Thursday, February 27, 2025

ಸತ್ಯ | ನ್ಯಾಯ |ಧರ್ಮ

ಡಿಕೆಶಿ ಕಾಂಗ್ರೆಸ್‌ ಸಿದ್ಧಾಂತದ ವಿರುದ್ಧಇದ್ದಾರೆ ಕೂಡಲೆ ಸಸ್ಪೆಂಡ್‌ ಮಾಡಿ – ಶೆಟ್ಟರ್‌ ಟಾಂಗ್

ಹುಬ್ಬಳ್ಳಿ: ಡಿ.ಕೆ.ಶಿವಕುಮಾರ್‌ ನಿಮ್ಮ ತತ್ವದ ವಿರುದ್ಧ ಇದ್ದರೆ ಅವರನ್ನು ಸಸ್ಪೆಂಡ್ ಮಾಡಿ ಎಂದು ಕಾಂಗ್ರೆಸ್‌ ನಾಯಕರಿಗೆ ಸಂಸದ ಜಗದೀಶ್‌ ಶೆಟ್ಟರ್‌ ಟಾಂಗ್‌ ಕೊಟ್ಟಿದ್ದಾರೆ.ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿ ಕುಂಭಮೇಳಕ್ಕೆ ಹೋಗಿರುವುದರಲ್ಲಿ ತಪ್ಪೇನಿದೆ. ಇದರಲ್ಲಿ ದೊಡ್ಡಸ್ಥಿಕೆ ಏನಿಲ್ಲ. ಇದು ಸರಿ ಆಗಲ್ಲ ಅಂದ್ರೆ, ನಿಮ್ಮ ಪಕ್ಷದ ತತ್ವ ಸಿದ್ದಾಂತಕ್ಕೆ ವಿರೋಧವಾಗಿದ್ರೆ ಅವರನ್ನು ಸಸ್ಪೆಂಡ್‌ ಮಾಡಿ ಎಂದು ಆಗ್ರಹಿಸಿದರು.

ಇನ್ನು ಕಾಂಗ್ರೆಸ್‌ಗೆ ಹಿಂದುಗಳ ಬಗ್ಗೆ ದ್ವೇಷ ಇದೆ. ಇದರಿಂದ ಕಾಂಗ್ರೆಸ್‌ ಉದ್ಧಾರ ಆಗಲ್ಲ.‌ ಹಿಂದೂಗಳಿಲ್ಲದೇ ನೀವು ರಾಜಕಾರಣ ಮಾಡ್ತೀವಿ ಅಂದ್ರೆ ಅದು ನಿಮ್ಮ ಹಣೆಬರಹ. ಹಿಂದೂಗಳನ್ನು ಕೀಳಾಗಿ ಕಾಣೋದೆ, ಅವರ ಅವನತಿಗೆ ಕಾರಣ ಎಂದಿದ್ದಾರೆ.ಇನ್ನು ಮುಂದುವರಿದು ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್‌ ಖರ್ಗೆ ಅವರ ಹೇಳಿಕೆ ಹಿಂದೂ ವಿರೋಧಿಯಾಗಿದೆ. ಈ ದೇಶ ಹಿಂದೂಗಳ ದೇಶ, ಹಿಂದೂ ರಾಷ್ಟ್ರ ಎನ್ನುವ ಪರಂಪರೆ ಇದೆ. ಕಮ್ಯುನಿಷ್ಟರು ಕೂಡ ಹಿಂದೂ ದೇವಾಲಯಕ್ಕೆ ಹೋಗಿದ್ದಾರೆ. ಕಾಂಗ್ರೆಸ್‌ನವರು ಎಷ್ಟೋ ಜನ ಕುಂಭಮೇಳಕ್ಕೆ ಹೋಗಿದ್ದಾರೆ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page