Tuesday, January 21, 2025

ಸತ್ಯ | ನ್ಯಾಯ |ಧರ್ಮ

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಪೊಲೀಸರು, ಆಸ್ಪತ್ರೆಗೆ ಕೋರ್ಟ್ ಛೀಮಾರಿ

ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ಆತ್ಮಹತ್ಯೆ ಎಂದು ಬಿಂಬಿಸಿ ಮುಚ್ಚಿಡಲು ಯತ್ನಿಸಿದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧಿಕಾರಿಗಳು ಹಾಗೂ ಪೊಲೀಸರಿಗೆ ಕೋಲ್ಕತ್ತಾ ನ್ಯಾಯಾಲಯ ಜನವರಿ 21, 2025 ಸೋಮವಾರದಂದು ಛೀಮಾರಿ ಹಾಕಿದೆ ಎಂದು ಲೈವ್ ಲಾ ವರದಿ ಮಾಡಿದೆ.

2024 ರ ಆಗಸ್ಟ್‌ನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದ ಮೇಲೆ ಅಪರಾಧಿಯಾಗಿದ್ದ ಮಾಜಿ ನಾಗರಿಕ ಪೊಲೀಸ್ ಸ್ವಯಂಸೇವಕ ಸಂಜಯ್ ರಾಯ್‌ಗೆ ಸೀಲ್ದಾ ಸಿವಿಲ್ ಮತ್ತು ಕ್ರಿಮಿನಲ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ರಾಯ್ ಅವರನ್ನು ದೋಷಿ ಎಂದು ಘೋಷಿಸುವ ತನ್ನ 172 ಪುಟಗಳ ತೀರ್ಪಿನಲ್ಲಿ, ತನಿಖೆಯಲ್ಲಿ ಪೊಲೀಸರು ಲೋಪವೆಸಗಿದ್ದಾರೆ ಮತ್ತು ಘಟನೆಯನ್ನು ಮುಚ್ಚಿಹಾಕಲು ಆಸ್ಪತ್ರೆಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ನ್ಯಾಯಾಲಯ ಟೀಕಿಸಿದೆ.

“ಕಟ್ಟಕಡೆಯ ಅಧಿಕಾರಿಗಳೂ ಸೇರಿದಂತೆ, ಆಸ್ಪತ್ರೆಯ ಪ್ರಾಧಿಕಾರದ ಮೇಲೆ ಯಾವುದೇ ಪರಿಣಾಮಗಳು ಬೀರಬಾರದು ಎಂದು ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಪರಿಗಣಿಸಲು ಯಾವುದೇ ಸಂದೇಹವಿಲ್ಲ,” ಎಂದು ನ್ಯಾಯಾಲಯ ಹೇಳಿದೆ.

“ಕಿರಿಯ ವೈದ್ಯರು ಪ್ರತಿಭಟನೆಯನ್ನು ನಡೆಸಿ ಪ್ರಾಂಶುಪಾಲರಿಗೆ ಒಂದು ಮನವಿ ಪತ್ರವನ್ನು ಸಲ್ಲಿಸಿದ್ದರಿಂದ ಪ್ರಾಧಿಕಾರದ ಈ ‘ಅಕ್ರಮ ಕನಸು’ ನನಸಾಗಿಲ್ಲ ಎಂಬುದು ಪ್ರಕರಣದ ದಾಖಲೆಯಿಂದ ತೋರುತ್ತದೆ. ಆ ಸಮಯದಲ್ಲಿ, ಪೊಲೀಸ್ ಪಡೆ ತನ್ನ ಕ್ರಮವನ್ನು ತೆಗೆದುಕೊಳ್ಳಲು ಪ್ರಾರಂಭಿಸಿತು, ಆದರೆ ಅದು ಸಾಕಷ್ಟು ವಿಳಂಬ ಮಾಡಿತು. ಬಹುಶಃ ಸಂತ್ರಸ್ತೆಯ ಪೋಷಕರಿಗೆ ತಮ್ಮ ಮಗಳನ್ನು ನೋಡಲು ಅವಕಾಶ ನೀಡದಿರಲು ಇದು ಕಾರಣವಾಗಿದೆ,” ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಆ ದಿನ ಬೆಳಗ್ಗೆ ಘಟನೆ ವರದಿಯಾಗಿದ್ದರೂ, ಆಗಸ್ಟ್ 9ರಂದು ರಾತ್ರಿ 11.30ರ ನಂತರ ಎಫ್‌ಐಆರ್ ಏಕೆ ಸಲ್ಲಿಸಲಾಗಿದೆ ಎಂದೂ ನ್ಯಾಯಾಲಯ ಪ್ರಶ್ನಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಕಿರಿಯ ವೈದ್ಯೆ ಆಸ್ಪತ್ರೆಯ ಆವರಣದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು .

