Tuesday, January 21, 2025

ಸತ್ಯ | ನ್ಯಾಯ |ಧರ್ಮ

ಕಾಫಿ ಕಳ್ಳತನ ಮಾಡಿದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಹಲ್ಲೆ ಬೆದರಿಕೆ – ನ್ಯಾಯ ಕೊಡಿಸುವಂತೆ ಮನವಿ

ಹಾಸನ: ಜಮೀನಿನಲ್ಲಿ ಕಾಫಿ ಕದ್ದು ಕೂಯ್ದ ಬಗ್ಗೆ ಪ್ರಶ್ನೆ ಮಾಡಿದಾಗ ನಮ್ಮ ಮೇಲೆ ಹಲ್ಲೆ ಮತ್ತು ಅಟ್ರಾಸಿಟಿ ಹಾಕುವುದಾಗಿ ಬೆದರಿಕೆ ಹಾಕಲಾಗುತ್ತಿದ್ದು, ನಮಗೆ ನ್ಯಾಯಕೊಡಿಸಬೇಕೆಂದು ಕೊಡಗಲವಾಡಿ ಗ್ರಾಮದ ಅಕ್ಷತಾ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಅಕ್ಷತಾ ಕೊಡಗಲವಾಡಿ ಯಾದ ನಾನು ಸುಮಾರು 7-8 ವರ್ಷಗಳಿಂದ ಆಲೂರು ತಾಲೂಕಿನ ಕೊಡಗಲವಾಡಿ ಗ್ರಾಮದ ಸರ್ವೆ ನಂ 17/2 ರಲ್ಲಿ ನಮ್ಮ ಮನೆಯಲ್ಲಿ ವಾಸವಾಗಿರುತ್ತೇನೆ.

ಮನೆಯ ಪಕ್ಕದಲ್ಲೇ ಕಾಫಿ ಗಿಡಗಳಿದ್ದು, ಅದರ ಕಾಫಿ ಹಣ್ಣನ್ನು ನನ್ನ ಚಿಕ್ಕಮ್ಮ ಕುಯ್ಯುತಿದ್ದಾಗ ಪಕ್ಕದ ತೋಟದ ಮಂಜುನಾಥ್ ಎಂಬುವವರ ಅಣ್ಣ ಕಾಂತಾ ಮತ್ತು ಅವರ ಮಗ ಬಾಲರಾಜ್ ಎಂಬುವವರು ಅಲ್ಲಿಗೆ ಬಂದು ನನ್ನ ಚಿಕ್ಕಮ್ಮನಿಗೆ ಅವ್ಯಾಚ ಶಬ್ದಗಳಿಂದ ಬೈದು ಅವರು ಅದಕ್ಕೆ ಯಾಕೆ ಎಂದು ಕೇಳುವಾಗ ಅವರ ತಲೆ ಕೂದಲಿಗೆ ಕೈ ಹಾಕಿ ಮುಡಿ ಎಳೆದಾಡುತ್ತಿದ್ದಾಗ ಅವರು ಕಿರುಚಡುತಿದ್ದನ್ನು ಕಂಡು ನಾನು ಮನೆಯಿಂದ ಹೋಗಿ ಬಿಡಿಸಲು ಯತ್ನಿಸಿದಾಗ ನನ್ನ ಮೇಲೂ ಹಲ್ಲೆ ಮಾಡಿ ನನ್ನನ್ನು ಕೆಳಗೆ ತಳ್ಳಿ ಬೀಳಿಸಿರುತ್ತಾರೆ ಎಂದು ದೂರಿದರು.

