Monday, March 10, 2025

ಸತ್ಯ | ನ್ಯಾಯ |ಧರ್ಮ

ಕೆಲಸದ ಸಮಯವನ್ನು ಹೆಚ್ಚಿಸುವುದು ಸರಿಯಲ್ಲ. ಇದರಿಂದ ದಕ್ಷತೆ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ: ಸೌಮ್ಯ ಸ್ವಾಮಿನಾಥನ್

ದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾಜಿ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅವರು ದೀರ್ಘ ಕೆಲಸದ ಸಮಯವನ್ನು ಬಲವಾಗಿ ವಿರೋಧಿಸಿದ್ದಾರೆ.

ಇದು ಕೆಲಸದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ. ಹೆಚ್ಚು ಸಮಯ ಕೆಲಸ ಮಾಡಬೇಕೇ, ಬೇಡವೇ ಎನ್ನುವುದು ವೈಯಕ್ತಿಕ ವಿಷಯ. ಜನರು ತಮ್ಮ ದೇಹವನ್ನು ಗಮನಿಸಿ ಅದಕ್ಕೆ ಯಾವ ಸಮಯಕ್ಕೆ ವಿಶ್ರಾಂತಿ ಬೇಕು ಎನ್ನುವುದನ್ನು ತೀರ್ಮಾನಿಸಬೇಕು ಎಂದು ಅವರು ಹೇಳಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸೌಮ್ಯ ಸ್ವಾಮಿನಾಥನ್, ಅಲ್ಪ ಅವಧಿಗೆ ಹೆಚ್ಚು ಕಾಲ ಕೆಲಸ ಮಾಡಲು ಸಾಧ್ಯವಿದೆ ಮತ್ತು ಕೋವಿಡ್ ಅವಧಿಯಲ್ಲಿ ನಾವು ಇದನ್ನು ನೋಡಿದ್ದೇವೆ ಎಂದು ಹೇಳಿದರು. ಆದರೂ ದೀರ್ಘಾವಧಿಗೆ ಅದು ಒಳ್ಳೆಯದಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಉತ್ಪಾದಕತೆಯು ನಾವು ಎಷ್ಟು ಗಂಟೆ ಕೆಲಸ ಮಾಡುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿರುವುದಿಲ್ಲ, ಅದು ನಮ್ಮ ಕೆಲಸದ ಗುಣಮಟ್ಟವನ್ನು ಅವಲಂಬಿಸಿರುತ್ತದೆ ಎಂದು ಅವರು ಹೇಳಿದರು. ದೀರ್ಘಾವಧಿಯ ಕೆಲಸದ ಸಮಯವು ಮಾನವನ ಆರೋಗ್ಯದ ಮೇಲೆ ಬೀರುವ ಪರಿಣಾಮದ ಬಗ್ಗೆ ಕೇಳಿದಾಗ, ಸೌಮ್ಯಾ ಸ್ವಾಮಿನಾಥನ್, “ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡುವ ಅನೇಕ ಜನರನ್ನು ನೋಡಿದ್ದೇನೆ. ಅದು ವೈಯಕ್ತಿಕ ವಿಷಯ ಅಂತ ನನಗನ್ನಿಸುತ್ತೆ. ದಣಿವಾದಾಗ ನಿಮ್ಮ ದೇಹವು ನಿಮಗೆ ಹೇಳುತ್ತದೆ. ನೀವು ನಿಮ್ಮ ದೇಹದ ದನಿಯನ್ನು ಆಲಿಸಬೇಕು.

ಕೊವಿಡ್‌ ಸಮಯದಲ್ಲಿ ನಾವೆಲ್ಲ ಈ ರೀತಿ ದುಡಿದಿದ್ದೆವು. ಕೆಲವು ತಿಂಗಳ ಕಾಲ ಹೀಗೆ ದುಡಿಯಬಹುದು. ಆದರೆ ವರ್ಷಗಳ ಕಾಲ ಹಾಗೆ ದುಡಿಯಲು ಸಾಧ್ಯವಿಲ್ಲ. ನಾವು ಎರಡು, ಮೂರು ವರ್ಷಗಳ ಕಾಲ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದೆವು. ನನಗೆ ಆಗೆಲ್ಲ ಒತ್ತಡಕ್ಕೆ ನಿದ್ರೆ ಬರುತ್ತಿರಲಿಲ್ಲ. ಬಹಳ ಒತ್ತಡದಲ್ಲಿ ಸಮಯ ಕಳೆಯುತ್ತಿದ್ದೆವು. ಅರೋಗ್ಯ ಕ್ಷೇತ್ರದಲ್ಲಿರುವ ಬಹಳಷ್ಟು ಜನ ರಾತ್ರಿ ಹಗಲು ದುಡಿದಿದ್ದರು. ಕೊವಿಡ್ ನಂತರ ಅವರಲ್ಲಿ ಬಹಳಷ್ಟು ಜನರು ತಮ್ಮ ಕೆಲಸವನ್ನು ತೊರೆದರು. ‌

