Saturday, January 11, 2025

ಸತ್ಯ | ನ್ಯಾಯ |ಧರ್ಮ

‘ನಾನು ದೇವರಲ್ಲ!’: ದೇವರಿಂದ ಭೂಮಿಗೆ ಕಳುಹಿಸಲ್ಪಟ್ಟ ಮೋದಿ ಹೇಳಿಕೆ

ಬೆಂಗಳೂರು: “ಕೆಟ್ಟ ಉದ್ದೇಶದಿಂದ ಯಾವತ್ತೂ “ತಪ್ಪು” ಮಾಡದಿರುವುದೇ ನನ್ನ ಜೀವನದ ಮಂತ್ರ,” ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಪಾಡ್‌ಕ್ಯಾಸ್ಟ್‌ ಒಂದರಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ, ತಾವು ಸೇರಿದಂತೆ ಮನುಷ್ಯರು ತಪ್ಪುಗಳನ್ನು ಮಾಡುವ ಸಾಧ್ಯತೆಯಿದೆ, ಆದರೆ ಕೆಟ್ಟ ಉದ್ದೇಶದಿಂದ ಕೆಲಸಗಳನ್ನು ಮಾಡುವ ಉದ್ದೇಶ ಇರಬಾರದು ಎಂದು ಹೇಳಿದರು.

“ನಾನು ಮುಖ್ಯಮಂತ್ರಿಯಾದಾಗ ‘ಕಠಿಣ ಪರಿಸ್ಥಿತಿಯಲ್ಲಿ ಹಿಂದೆ ಸರಿಯುವುದಿಲ್ಲ’ ಮತ್ತು ‘ನನಗಾಗಿ ನಾನೇನೂ ಮಾಡುವುದಿಲ್ಲ’ ಮತ್ತು ‘ನಾನು ತಪ್ಪು ಮಾಡಬಲ್ಲ ಮನುಷ್ಯ, ನಾನು ಮಾಡುತ್ತೇನೆ’ ಎಂದು ಭಾಷಣ ಮಾಡಿದ್ದೆ. ಕೆಟ್ಟ ಉದ್ದೇಶದಿಂದ ಯಾವತ್ತೂ ತಪ್ಪು ಮಾಡಬೇಡಿ.’ ಇದು ನನ್ನ ಜೀವನದ ಮಂತ್ರ. ನಾನು ಸೇರಿದಂತೆ ಎಲ್ಲರೂ ತಪ್ಪು ಮಾಡುತ್ತಾರೆ. ನಾನು ಮನುಷ್ಯ, ದೇವರಲ್ಲ,” ಎಂದು ನಿಖಿಲ್ ಕಾಮತ್ ಎಂಬವರ ಪಾಡ್‌ಕ್ಯಾಸ್ಟ್‌ನಲ್ಲಿ ಪ್ರಧಾನಿ ಮೋದಿ ಹೇಳಿದರು.

ಈ 2024 ರ ಮೇ ತಿಂಗಳಲ್ಲಿ ಮೋದಿಯವರು ಖಾಸಗಿ ವಾಹಿನಿಯೊಂದರಲ್ಲಿ” ಪರಮಾತ್ಮ ನನ್ನನ್ನು ಒಂದು ಉದ್ದೇಶಕ್ಕಾಗಿ ಕಳುಹಿಸಿದ್ದಾನೆ ಎಂದು ನನಗೆ ಮನವರಿಕೆಯಾಗಿದೆ . ಉದ್ದೇಶವನ್ನು ಸಾಧಿಸುವುದು ನನ್ನ ಏಕೈಕ ಕೆಲಸ. ಅದಕ್ಕಾಗಿಯೇ ನಾನು ನನ್ನನ್ನು ಸಂಪೂರ್ಣವಾಗಿ ದೇವರಿಗೆ ಅರ್ಪಿಸಿಕೊಂಡಿದ್ದೇನೆ,” ಎಂದು ಹೇಳಿದ್ದರು.

ಸಿದ್ಧಾಂತಕ್ಕಿಂತ ಆದರ್ಶವಾದದ ಮಹತ್ವವನ್ನು ಒತ್ತಿ ಹೇಳಿದ ಅವರು, ಸಿದ್ಧಾಂತವಿಲ್ಲದೆ ರಾಜಕೀಯ ನಡೆಯಲು ಸಾಧ್ಯವಿಲ್ಲವಾದರೂ, ಆದರ್ಶವಾದವು ತುಂಬಾ ಅಗತ್ಯವಾಗಿದೆ ಎಂದು ಹೇಳಿದರು. ಗಾಂಧಿ ಮತ್ತು ಸಾವರ್ಕರ್ ವಿಭಿನ್ನ ಮಾರ್ಗಗಳನ್ನು ಹೊಂದಿದ್ದರು, ಆದರೆ ಅವರ ಇಬ್ಬರ ಸಿದ್ಧಾಂತವು “ಸ್ವಾತಂತ್ರ್ಯ” ಎಂದು ಪ್ರಧಾನಿ ಹೇಳಿದರು.

