Tuesday, January 28, 2025

ಸತ್ಯ | ನ್ಯಾಯ |ಧರ್ಮ

ಬಡ್ಡಿ, ಚಕ್ರಬಡ್ಡಿ ವ್ಯಕ್ತಿ ಪ್ರಾಣ ಬಿಟ್ಟರು ಸಾಲಗಾರರು ಬಿಡುತ್ತಿಲ್ಲ

ತುಮಕೂರು : ಮೈಕ್ರೋ ಫೈನಾನ್ಸ್ (Microfinance) ಕಂಪನಿಗಳು ಸಾಲ ವಸೂಲಿ ನೆಪದಲ್ಲಿ ಸಾಲಗಾರರನ್ನು ಇನ್ನಿಲ್ಲದಂತೆ ಕಾಡಿ ಕಂಗೆಡಿಸಿವೆ. ಸಾಕಷ್ಟು ಜನರ ಪ್ರಾಣಕ್ಕೆ ಕಂಟಕವಾಗಿವೆ. ಜೀವ ಹಿಂಡುವ ಇಂತಹ ಪೈನಾನ್ಸ್ ಕಂಪನಿಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಕಾನೂನು ತಿದ್ದುಪಡಿಗೆ ತುರ್ತಾಗಿ ಸುಗ್ರೀವಾಜ್ಞೆ ರೂಪಿಸಲು ಸರ್ಕಾರ ಮುಂದಾಗಿದೆ. ಈ ನಡುವೆ ಪೊಲೀಸ್ ಇಲಾಖೆ ಕೂಡ ಎಚ್ಚೆತ್ತುಕೊಂಡು ಕೆಲಸ ಮಾಡುತ್ತಿದ್ದರು ಕೂಡ ಸಾಮಾನ್ಯ ಜನರಿಗೆ ಈ ಬಡ್ಡಿ ದಂದೆಕೋರರ ಹಾವಳಿ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ, ಇದರ ನಡುವೆ ತುಮಕೂರಿನಲ್ಲಿ ಸಾಲದ ಸುಳಿಯಲ್ಲಿ ವ್ಯಕ್ತಿ ಸತ್ತಿದ್ದರು ಮೆನಯ ಹತ್ತಿರ ಬಂದು ಪೀಡಿಸುತ್ತಿದ್ದರಿಂದ ಪೋಲೀಸರ ಮೊರೆ ಹೋಗಿದ್ದಾರೆ.

4.66 ಲಕ್ಷ ಸಾಲಕ್ಕೆ 7.20 ಲಕ್ಷ ರೂಪಾಯಿ ಬಡ್ಡಿ 7.20 ಲಕ್ಷ ಬಡ್ಡಿ ಕಟ್ಟಿದರೂ ತೀರದ ಅಸಲು. ಸಾಲಗಾರ ಸತ್ತರು ಕುಟುಂಬಸ್ಥರಿಗೆ ನಿಲ್ಲದ ಕಿರುಕುಳ ಸಾಲ ಕಟ್ಟುವಂತೆ ಪೀಡಿಸುತ್ತಿರುವ ಖಾಸಗಿ ಫೈನಾನ್ಸ್‌ ಕಂಪನಿ ಹೌದು ತುಮಕೂರಿನಲ್ಲಿ ಖಾಸಗಿ ಫೈನಾನ್ಸ್‌ ಕಂಪನಿ ಕೈಗೆ ಸಿಲುಕಿ ನರಳುತ್ತಿರುವ ಕುಟುಂಬದ ಕಥೆ ಇದು
ತುಮಕೂರಿನ ಲೇಬರ್‌ ಕಾಲೋನಿ ವಾಸಿ ಸೈಯದ್‌ ಸಮಿವುಲ್ಲಾ ಮನೆ ನಿರ್ಮಾಣಕ್ಕಾಗಿ 4.66 ಲಕ್ಷ ರೂಪಾಯಿ ಸಾಲ ಮಾಡಿದ್ದರು ಫೈವ್‌ ಸ್ಟಾರ್‌ ಫೈನಾನ್ಸ್‌ ಕಂಪನಿಯಲ್ಲಿ ಸಾಲ ಮಾಡಿದ್ದ 2019 ಜನವರಿಯಲ್ಲಿ ಸಾಲ ಮಾಡಿದ್ದರು ಸೈಯದ್‌ ಸಮಿವುಲ್ಲಾ.ವರ್ಷಕ್ಕೆ 24.55 % ಬಡ್ಡಿದರಲ್ಲಿ ಸಾಲ. ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಕಟ್ಟುತ್ತಲೇ ಪ್ರಾಣ ಬಿಟ್ಟಿರುತ್ತಾರೆ ಸಮಿವುಲ್ಲಾ.

2024 ಮೇನಲ್ಲಿ ಹೃದಯಾಘಾತದಿಂದ ಸೈಯದ್‌ ಸಮಿವುಲ್ಲಾ ಸಾವನ್ನಪ್ಪಿರುತ್ತಾರೆ ಸೈಯದ್‌ ಸತ್ತರು ಬಿಡದ ಫೈನಾನ್ಸ್‌ ಕಂಪನಿ. ಸೈಯದ್‌ ಕುಟುಂಬಕ್ಕೆ ಸಾಲ ಕಟ್ಟುವಂತೆ ಕಿರುಕುಳ ನೀಡುತ್ತಲೆ ಬಂದಿದ್ದಾರೆ.ಸೈಯದ್‌ ಮನೆ ಮುಂದೆ ಹೋಗಿ ಗಲಾಟೆ ಮಾಡುವ ಸಿಬ್ಬಂದಿಗಳು. ಲಾಯರ್‌ ಜೊತೆ ಹೋಗಿ ಮನೆ ಮುಂದೆ ಬೆದರಿಕೆ ಹಾಕುವುದು. ಐದು ವರ್ಷದಿಂದ ಬಡ್ಡಿ, ಚಕ್ರಬಡ್ಡಿ ಕಟ್ಟಿಸಿಕೊಳ್ಳುತ್ತಿರುವ ಕಂಪನಿ ಇದೀಗ ಕುಟುಂಬಸ್ಥರಿಗು ತೊಂದರೆ ನೀಡುತ್ತಿರುವುದು ಶೋಚನೀಯ ಸಂಗತಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page