Tuesday, February 4, 2025

ಸತ್ಯ | ನ್ಯಾಯ |ಧರ್ಮ

ಪುಣೆಯಲ್ಲಿ ಮತ್ತೆ 5 ಹೊಸ ಗಿಲಿಯನ್ ಬ್ಯಾರೆ ಸಿಂಡ್ರೋಮ್ (GBS) ಪ್ರಕರಣಗಳು ಪತ್ತೆ

ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ಮತ್ತೆ 5 ಹೊಸ ಗಿಲಿಯನ್ ಬ್ಯಾರೆ ಸಿಂಡ್ರೋಮ್ (GBS) ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಮಹಾರಾಷ್ಟ್ರದಲ್ಲಿ ಜಿಬಿಎಸ್‌ ಪ್ರಕರಣಗಳ ಸಂಖ್ಯೆ 163 ಕ್ಕೆ ಏರಿಕೆಯಾಗಿದೆ.

163 ರೋಗಿಗಳಲ್ಲಿ 47 ಜನರನ್ನು ಇಲ್ಲಿಯವರೆಗೆ ಡಿಸ್ಚಾರ್ಜ್‌ ಮಾಡಲಾಗಿದೆ. 47 ರೋಗಿಗಳು ಐಸಿಯುನಲ್ಲಿದ್ದು, 21 ಜನರು ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ. ಪುಣೆ ನಗರದ ವಿವಿಧ ಭಾಗಗಳಿಂದ ಒಟ್ಟು 168 ನೀರಿನ ಮಾದರಿಗಳನ್ನು ರಾಸಾಯನಿಕ ಮತ್ತು ಜೈವಿಕ ವಿಶ್ಲೇಷಣೆಗಾಗಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಎಂಟು ನೀರಿನ ಮೂಲಗಳು ಕಲುಷಿತಗೊಂಡಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಐದು ಹೊಸ ಜಿಬಿಎಸ್‌ ಪ್ರಕರಣಗಳು ಪತ್ತೆಯಾಗಿವೆ. ದೃಢಪಡಿಸಿದ ಜಿಬಿಎಸ್ ಪ್ರಕರಣಗಳ ಸಂಖ್ಯೆ 127 ರಷ್ಟಿದೆ. 163 ಶಂಕಿತ ಪ್ರಕರಣಗಳ ಪೈಕಿ 32 ಪ್ರಕರಣಗಳು ಪುಣೆ ನಗರದಲ್ಲಿಯೇ ಪತ್ತೆಯಾಗಿದೆ. ಪುಣೆ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ಗ್ರಾಮಗಳಲ್ಲಿ 86, ಪಿಂಪ್ರಿ ಚಿಂಚ್ವಾಡದಲ್ಲಿ 18, ಪುಣೆ ಗ್ರಾಮಾಂತರದಲ್ಲಿ 19 ಮತ್ತು ಇತರ ಜಿಲ್ಲೆಗಳಿಂದ 8 ಕೇಸ್‌ಗಳು ಪತ್ತೆಯಾಗಿವೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಜಿಬಿಎಸ್‌ ಎಂಬುದು ಅಪರೂಪದ ಸೋಂಕಾಗಿದ್ದು, ಇದರಲ್ಲಿ ವ್ಯಕ್ತಿಯ ಇಮ್ಯೂನ್‌ ವ್ಯವಸ್ಥೆಯು ಬಾಹ್ಯ ನರಗಳ ಮೇಲೆ ದಾಳಿ ಮಾಡುತ್ತದೆ. ಇದರ ಪರಿಣಾಮವಾಗಿ ಸ್ನಾಯು ದೌರ್ಬಲ್ಯ, ಕಾಲುಗಳು ಅಥವಾ ತೋಳುಗಳಲ್ಲಿ ಸಂವೇದನೆ ಕಳೆದುಕೊಳ್ಳುವುದು ಹಾಗೆಯೇ ನುಂಗಲು ಅಥವಾ ಉಸಿರಾಟದಲ್ಲಿ ತೊಂದರೆಗಳು ಉಂಟಾಗುತ್ತವೆ. ಪ್ರಕರಣ ತೀವ್ರವಾದರೆ ರೋಗಿ ಸಂಪೂರ್ಣ ಪಾರ್ಶ್ವವಾಯುವಿಗೆ ತುತ್ತಾಗಬಹುದು. ವಯಸ್ಕರು ಮತ್ತು ಪುರುಷರಲ್ಲಿ ಜಿಬಿಎಸ್‌ ಹೆಚ್ಚು ಸಾಮಾನ್ಯವಾದ್ದರೂ ಎಲ್ಲಾ ವಯಸ್ಸಿನ ಜನರ ಮೇಲೂ ಪರಿಣಾಮ ಬೀರಬಹುದು ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page