜಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಸೋಮವಾರ ವಿರೋಧವ್ಯಕ್ತವಾಗಿದೆ.

ʼಲಿಂಗ ಅಥವಾ ಕುಟುಂಬ ಸಂಬಂಧಿತ ಹೇಳಿಕೆಗಳಿಂದ ರಾಜಕಾರಣಿಗಳು ದೂರವಿರಬೇಕು ಎಂದು ಬಿಜೆಪಿ ಹೈಕಮಾಂಡ್‌ ಬಿದುರಿಯವರಿಗೆ ಸೂಚನೆ ನೀಡಿದೆ. ಕಲ್ಕಾಜಿಯಲ್ಲಿ ಪ್ರಿಯಾಂಕಾ ಗಾಂಧಿಯ ಕೆನ್ನೆಯಂತಿರುವ ರಸ್ತೆಗಳನ್ನು ನಿರ್ಮಿಸುವುದಾಗಿ ಬಿಧುರಿ ಹೇಳಿಕೆ ನೀಡಿ ವಿವಾದವನ್ನು ಸೃಷ್ಟಿಸಿದ್ದರು. ಪ್ರಿಯಾಂಕಾ ಗಾಂಧಿ ವಿರುದ್ಧದ ಬಿಧುರಿ ಅವರ ಹೇಳಿಕೆಯು ಬಿಜೆಪಿಯ ಮಹಿಳಾ ವಿರೋಧಿ ಭಾವನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕಾಂಗ್ರೆಸ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.

ಇದಲ್ಲದೆ ಆತಿಶಿ ತನ್ನ ಉಪನಾಮ “ಮರ್ಲೆನಾ” ಅನ್ನು “ಸಿಂಗ್” ಎಂದು ಬದಲಿಸಿ ಅವರು “ತನ್ನ ತಂದೆಯನ್ನು ಬದಲಾಯಿಸಿದ್ದಾರೆ” ಎಂದು ಬಿಧುರಿ ಹೇಳಿದ್ದರು. ಈ ಬಗ್ಗೆ ಬಿಜೆಪಿ ಮತ್ತು ಬಿಧುರಿ ವಿರುದ್ಧ ಎಎಪಿ ಆರೋಪ ವ್ಯಕ್ತಪಡಿಸಿತ್ತು

ದಿಲ್ಲಿಯ ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರವೀಣ್ ಶಂಕರ್ ಕಪೂರ್ ಈ ಕುರಿತು ಪ್ರತಿಕ್ರಿಯಿಸಿದ್ದು, ರಾಜಕೀಯ ನಾಯಕರು ಇತರರ ವಿರುದ್ಧ ವೈಯಕ್ತಿಕವಾಗಿ ಲಿಂಗ ಅಥವಾ ಕುಟುಂಬಕ್ಕೆ ಸಂಬಂಧಿತ ಹೇಳಿಕೆ ನೀಡುವುದನ್ನು ತಪ್ಪಿಸಬೇಕು ಸರಿಯಲ್ಲ. ಒಬ್ಬ ವ್ಯಕ್ತಿಯಾಗಿ ಅಥವಾ ಹಿರಿಯನಾಗಿ, ನಾವೆಲ್ಲರೂ ಆತಿಶಿ ಮರ್ಲೆನಾ ಅವರ ತಂದೆಯನ್ನು ಗೌರವಿಸುತ್ತೇವೆ ಎಂದು ಹೇಳಿನೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page