Friday, January 31, 2025

ಸತ್ಯ | ನ್ಯಾಯ |ಧರ್ಮ

ದೇಶದ ಸೌಹಾರ್ದ ಪರಂಪರೆಗೆ ದೊಡ್ಡ ಅಪಾಯ ಎದುರಾಗಿದೆ – ಪ್ರೊ. ಕೆ. ಎಂ. ವೀರಯ್ಯ

ಹಾಸನ : ದೇಶದ ಬಹುತ್ವವನ್ನು ರಕ್ಷಿಸುವ ಮೂಲಕ ಮಹಾತ್ಮ ಗಾಂಧಿ ತತ್ವಾದರ್ಶ ಉಳಿಸಬೇಕಿದೆ ಎಂದು ಗಾಂಧಿ ಹುತಾತ್ಮ ದಿನದ ಅಂಗವಾಗಿ ‘ಸೌಹಾರ್ದ ಕರ್ನಾಟಕ’ ವತಿಯಿಂದ‌ ನಡೆದ ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಎಂ. ವೀರಯ್ಯ ಮಾತನಾಡಿದರು.
ಸೌಹಾರ್ದ ಕರ್ನಾಟಕದ ವತಿಯಿಂದ ಜನವರಿ 30 (ಗುರುವಾರ) ರಂದು‌ ಸಂಜೆ ಹಾಸನದ ಎಂ.ಜಿ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಮಹಾತ್ಮ ಗಾಂಧೀಜಿ ಹುತಾತ್ಮ ದಿನದ ಅಂಗವಾಗಿ ನಡೆದ ‘ಗಾಂಧಿ ಕನಸಿನ ಸೌಹಾರ್ದ ಭಾರತ’


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶದ ಸ್ವಾತಂತ್ರ್ಯ ಚಳುವಳಿಯ ನೇತಾರರಾಗಿ ಭಾರತವನ್ನು ಬ್ರಿಟೀಷ್ ಸಾಮ್ರಾಜ್ಯಶಾಹಿಗಳಿಂದ ವಿಮೋಚನೆಗೊಳಿಸಿದ ಗಾಂಧೀಜಿಯವರು ಭಾರತದ ಬಹುತ್ವ ಸಂಸ್ಕೃತಿ, ಜಾತ್ಯಾತೀತ ಪ್ರಜಾಪ್ರಭುತ್ವ ಮತ್ತು ಸೌಹಾರ್ದತೆಯ ಪರಂಪರೆಯ ರಕ್ಷಣೆ ಉಳಿವಿಗಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದರು. ಆದರೆ ಇಂದು ದೇಶದ ಈ ಪರಂಪರೆಗೆ ದೊಡ್ಡ ಅಪಾಯ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗಾಂಧೀಜಿವರ ತತ್ವ ಮತ್ತು ಅವರು ನಂಬಿದ ಬಹುತ್ವದಲ್ಲಿ ಏಕತೆಯ ಆಧಾರದಲ್ಲಿ ದೇಶವನ್ನು ಕಟ್ಟಬೇಕಿದೆ ಎಂದು ನುಡಿದರು.

