Tuesday, March 25, 2025

ಸತ್ಯ | ನ್ಯಾಯ |ಧರ್ಮ

ಮಗಳ ವಿದ್ಯಾಭ್ಯಾಸಕ್ಕೆ ವರದಾನವಾದ ಪಿ.ಎಂ.ಜೆ.ಜೆ.ಬಿ.ವೈ 2 ಲಕ್ಷ ಪರಿಹಾರ

ಬೇಲೂರು : ಬೇಲೂರಿನ ಅರೇಹಳ್ಳಿಯಲ್ಲಿ ಕಳೆದ ಮೂರು ವರ್ಷಗಳಿಂದ ಪತ್ನಿಯ ಹೆಸರಿನಲ್ಲಿ ವಾರ್ಷಿಕ 436 ರೂ ನಂತೆ ಪಿ.ಎಂ. ಜೆ.ಜೆ.ಬಿ.ವೈ. ಯೋಜನೆ ಯಡಿಯಲ್ಲಿ ಹಣ ಪಾವತಿ ಮಾಡಿದ್ದು, ಪತ್ನಿಯು ಅಕಾಲಿಕ ಮರಣ ಹೊಂದಿದ ಬಳಿಕ ನಾಮ ನಿರ್ದೇಶಿತ ನನ್ನ ಮಗಳ ಖಾತೆಗೆ ಸುಮಾರು 2 ಲಕ್ಷ ಪರಿಹಾರ ದೊರೆತಿದೆ. ಇದರಿಂದ ಮಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ ಎಂದು ಮೃತರ ಪತಿ ಪುಟ್ಟರಾಜು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ಅರೇಹಳ್ಳಿ ಕರ್ನಾಟಕ ಬ್ಯಾಂಕಿನ ಸಿಬ್ಬಂದಿ ವರ್ಗದವರು ಸಲಹೆ ನೀಡಿದ್ದರು. ಅದರಂತೆ ಆ ದಿನವೇ ವಿಮಾ ಕಂತನ್ನು ಪಾವತಿಸಿದ್ದೆ. ನನ್ನ ಪತ್ನಿಯು ಅಕಾಲಿಕ ಮರಣ ಹೊಂದಿದ ಬಳಿಕ, ನನ್ನ ಮಗಳ ಖಾತೆಗೆ 2ಲಕ್ಷ ಪರಿಹಾರ ದೊರೆತಿದೆ. ಇದರಿಂದ ಮಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ ಎಂದು ಪುಟ್ಟರಾಜು ತಿಳಿಸಿದ್ದಾರೆ.

ಭಾರತ ಸರ್ಕಾರವು ತನ್ನ ಸಾಮಾಜಿಕ ಭದ್ರತಾ ಕ್ರಮಗಳ ಭಾಗವಾಗಿ, 18 ರಿಂದ 70 ವರ್ಷ ವಯಸ್ಸಿನ ಎಲ್ಲಾ ಉಳಿತಾಯ ಬ್ಯಾಂಕ್ ಖಾತೆದಾರರಿಗೆ ರೂ. 20/- ರ ಅತ್ಯಂತ ಕಡಿಮೆ ವಾರ್ಷಿಕ ಪ್ರೀಮಿಯಂನಲ್ಲಿ ರೂ. 2,00,000/- ರ ವೈಯಕ್ತಿಕ ಅಪಘಾತ ರಕ್ಷಣೆಯನ್ನು ನೀಡುವ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY)ಯನ್ನು ಘೋಷಿಸಿದೆ.

18 ರಿಂದ 70 ವರ್ಷ ವಯಸ್ಸಿನ ಎಲ್ಲಾ ಉಳಿತಾಯ ಬ್ಯಾಂಕ್ ಗ್ರಾಹಕರು ಈ ಯೋಜನೆಗೆ ಅರ್ಹರು. ಒಬ್ಬ ವ್ಯಕ್ತಿಯು ಒಂದು ಅಥವಾ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಬಹು ಉಳಿತಾಯ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ, ಆ ವ್ಯಕ್ತಿಯು ಒಂದು ಉಳಿತಾಯ ಬ್ಯಾಂಕ್ ಖಾತೆಯ ಮೂಲಕ ಮಾತ್ರ ಯೋಜನೆಗೆ ಸೇರಲು ಅರ್ಹರಾಗಿರುತ್ತಾರೆ. ಇಂತಹ ಸರ್ಕಾರಿ ಯೋಜನೆಗಳು ಸಾಮಾನ್ಯ ರೈತ ಮತ್ತು ಕಾರ್ಮಿಕ ಕುಟುಂಬಗಳಿಗೆ ಅನುಕೂಲಕರವಾಗಿರುತ್ತದೆ ಹಾಗೂ ಕಡಿಮೆ ದರದಲ್ಲಿ ಹಣ ಪಾವತಿ ಮಾಡುವುದರಿಂದ ಯಾವುದೇ ಸಮಸ್ಯೆ ಇಲ್ಲದೆ ಇಂತಹ ಯೋಜನೆಗಳ ಫಲಾನುಭವಿಗಳಾಗಬಹುದು

Related Articles

ಇತ್ತೀಚಿನ ಸುದ್ದಿಗಳು

You cannot copy content of this page