ಅಲ್ಲೇ ಬಿದ್ದಾಗ ರಕ್ತಸ್ರಾವ ಉಂಟಾಗಿದ್ದು, ಅಲ್ಲಿಂದ ತಪ್ಪಿಸಿಕೊಂಡು ಹೊರಬರುವಾಗ ನನ್ನನ್ನು ಅವ್ಯಚ್ಯಾ ಶಬ್ದಗಳಿಂದ ನಿಂದಿಸಿ ನಿನ್ನ ಮನೆಯನ್ನು ಪುಡಿ ಮಾಡುವುದಾಗಿ ಮತ್ತು ಮುಂದೆ ನಾವು ಅವರು ಹೇಳಿದಂತೆ ಕೆಳದಿದ್ದರೆ ಅಟ್ರಾಸುಟಿ ಕೇಸ್ ಮಾಡಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ ಮತ್ತು ಅಲ್ಲೇ ಇದ್ದ 6-7 ಕಾಫಿ ಮೂಟೆಯ ಚೀಲಾಗಳನ್ನು ತೆಗೆದುಕೊಂಡು ಮುಂದೆ ನಾವು ಹೇಳಿದಂತೆ ಕೆಳದಿದ್ದರೆ ಇಲ್ಲಿರುವ ಗಿಡಗಳನ್ನು ಕಡಿದು ಬೆಂಕಿಗೆ ಹಾಕುತ್ತೆನೆಂದು ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಇದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ ಹೋಗಿದ್ದು, ಆಲೂರು ಪೊಲೀಸ್ ಸ್ಟೇಷನ್ ಅಲ್ಲಿ ಸುಮಾರು 2 ಗಂಟೆಗೆ ದೂರು ದಾಖಲಾಯಿಸಲು ಹೋದಾಗ ನಮ್ಮ ದೂರನ್ನು ತೆಗೆದುಕೊಳ್ಳದೆ 2 ಗಂಟೆಯವರೆಗೂ ಕಾಯಿಸಿರುತಾರೆ. ನನಗೆ ಹಲ್ಲೆ ಮಾಡಿದ ವ್ಯಕ್ತಿ ಬರುತ್ತಿದ್ದಾರೆ ಇರಿ ಎಂದು ಹೇಳಿದ್ದಾರೆ. ನಂತರ ನನಗೆ ಹೊಟ್ಟೆ ನೋವಾಗಿದೆ ಮತ್ತು ಸುಸ್ತು ಅಗುತಿದೆ ಹಾಗಾಗಿ ದೂರು ದಾಖಲಾಯಿಸಲು ತಡವಾದರೆ ಹಿಂಬಾರ ಕೊಡಿ ಎಂದು ಹೇಳಿದಾಗ ನನ್ನ ಚಿಕ್ಕಮ್ಮನಾ ದೂರನ್ನು ತೆಗೆದುಕೊಂಡು ಎಫ್.ಐ.ಆರ್. ಮಾಡುತ್ತಾರೆ.

ನಂತರ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವೈದ್ಯರು ನಿಮಗೆ ಪೆಟ್ಟು ಬಿದ್ದಿದ್ದರಿಂದ ಮತ್ತು ಮಾನಸಿಕ ಒತ್ತಡದಿಂದ ಹೀಗಾಗಿದೆ ಎಂದು ಎಂ.ಎಲ್.ಸಿ. ಮಾಡಿರುತಾರೆ. ನನ್ನ 17/2 ರಲ್ಲಿ ನ್ಯಾ ಲೋನ್ ಗಳಿದ್ದು ಪ್ರತಿ ವರ್ಷ ನನ್ನ ಜಾಗದ ಕಾಫಿ ಹಣ್ಣು ಕುಯುತಿದ್ದಾರೆ ಮುಂದೆ ನನ್ನ ತರ ರೈತರು ಹೇಗೆ ಜೀವನ ಮಾಡುವುದೆಂದು ಪ್ರಶ್ನೆ ಮಾಡಿದರು. ನಾನು ಒಬ್ಬ ಜನಪ್ರತಿನಿಧಿಯಾಗಿ ಒಬ್ಬ 20 ರಿಂದ 25 ವರ್ಷದ ಹುಡುಗ ಹೀಗೆ ಮಾಡಿದ್ದಾರೆ ಮುಂದಿನ ಆಗುಹೋಗುಗಳನ್ನು ಗಮನಿಸಿ ದೂರು ಕೊಟ್ಟಿರುತೇವೆ. ನಾನು ಅಟ್ರಾಸಿಟಿ ವಿರೋಧಿ ಅಲ್ಲ. ಇದರ ದುರುಪಯೋಗದ ವಿರೋಧಿ ಎಂದು ಹೇಳಿದರು. ಇವುಗಳನೆಲ್ಲ ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ಗಮನಿಸಿ ನ್ಯಾಯ ಕೊಡಿಸಬೇಕಾಗಿ ಮನವಿ ಮಾಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page