Saturday, February 1, 2025

ಸತ್ಯ | ನ್ಯಾಯ |ಧರ್ಮ

2025-26ರ ಬಜೆಟ್ ನಲ್ಲಿ ಯಾವ ವಸ್ತುಗಳ ಬೆಲೆ ಏರಿಕೆ, ಯಾವ ವಸ್ತುಗಳ ಬೆಲೆ ಇಳಿಕೆ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025- 26ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಎಂಟನೇ ಬಜೆಟ್ ಆಗಿದ್ದು, ಈ ಬಜೆಟ್ ಮಧ್ಯಮ ವರ್ಗಕ್ಕೆ ವರದಾನವಾಗಲಿದೆಯಾ ಎಂಬುದನ್ನು ನೋಡಬೇಕಿದೆ.

ಮುಖ್ಯವಾಗಿ ಯಾವೆಲ್ಲಾ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ, ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆಯಾಗಿದೆ ಅಂತಾ ನೋಡುವುದಾದರೆ ಈ ಬಾರಿಯ ಬಜೆಟ್ ನಲ್ಲಿ ಮುಖ್ಯವಾಗಿ ಕ್ಯಾನ್ಸರ್ ಹಾಗೂ ಇತರೆ ಅಪರೂಪದ ಕಾಯಿಲೆಗಳಿಗೆ ನೀಡುವ ಅಗತ್ಯ ಔಷಧಿಗಳಿಗೆ ಸುಂಕ ವಿನಾಯಿತಿಯನ್ನು ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಅಗತ್ಯ ಔಷಧಿ ಮಾತ್ರವಲ್ಲದೆ ಹಡಗುಗಳ ನಿರ್ಮಾಣಕ್ಕಾಗಿ ಆಮದು ಮಾಡಿಕೊಳ್ಳುವ ವಸ್ತುಗಳಿಗೂ ಈಗಾಗಲೇ ನೀಡಲಾಗಿರುವ ಸುಂಕ ವಿನಾಯಿತಿಯನ್ನು ಇನ್ನೂ ಹತ್ತು ವರ್ಷಗಳವರೆಗೆ ವಿಸ್ತರಿಸಲಾಗುವುದು ಎಂದಿದ್ದಾರೆ. 

ಇದರೊಂದಿಗೆ ಇಂಟರಾಕ್ಟಿವ್ ಫ್ಲಾಟ್ ಪ್ಯಾನೆಲ್ ಡಿಸ್‌ಪ್ಲೇಯ ಸುಂಕವನ್ನು ಶೇಕಡ 10ರಿಂದ ಶೇಕಡ 20ಕ್ಕೆ ಏರಿಕೆ ಮಾಡಲಾಗಿದೆ.

ಟೆಲಿಕಾಂ ಉಪಕರಣಗಳ ಮೇಲಿನ ಸುಂಕವನ್ನು ಶೇಕಡ 10ರಿಂದ ಶೇಕಡ 15ಕ್ಕೆ ಹೆಚ್ಚಿಸಲಾಗಿದೆ.

ಪ್ಲಾಸ್ಟಿಕ್ ಉಪಕರಣಗಳ ಮೇಲಿನ ಕಸ್ಟಮ್ ಸುಂಕವನ್ನು ಶೇಕಡ 25ರಷ್ಟು ಏರಿಸಲಾಗಿದೆ.

ಇನ್ನು ಯಾವ ವಸ್ತುಗಳ ಬೆಲೆ ಇಳಿಕೆ ಆಗಿದೆ ಅನ್ನೋದನ್ನ ಗಮಸಿದರೆ 

ಮೊಬೈಲ್ ಫೋನ್‌ಗಳು ಮತ್ತು 36 ಔಷಧಿಗಳಿಗೆ ಸುಂಕ ವಿನಾಯಿತಿ, ಎಲೆಕ್ಟ್ರಿಕ್ ವಾಹನಗಳ ಮೇಲೆ ಸುಂಕ ವಿನಾಯಿತಿ, ಎಲ್‌ಇಡಿ ಟಿವಿ ಮತ್ತು ಸ್ವದೇಶಿ ಬಟ್ಟೆಗಳ ಮೇಲಿನ ಸುಂಕವನ್ನು ಇಳಿಸಲಾಗಿದೆ. 

Related Articles

ಇತ್ತೀಚಿನ ಸುದ್ದಿಗಳು

You cannot copy content of this page