Friday, March 14, 2025

ಸತ್ಯ | ನ್ಯಾಯ |ಧರ್ಮ

ಅಂಗನವಾಡಿಗೆ ನುಗ್ಗಿ ಕಾರ್ಯಕರ್ತೆಯ ಮೇಲೆ ಲೈಂಗಿಕ ದೌರ್ಜನ್ಯ

ಮೈಸೂರು: ಅಂಗನವಾಡಿ ಕಾರ್ಯಕರ್ತೆಯ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ, ಎಚ್.ಡಿ.ಕೋಟೆ ತಾಲ್ಲೂಕಿನ ಎಲೆಹುಂಡಿ ಗ್ರಾಮದ ಅಂಗನವಾಡಿಯಲ್ಲಿ ನಡೆದಿದೆ.

ಅಲ್ಲಿನ ಸ್ಥಳಿಯರ ಮಾಹಿತಿ ಪ್ರಕಾರ, ಶಿಕ್ಷಕಿ ಸುಶೀಲಾ ಎಂಬುವರು ಹಲ್ಲೇಗೊಳಗಾದ ಮಹಿಳೆ. ಗುರುವಾರ ಅಂಗನವಾಡಿಯಲ್ಲಿ ಶಿಕ್ಷಕಿ ಕರ್ತವ್ಯದಲ್ಲಿದ್ದಾಗ, ಎಚ್.ಡಿ.ಕೋಟೆ ಪಟ್ಟಣದ ಬಸವರಾಜು ಎಂಬ ವ್ಯಕ್ತಿ ಏಕಾಏಕಿ ಅಂಗನವಾಡಿ ಒಳಗೆ ಪ್ರವೇಶ ಮಾಡಿ, ನೀನು ನನಗೆ ಬೇಕು , ನಿನ್ನನ್ನು ಅನುಭವಿಸಬೇಕು ಎಂದು ಎಳೆದಾಟ ಮಾಡಿದ್ದಾನೆ. ಅಂಗನವಾಡಿ ಶಿಕ್ಷಕಿಯಿಂದ ಪ್ರತಿರೋಧ ಎದುರಾದಾಗ ಅಂಗನವಾಡಿ ಶಿಕ್ಷಕಿಗೆ ಬಲವಾಗಿ ಕಪಾಳಕ್ಕೆ ಪ್ರಜ್ಞೆ ತಪ್ಪುವಂತೆ ಹೊಡೆದು ಗಂಭೀರವಾಗಿ ಹಲ್ಲೇ ಮಾಡಿದ್ದಾನೆ ಎಂದು ಮಹಿಳೆ ಮಾಧ್ಯಮಗಳಿಗೆ ತಿಳಿಸಿದರು.

ನಂತರ ಅಂಗನವಾಡಿ ಶಿಕ್ಷಕಿ ಗ್ರಾಮಸ್ಥರ ಸಹಕಾರದಿಂದ ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ವಿಚಾರನೆ ನಡೆಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page