Friday, January 17, 2025

ಸತ್ಯ | ನ್ಯಾಯ |ಧರ್ಮ

AI ಪ್ರಚಾರ ಸಾಮಾಗ್ರಿಗಳ ಮೇಲೆ ಲೇಬಲಿಂಗ್ ಕಡ್ಡಾಯಗೊಳಿಸಬೇಕು: EC

ಮತದಾರರ ಅಭಿಪ್ರಾಯಗಳ ಮೇಲೆ ಪ್ರಭಾವ ಬೀರುವ ಕೃತಕ ಬುದ್ಧಿಮತ್ತೆ (AI) ಆಧಾರಿತ ಪ್ರಚಾರ ಸಾಮಾಗ್ರಿಗಳ ಬಳಕೆಯಲ್ಲಿ ರಾಜಕೀಯ ಪಕ್ಷಗಳು ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿರಬೇಕು ಎಂದು ಭಾರತದ ಚುನಾವಣಾ ಆಯೋಗವು ನಿರ್ದೇಶಿಸಿದೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ರಚಿಸಲಾದ ಚಿತ್ರಗಳು, ವೀಡಿಯೊಗಳು ಮತ್ತು ಆಡಿಯೊಗಳ ಮೇಲೆ AI ರಚಿತ/ಡಿಜಿಟಲ್ ಎನ್‌ಹಾನ್ಸಡ್/ಸಿಂಥೆಟಿಕ್ ಕಂಟೆಂಟ್‌ ರೀತಿಯ ಪ್ರಚಾರ ಸಾಮಾಗ್ರಿಗಳಿಗೆ ಕಡ್ಡಾಯ ಲೇಬಲಿಂಗ್ ಅನ್ನು ಕಡ್ಡಾಯಗೊಳಿಸುವ ನಿಯಮವನ್ನು ಚುನಾವಣಾ ಆಯೋಗ ವಿಧಿಸಿದೆ.

ಕೃತಕ ಬುದ್ಧಿಮತ್ತೆ ಮತ್ತು ಡೀಪ್‌ಫೇಕ್‌ಗಳಿಂದಾಗಿ ಸುಳ್ಳು ಮಾಹಿತಿ ಹರಡುವ ಸಾಧ್ಯತೆ ಹೆಚ್ಚು ಎಂದು ಮುಖ್ಯ ಚುನಾವಣಾ ಅಧಿಕಾರಿ ರಾಜೀವ್ ಕುಮಾರ್ ಇತ್ತೀಚೆಗೆ ಎಚ್ಚರಿಸಿದ್ದರು. ಈ ತಪ್ಪು ಮಾಹಿತಿಯು ಚುನಾವಣಾ ಪ್ರಕ್ರಿಯೆಯ ಮೇಲಿನ ವಿಶ್ವಾಸವನ್ನು ಕುಗ್ಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ, ಚುನಾವಣಾ ಆಯೋಗವು ಕಳೆದ ವರ್ಷ ಲೋಕಸಭಾ ಚುನಾವಣೆಯ ಸಮಯದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳ ಬಳಕೆಯ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು.

ಫೆಬ್ರವರಿ 5ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಡಿಜಿಟಲ್ ಪ್ರಚಾರಕರನ್ನು ನೇಮಿಸಿಕೊಂಡಿವೆ. ಈ ಸಂದರ್ಭದಲ್ಲಿ, ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಡಿಸ್ಕ್ಲೈಮರ್ ಕಡ್ಡಾಯಗೊಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page