Friday, March 7, 2025

ಸತ್ಯ | ನ್ಯಾಯ |ಧರ್ಮ

ʼನನಗೆ ಬಹಳ ನೋವಾಗಿದೆʼ: ರನ್ಯಾ ರಾವ್‌ ತಂದೆ, ಪೊಲೀಸ್‌ ಅಧಿಕಾರಿ ಕೆ. ರಾಮಚಂದ್ರ ರಾವ್ ಹೇಳಿಕೆ

ಕನ್ನಡ ನಟಿ ರನ್ಯಾ ರಾವ್ ಅಕ್ರಮ ಚಿನ್ನದ ಕಳ್ಳಸಾಗಣೆ ಪ್ರಕರಣ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ಅವರು ಕರ್ನಾಟಕದ ಮಾಜಿ ಡಿಜಿಪಿ ಮತ್ತು ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ಅಧಿಕಾರಿ ಕೆ. ರಾಮಚಂದ್ರ ರಾವ್ ಅವರ ಪುತ್ರಿಯಾಗಿರುವುದರಿಂದ ಈ ವಿಷಯ ಮತ್ತಷ್ಟು ಸುದ್ದಿಯಲ್ಲಿದೆ.

ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ತಮ್ಮ ಮಗಳ ಬಂಧನದ ಬಗ್ಗೆ ಅವರು ಆಘಾತ ವ್ಯಕ್ತಪಡಿಸಿದ್ದು, ಈ ಕುರಿತು ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) (ರಾಜ್ಯ ಪೊಲೀಸ್ ವಸತಿ ನಿಗಮ) ಕೆ.ರಾಮಚಂದ್ರ ರಾವ್ ಪ್ರತಿಕ್ರಿಯಿಸಿ ನಟಿ ರನ್ಯಾ ರಾವ್‌ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಈ ವಿಷಯದಿಂದ ಪೋಷಕನಾಗಿ ನನ್ನ ಹೃದಯ ಒಡೆದು ಹೋಗಿದೆ. ನನಗೆ ಆಗಿರುವ ಆಘಾತದ ಕುರಿತು ಹೇಳಲು ಪದಗಳೇ ಇಲ್ಲ. ಈ ಪ್ರಕರಣದಿಂದಾಗಿ ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ಕಷ್ಟದ ಸಮಯ. ಈ ಸಂದರ್ಭವನ್ನು ಎದುರಿಸಲು ನಾವು ಕಷ್ಟಪಡುತ್ತಿದ್ದೇವೆ.” ಎಂದು ಅವರು ಹೇಳಿದರು.

ಅವರು ತಾನು ಯಾವಾಗಲೂ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಾಗಿ ಹೇಳಿದರು. ಜೊತೆಗೆ ಸಾರ್ವಜನಿಕರು ಮತ್ತು ಮಾಧ್ಯಮಗಳು ಈ ವಿಷಯದಲ್ಲಿ ನ್ಯಾಯಯುತವಾಗಿ ವರ್ತಿಸುವಂತೆ ಅವರು ವಿನಂತಿಸಿದರು.

ಮಾರ್ಚ್ 3 ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದ ರೂ. 12 ಕೋಟಿ ರೂಪಾಯಿ ಮೌಲ್ಯದ 14.8 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡುವಾಗ ರನ್ಯಾ ರಾವ್ ಸಿಕ್ಕಿಬಿದ್ದಿದ್ದರು. ಆಕೆಯನ್ನು ಅಧಿಕಾರಿಗಳು ಬಂಧಿಸಿದರು. ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಪ್ರಕಾರ, ಈ ವರ್ಷದ ಜನವರಿಯಿಂದ ಅವರು 27 ಬಾರಿ ದುಬೈಗೆ ಪ್ರಯಾಣ ಬೆಳೆಸಿದ್ದು, ಸಂಘಟಿತ ಕಳ್ಳಸಾಗಣೆ ಜಾಲದಲ್ಲಿ ಅವರ ಭಾಗಿಯಾಗಿರುವ ಅನುಮಾನಗಳನ್ನು ಹುಟ್ಟುಹಾಕಿದೆ.

2024ರಲ್ಲಿ, ರನ್ಯಾ ರಾವ್ ಜತಿನ್ ಹುಕ್ಕೇರಿ ಅವರನ್ನು ವಿವಾಹವಾದರು. ಅಂದಿನಿಂದ ರನ್ಯಾ ತನ್ನ ಪತಿಯೊಂದಿಗೆ ಸ್ವತಂತ್ರವಾಗಿ ವಾಸಿಸುತ್ತಿದ್ದಾರೆ ಎಂದು ಆಕೆಯ ತಂದೆ ರಾಮಚಂದ್ರ ರಾವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮದುವೆಯ ನಂತರ ಅವಳು ನಮ್ಮ ಮನೆಗೆ ಬಂದಿಲ್ಲ ಅಥವಾ ನಾವು ಅವರ ಮನೆಗೆ ಹೋಗಿಲ್ಲ ಎಂದು ಅವರು ಹೇಳಿದರು. ರನ್ಯಾ ರಾವ್ ಯಾವುದೇ ಕಾನೂನು ಉಲ್ಲಂಘನೆ ಮಾಡಿದ್ದಿದ್ದರೆ, ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ಅವರು ಹೇಳಿದರು.

ಸುದ್ದಿಸಂಸ್ಥೆ ಜೊತೆ ಮಾತನಾಡಿದ ಪೊಲೀಸ್‌ ಅಧಿಕಾರಿ ರಾವ್, “ಕಾನೂನು ತನ್ನ ಕೆಲಸವನ್ನು ನಿರ್ವಹಿಸುತ್ತದೆ. ಆರೋಪದ ಬಗ್ಗೆ ತನಗೆ ಮೊದಲೇ ತಿಳಿದಿರಲಿಲ್ಲ. ಮಾಧ್ಯಮಗಳ ಮೂಲಕವೇ ಬಂಧನದ ಬಗ್ಗೆ ತಿಳಿದುಕೊಂಡೆ ಎಂದರು. ಡಿಜಿಪಿ ಕೆ. ರಾಮಚಂದ್ರ ರಾವ್​ ಮೂಲತಃ ಆಂಧ್ರಪ್ರದೇಶದವರಾಗಿದ್ದು ಅವರು ಚಿಕ್ಕಮಗಳೂರು ಜಿಲ್ಲೆ ಕಾಫಿ ಪ್ಲಾಂಟರ್​ ಮಾಲಕಿಯ ಜೊತೆ ಎರಡನೇ ವಿವಾಹವಾಗಿದ್ದರು. ರನ್ಯಾ ರಾವ್​ ಡಿಜಿಪಿ ಕೆ. ರಾಮಚಂದ್ರ ರಾವ್ ಮಲ ಮಗಳು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page