ಪಶ್ಚಿಮ ಬಂಗಾಳದ ಜೂನಿಯರ್ ಡಾಕ್ಟರ್ಸ್ ಫ್ರಂಟ್ ಹಲವು ವಾರಗಳವರೆಗೆ ಹಿರಿಯ ಅಧಿಕಾರಿಗಳ ರಾಜೀನಾಮೆ ಒತ್ತಾಯಿಸಿ ಮತ್ತು ಪಶ್ಚಿಮ ಬಂಗಾಳದ ವೈದ್ಯಕೀಯ ಕೇಂದ್ರಗಳಲ್ಲಿನ “ಗೂಂಡ ಸಂಸ್ಕೃತಿ” ಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಿತು.

ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ವೈದ್ಯರ ಶವ ಪತ್ತೆಯಾದ ಮರುದಿನ, ಆಗಸ್ಟ್ 10 ರಂದು ರಾಯ್ ನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದರು.

ಮೂರು ದಿನಗಳ ನಂತರ, ಕಲ್ಕತ್ತಾ ಹೈಕೋರ್ಟ್ ಈ ವಿಷಯವನ್ನು ತನಿಖೆ ಮಾಡಲು ಕೇಂದ್ರೀಯ ತನಿಖಾ ದಳಕ್ಕೆ ಆದೇಶಿಸಿತು .

ಅಕ್ಟೋಬರ್ 7 ರಂದು ಈ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿದ ನಂತರ ನ್ಯಾಯಾಲಯವು ದೈನಂದಿನ ವಿಚಾರಣೆಯನ್ನು ನಡೆಸಿತು. ರಾಯ್ ಯನ್ನು ನಿರಪರಾಧಿ ಎಂದು ಹೇಳಿತು.

ನ್ಯಾಯಕ್ಕಾಗಿ ವೈದ್ಯರು ನಡೆಸಿದ ಪ್ರತಿಭಟನೆ ಆಗಸ್ಟ್‌ನಲ್ಲಿ ಭುಗಿಲೆದ್ದ ನಂತರ, ಕೋಲ್ಕತ್ತಾ ಪೊಲೀಸರು ಹಲವಾರು ದಿನಗಳವರೆಗೆ ವೈದ್ಯಕೀಯ ಸಂಸ್ಥೆಯ ಹೊರಗೆ ಜನಸಂದಣಿಯನ್ನು ಒಟ್ಟುಗೂಡಿಸದಂತೆ ನಿಷೇಧಾಜ್ಞೆಗಳನ್ನು ವಿಧಿಸಿದರು. ಆಗಸ್ಟ್ 15 ರಂದು, 5,000 ರಿಂದ 7,000 ಜನರ ಗುಂಪೊಂದು ಆಸ್ಪತ್ರೆಯ ಆವರಣಕ್ಕೆ ನುಗ್ಗಿ ಧ್ವಂಸಗೊಳಿಸಿತು. ವೈದ್ಯರು ಸೇರಿದಂತೆ ಪ್ರತಿಭಟನಾಕಾರರ ಮೇಲೆ ಗುಂಪು ಹಲ್ಲೆ ನಡೆಸಿತು.

ಘಟನೆಯ ವಿರುದ್ಧ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮುಷ್ಕರ ನಡೆಸಿದ್ದರಿಂದ ಪಶ್ಚಿಮ ಬಂಗಾಳದಾದ್ಯಂತ ಹಲವಾರು ವಾರಗಳ ಕಾಲ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರಿತು.

ಕೇಂದ್ರೀಯ ತನಿಖಾ ದಳವು ಈ ಪ್ರಕರಣದಲ್ಲಿ ನಡೆದಿರುವ ಸಾಕ್ಷ್ಯಾಧಾರಗಳನ್ನು ತಿರುಚುವಿಕೆ ಮತ್ತು ವೈದ್ಯಕೀಯ ಸೌಲಭ್ಯದಲ್ಲಿ ನಡೆದಿರುವ ಆಪಾದಿತ ಭ್ರಷ್ಟಾಚಾರವನ್ನು ಪ್ರತ್ಯೇಕವಾಗಿ ಪರಿಶೀಲಿಸುತ್ತಿದೆ. ಪ್ರಕರಣದ ಆರೋಪಿಗಳಲ್ಲಿ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ತಾಲಾ ಪೊಲೀಸ್ ಠಾಣೆಯ ಮಾಜಿ ಅಧಿಕಾರಿ ಸೇರಿದಂತೆ ಇತರರು ಸೇರಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page