ಪ್ರಾಂಶುಪಾಲೆ ಡಾ. ಕೆ. ಜಿ ಕವಿತಾರವರು ಮಾತನಾಡಿ ನಾವುಗಳು ಗಾಂಧೀಜಿಯವರ ಮೌಲ್ಯ, ಜೀವನಾದರ್ಶಗಳನ್ನು ಮೈಗೂಡಿಸಿಕೊಳ್ಳುವುದು ಮತ್ತು ಮಕ್ಕಳಿಗೆ ಅವರ ವಿಚಾರಗಳನ್ನು ತಿಳಿಸುವುದು ಈ ಕಾಲದ ಅತ್ಯಗತ್ಯ ಎಂದರು.ಕಾರ್ಯಕ್ರಮದಲ್ಲಿ ಹಿರಿಯ ಚಿಂತಕ, ಪತ್ರಕರ್ತ ಆ.ಪಿ ವೆಂಕಟೇಶ್ ಮೂರ್ತಿ, ಉಪನ್ಯಾಸಕ ರೋಹಿತ್ ಅಗಸರಹಳ್ಳಿ, ಇರ್ಷಾದ್ ಅಹಮದ್ ದೇಸಾಯಿ, ಹಿರಿಯ ದಲಿತ ಮುಖಂಡರಾದ ಎಚ್. ಕೆ ಸಂದೇಶ್, ಅಹಮದ್ ಅಗರೆ ಮಾತನಾಡಿದರು.
‘ಸೌಹಾರ್ದ ಕರ್ನಾಟಕ’ ವೇದಿಕೆ ಸಂಚಾಲಕರಾದ ಎಂ.ಜಿ ಪೃಥ್ವಿರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಶೈಲಾ ಸಿದ್ದರಾಮಪ್ಪ ಗಾಂಧಿಜಿಯವರ ಅಶ್ವತರ್ಪಣ ಹುತಾತ್ಮ ಹಾಡಿದರು. ಜಯಶಂಕರ್ ಬೆಳಗುಂಬ, ವಾಣಿ ನಾಗೇಂದ್ರ, ವಸಂತ್ ಕುಮಾರ್ ಸೌಹಾರ್ದ ಗೀತೆಗಳನ್ನಾಡಿದರು.ಡಾ. ಶಾಂತ ಅತ್ನಿ, ಮಂಜುಳಾ ಕುಮಾರಸ್ವಾಮಿ, ಡಾ. ಕುಸುಮ, ನಾಜಿಮಾ, ಪರಮೇಶ್ ಮಡಬಲು, ಪ್ರಜ್ವಲ್ ಕೌಡಳ್ಳಿ ಭಾನುಮಾತಿ, ಗಿರಿಜಾ ನಿರ್ವಾಣಿ ಯವರುಗಳು ಕವಿತೆಗಳನ್ನು ವಾಚಿಸಿದರು.

ಬೆಳಗ್ಗೆ ಗಾಂಧಿ ಭವನದಲ್ಲಿ ಶಾಲಾ ಮಕ್ಕಳಿಗೆ ‘ಗಾಂಧಿ ಕನಸಿನ ಸೌಹಾರ್ದ ಭಾರತ’ ವಿಷಯದಲ್ಲಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ಸುಮಾರುಬ 80 ಜನ ಮಕ್ಕಳು ಉತ್ತಮ ಚಿತ್ರಕಲೆ ಬರೆದಿದ್ದರು. ಚಿತ್ರಕಲಾ ಸ್ಪರ್ಧೆಯನ್ನು ರೈತ ಮುಖಂಡ ಎಚ್. ಆರ್ ನವೀನ್ ಕುಮಾರ್ ಉದ್ಘಾಟಿಸಿದ್ದರು
ಭಾಗವಹಿಸಿದ ಎಲ್ಲ‌ಮಕ್ಕಳಿಗೂ ಚಿತ್ರಕಲಾವಿದ ಬಿ.ಎಸ್ ದೇಸಾಯಿ ಪ್ರಮಾಣ ಪತ್ರ ವಿತರಿಸಿದರು ಈ ಸಂದರ್ಭದಲ್ಲಿ ರಾಜಶೇಖರ್ ಹುಲಿಕಲ್ ಸೇರಿದಂತೆ ಚಿತ್ರಕಲಾ ಶಿಕ್ಷಕರು ಭಾಗವಹಿಸಿದ್ದರು.
ಉತ್ತಮ ಚಿತ್ರಕಲೆ ರಚಿಸಿದ ಮಕ್ಕಳಿಗೆ ಸಂಜೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.

ಸಾಹಿತಿ ರೂಪಾ ಹಾಸನ, ಜ.ನಾ ತೇಜಶ್ರೀ, ಕೆ.ಎಸ್ ರವಿಕುಮಾರ್, ರಾಜಶೇಖರ್ ಹುಲಿಕಲ್, ಬಿ.ಎಸ್ ದೇಸಾಯಿ,ರಾಜು ಗೊರೂರು, ಪರಮಶಿವಯ್ಯ, ಧರ್ಮೇಶ್, ಶಿವಶಂಕರಪ್ಪ, ಅಪ್ಪಾಜಿ ಗೌಡ, ನಾಗರಾಜ್ ಹೆತ್ತೂರು, ಎಮ್.ಬಿ ಪುಷ್ಪ, ಎಸ್ಎಫ್ಐ ರಮೇಶ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page