Tuesday, January 21, 2025

ಸತ್ಯ | ನ್ಯಾಯ |ಧರ್ಮ

ಪೊಲೀಸರ ತೀವ್ರ ಕಾರ್ಯಾಚರಣೆ: ಶಂಕಿತ ಮಾವೋವಾದಿಗಳ ಹ*ತ್ಯೆ

ಒಡಿಶಾ ಮತ್ತು ಛತ್ತೀಸ್ಗಢ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಒಡಿಶಾ ಗಡಿಯಲ್ಲಿ ಸೋಮವಾರ ತಡರಾತ್ರಿ ಮತ್ತು ಮಂಗಳವಾರ ಮುಂಜಾನೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 14 ಶಂಕಿತ ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಒಡಿಶಾದ ನುವಾಪಾಡಾ ಜಿಲ್ಲೆಯ ಗಡಿಯಿಂದ ಕೇವಲ 5 ಕಿ.ಮೀ ದೂರದಲ್ಲಿರುವ ಛತ್ತೀಸ್ಗಢದ ಕುಲಾರಿಘಾಟ್ ಮೀಸಲು ಅರಣ್ಯದಲ್ಲಿ ಹೆಚ್ಚಿನ ಸಂಖ್ಯೆಯ ಮಾವೋವಾದಿಗಳು ಇರುವ ಬಗ್ಗೆ ಗುಪ್ತಚರ ಮಾಹಿತಿಯ ನಂತರ ಈ ಕಾರ್ಯಾಚರಣೆ ನಡೆದಿದೆ.

ಜನವರಿ 19 ರ ರಾತ್ರಿಯಿಂದಲೇ ಜಂಟಿ ಕಾರ್ಯಾಚರಣೆ ನಡೆಸಿದ ಉಭಯ ರಾಜ್ಯಗಳ ಪೊಲೀಸರು ಮಾವೋವಾದಿಗಳ ವಿರುದ್ಧ ಸಮರ ಸಾರಿದ್ದಾರೆ. ಅದರ ಪರಿಣಾಮವಾಗಿ ಮಂಗಳವಾರ ಮುಂಜಾನೆ ಶಂಕಿತ ಮಾವೋವಾದಿಗಳ ಹತ್ಯೆಯಾಗಿದೆ.

“ಈ ಪ್ರದೇಶದಲ್ಲಿ ಪೊಲೀಸರಿಂದ ಭಾರಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಮತ್ತು ಮಾವೋವಾದಿಗಳ ವಿರುದ್ಧದ ಜಂಟಿ ಕಾರ್ಯಾಚರಣೆ ಮುಂದುವರಿಯುತ್ತದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಡಿಶಾದ ಭದ್ರತಾ ಪಡೆಗಳ ನಡುವಿನ ಜಂಟಿ ಅಂತರರಾಜ್ಯ ಕಾರ್ಯಾಚರಣೆಯಲ್ಲಿ 2025 ರಲ್ಲಿ ಇದುವರೆಗೆ 14 “ಮಾವೋವಾದಿಗಳು” ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page