ತಮ್ಮದೇ ಆದ ಸಿದ್ಧಾಂತದ ಬಗ್ಗೆ ಮಾತನಾಡಿದ ಪ್ರಧಾನಿ, ರಾಷ್ಟ್ರವನ್ನು ಯಾವಾಗಲೂ ಮೊದಲ ಸ್ಥಾನದಲ್ಲಿಡುವುದು ತನ್ನ ಸಿದ್ದಾಂತ ಎಂದು ಹೇಳಿದರು.

“ನಾನು ಅನುಕೂಲಕ್ಕೆ ತಕ್ಕಂತೆ ತನ್ನ ನಿಲುವು ಬದಲಿಸುವ ವ್ಯಕ್ತಿ ಅಲ್ಲ. ನಾನು ಒಂದೇ ಒಂದು (ರೀತಿಯ) ಸಿದ್ಧಾಂತವನ್ನು ನಂಬಿಕೊಂಡು ಬೆಳೆದಿದ್ದೇನೆ. ನಾನು ನನ್ನ ಸಿದ್ಧಾಂತವನ್ನು ಕೆಲವು ಪದಗಳಲ್ಲಿ ವಿವರಿಸಲು ಹೋದರೆ, ನಾನು ‘ದೇಶ ಮೊದಲು’ ಎಂದು ಹೇಳುತ್ತೇನೆ. ‘ದೇಶ ಮೊದಲು’ ಎಂಬ ಅಡಿಬರಹಕ್ಕೆ ಸರಿಹೊಂದುವ ಯಾವುದೂ ನನ್ನನ್ನು ಸಿದ್ಧಾಂತ ಮತ್ತು ಸಂಪ್ರದಾಯದ ಸಂಕೋಲೆಯಲ್ಲಿ ಬಂಧಿಸುವುದಿಲ್ಲ. ಇದು ನಮ್ಮನ್ನು ಮುಂದೆ ಸಾಗುವಂತೆ ಮಾಡಿತು. ಹಳೆಯದನ್ನು ಬಿಟ್ಟು ಹೊಸದನ್ನು ಸ್ವೀಕರಿಸಲು ನಾನು ಸಿದ್ಧ. ಹಾಗಿದ್ದೂ, ಯಾವುದೇ ಪರಿಸ್ಥಿತಿಯಲ್ಲೂ, ‘ರಾಷ್ಟ್ರದ ಮೊದಲು’ ಎಂದು ಪ್ರದಾನಿ ಮೋದಿ ಹೇಳಿದರು.

“ನನ್ನ ಜೀವನ ನನ್ನಿಂದ ನಿರ್ಮಾಣವಾಗುಲ್ಲ. ಪರಿಸ್ಥಿತಿಯ ಕಾರಣದಿಂದ ಆಗಿದೆ. ನನ್ನ ಬಾಲ್ಯದಲ್ಲಿ ನಾನು ಬದುಕಿದ ರೀತಿಯ ಜೀವನವು ನನಗೆ ಬಹಳಷ್ಟು ವಿಷಯಗಳನ್ನು ಕಲಿಸಿದೆ. ಒಂದು ರೀತಿಯಲ್ಲಿ, ಜೀವನ ನನ್ನ ದೊಡ್ಡ ವಿಶ್ವವಿದ್ಯಾಲಯವಾಗಿತ್ತು. ಸಮಸ್ಯೆಗಳ ವಿಶ್ವವಿದ್ಯಾಲಯ ನನಗೆ ಬಹಳಷ್ಟು ಕಲಿಸಿದೆ ಮತ್ತು ನಾನು ಕಷ್ಟವನ್ನು ಪ್ರೀತಿಸಲು ಕಲಿತಿದ್ದೇನೆ. ತಾಯಿ ಮತ್ತು ಸಹೋದರಿಯರು ಎರಡು ಮೂರು ಕಿಲೋಮೀಟರ್‌ಗಳವರೆಗೆ ತಮ್ಮ ತಲೆಯ ಮೇಲೆ ಮಡಕೆಯನ್ನು ಹೊತ್ತುಕೊಂಡು ನಡೆಯುವುದನ್ನು ನಾನು ನೋಡಿದ ಪರಿಸ್ಥಿತಿಯಿಂದ ನಾನು ಬಂದಿದ್ದೇನೆ … ನನ್ನ ಚಟುವಟಿಕೆಗಳು ಸಹಾನುಭೂತಿಯ ಪರಿಣಾಮವಾಗಿದೆ. ಯೋಜನೆಗಳು ಅಥವಾ ನೀತಿಗಳು ಮೊದಲೇ ಜಾರಿಯಲ್ಲಿದ್ದವು, ನಾನು ಅದನ್ನು ಅಲ್ಲಗಳೆಯುವುದಿಲ್ಲ. ಹಾಗಿದ್ದೂ, ಜನರ ಕನಸುಗಳನ್ನು ನನಸಾಗಿಸಲು ನಾನು ಶ್ರಮಿಸುತ್ತೇನೆ,” ಎಂದು ಪ್ರಧಾನಿ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page