ಈ ರೀತಿಯಲ್ಲಿ ನಾವು ಅಲ್ಪಾವಧಿಗೆ ಮಾತ್ರವೇ ದುಡಿಯಬಹುದು. ದೀರ್ಘಕಾಲ ಹಾಗೆ ದುಡಿಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಮಾಜಿ ಮಹಾನಿರ್ದೇಶಕಿಯೂ ಆಗಿರುವ ಅಂತರರಾಷ್ಟ್ರೀಯ ಆರೋಗ್ಯ ತಜ್ಞೆ ಸೌಮ್ಯ ಸ್ವಾಮಿನಾಥನ್, ನಿರಂತರ ಕಾರ್ಯಕ್ಷಮತೆಗೆ ಮಾನಸಿಕ ಆರೋಗ್ಯ ಮತ್ತು ವಿಶ್ರಾಂತಿ ಅತ್ಯಗತ್ಯ ಎನ್ನುತ್ತಾರೆ.

ಮಾನವ ದೇಹಕ್ಕೆ ನಿದ್ರೆ ಮತ್ತು ಮಾನಸಿಕ ಶಾಂತಿ ಬೇಕು ಎಂದು ಅವರು ಹೇಳಿದರು. ಒಬ್ಬ ವ್ಯಕ್ತಿ 12 ಗಂಟೆಗಳ ಕಾಲ ದುಡಿಯಬಲ್ಲ ಆದರೆ 8 ಗಂಟೆಗಳ ನಂತರ ಕೆಲಸದಲ್ಲಿ ಅದೇ ಗುಣಮಟ್ಟ ಉಳಿದಿರುವುದಿಲ್ಲ ಎನ್ನುತ್ತಾರೆ ಸೌಮ್ಯಾ ಸ್ವಾಮಿನಾಥನ್.

ಹಾಗಾದರೆ ನಿಮ್ಮ ದೇಹವು ಏನು ಹೇಳುತ್ತದೆ ಎಂಬುದನ್ನು ನೀವು ಕೇಳಬೇಕು. ನೀವು ಕೆಲವು ತಿಂಗಳುಗಳ ಕಾಲ ತುಂಬಾ ಕಷ್ಟಪಟ್ಟು ಕೆಲಸ ಮಾಡಬಹುದು. ಕೋವಿಡ್ ಸಮಯದಲ್ಲಿ ನಾವೆಲ್ಲರೂ ಒಂದೇ ರೀತಿ ಮಾಡಿದ್ದೇವೆ. ಆದರೆ ನಾವು ಅದನ್ನು ವರ್ಷಗಳ ಕಾಲ ಉಳಿಸಿಕೊಳ್ಳಬಹುದೇ? “ನಾನು ಹೇಳಲಾರೆ” ಎಂದು ಅವರು ಹೇಳಿದರು. “ನಾವು ಆ ಎರಡು ಅಥವಾ ಮೂರು ವರ್ಷಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದ್ದೇವೆ.” ನನಗೆ ಬಹಳ ಹೊತ್ತು ನಿದ್ದೆ ಬರಲಿಲ್ಲ. ನಾವು ಒತ್ತಡದಲ್ಲಿ ತುಂಬಾ ಸಮಯ ಕಳೆದೆವು. ನಾವು ಅನೇಕ ವಿಷಯಗಳಿಂದ ಬೇಸರಗೊಂಡಿದ್ದೇವೆ. ನಾವು ವಿಶೇಷವಾಗಿ ಆರೋಗ್ಯ ಸೇವೆ ಒದಗಿಸುವವರ ಬಗ್ಗೆ ಯೋಚಿಸಿದೆವು. ಅವರು ಹಗಲು ರಾತ್ರಿ ಕೆಲಸ ಮಾಡಿದರು. ಕೋವಿಡ್ ನಂತರ ಅನೇಕ ಜನರು ತಮ್ಮ ವೃತ್ತಿಜೀವನವನ್ನು ತೊರೆದರು. ಆ ರೀತಿಯಲ್ಲಿ ನಾವು ಅಲ್ಪಾವಧಿಗೆ ಮಾತ್ರ ಹೋರಾಡಬಹುದು. “ಆದರೆ ವಾಸ್ತವದಲ್ಲಿ ಅದು ನಿಜವಲ್ಲ” ಎಂದು ಅವರು ಹೇಳಿದರು.

ಎಲ್ & ಟಿ ಅಧ್ಯಕ್ಷ ಎಸ್.ಎನ್. ಸುಬ್ರಮಣಿಯನ್ ಈ ಹಿಂದೆ ಕೆಲಸದ ಸಮಯದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದ್ದರು. ನೌಕರರು ಭಾನುವಾರವೂ ಸೇರಿದಂತೆ ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಅವರು ಸೂಚಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page