ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಶಿರೂರು ಭೂಕುಸಿತದ ಮೃತ ಅರ್ಜುನ್ ತಾಯಿಯಿಂದ ಮಂಜೇಶ್ವರ ಶಾಸಕರಿಗೆ ಕೃತಜ್ಞತಾ ಪತ್ರ; ಇದು ನನಗೆ ಈದ್ ಉಡುಗೊರೆ ಎಂದು ಬಣ್ಣಿಸಿದ ಶಾಸಕ

PPeepal Media Desk

Peepal Media Desk ವಿಶೇಷ

• 1 ನಿಮಿಷದ ಓದು

ಶಿರೂರು ಭೂಕುಸಿತದ ಮೃತ ಅರ್ಜುನ್ ತಾಯಿಯಿಂದ ಮಂಜೇಶ್ವರ ಶಾಸಕರಿಗೆ ಕೃತಜ್ಞತಾ ಪತ್ರ; ಇದು ನನಗೆ ಈದ್ ಉಡುಗೊರೆ ಎಂದು ಬಣ್ಣಿಸಿದ ಶಾಸಕ

ಮಳೆಗಾಲದ ಸಂದರ್ಭದಲ್ಲಿ ಶಿರೂರು (ಕರ್ನಾಟಕ)ದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ದುರಂತವಾಗಿ ಸಾವನ್ನಪ್ಪಿದ ಕೋಝಿಕ್ಕೋಡ್ ಲಾರಿ ಚಾಲಕ ಅರ್ಜುನ್ ಅವರ ತಾಯಿ ಕೆ.ಸಿ. ಶೀಲಾ ಅವರಿಂದ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅವರಿಗೆ ಹೃದಯಪೂರ್ವಕ ಪತ್ರ ಬಂದಿದೆ . ಈದ್ ಹಬ್ಬದ ಉಡುಗೊರೆಯಾಗಿ ಶೀಲಾ ಈ ಪತ್ರವನ್ನು ಕಳುಹಿಸಿದ್ದು, ತಮ್ಮ ಕುಟುಂಬದ ದುಃಖದ ಸಮಯದಲ್ಲಿ ಶಾಸಕಿ ನೀಡಿದ ಅಚಲ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಪತ್ರವನ್ನು ಹಂಚಿಕೊಂಡ ಶಾಸಕರು, ಈ ಹಬ್ಬದ ಸಂದರ್ಭದಲ್ಲಿ ತಮಗೆ ದೊರೆತ ಅತ್ಯಂತ ಅಮೂಲ್ಯವಾದ ಈದ್ ಉಡುಗೊರೆ ಇದಾಗಿದೆ ಎಂದು ಬಣ್ಣಿಸಿದ್ದಾರೆ.

ಪತ್ರದಲ್ಲಿ ಏನಿದೆ: “ದುಃಖದ ಸಾಗರದಲ್ಲಿ ಸಿಲುಕಿದ್ದ ನಮ್ಮ ಕುಟುಂಬಕ್ಕೆ ಪರಮ ಕರುಣಾಮಯಿ ದೇವರು ಪರಿಹಾರದ ರೂಪದಲ್ಲಿ ಅನೇಕ ದೋಣಿಗಳನ್ನು ಕಳುಹಿಸಿ ಕೊಟ್ಟನು. ಆ ಭರವಸೆಯ ಕೊಂಡಿಗಳಲ್ಲಿ ನೀವೂ ಒಬ್ಬರು. ಆ ದಿನದಿಂದ ನೀವು ನಮ್ಮೊಂದಿಗೆ ನಿಂತಿದ್ದೀರಿ. ಈ ಬಾಧ್ಯತೆಗಳನ್ನು ಪದಗಳಲ್ಲಿ ತೀರಿಸಲು ಸಾಧ್ಯವಿಲ್ಲ. ನಿಮಗೆ ಶುಭ ಹಾರೈಸುತ್ತೇನೆ, ಅಮ್ಮ – ಶೀಲಾ ಕೆ.ಸಿ.”

ಜುಲೈ 16, 2024 ರಂದು ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ 30 ವರ್ಷದ ಅರ್ಜುನ್ ಎಂಬುವರು ಲಾರಿ ಕೊಚ್ಚಿ ಹೋಗಿ ನಾಪತ್ತೆಯಾದರು. ಬೆಳಗಾವಿಯಿಂದ ಅಕೇಶಿಯಾ ಮರದ ದಿಮ್ಮಿಗಳನ್ನು ಸಾಗಿಸಿ ಎಡವನ್ನಕ್ಕೆ ಹಿಂತಿರುಗುತ್ತಿದ್ದಾಗ ವಿಪತ್ತು ಸಂಭವಿಸಿತು. ಸೆಪ್ಟೆಂಬರ್ 25 ರಂದು ಗಂಗಾವಳಿ ನದಿಯಿಂದ ಅವರ ಅವಶೇಷಗಳು ಪತ್ತೆಯಾಗುವವರೆಗೂ ಬರೋಬ್ಬರಿ 82 ದಿನಗಳ ಕಾಲ ಕುಟುಂಬವು ಅರ್ಜುನ್ ಹಿಂತಿರುಗುವುದನ್ನು ನಿರೀಕ್ಷಿಸಿದ್ದವು. ಕೊನೆಗೂ ಅದು ಕೈಗೂಡಲಿಲ್ಲ.

ಅರ್ಜುನ್, ತನ್ನ ಕುಟುಂಬಕ್ಕೆ ಉತ್ತಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ಭರವಸೆಯೊಂದಿಗೆ ಮನೆಯಿಂದ ಹೊರಟಿದ್ದರು. ತನ್ನ ಸಹೋದರಿಯ ಮದುವೆ, ಮನೆ ಕಟ್ಟಲು ಮತ್ತು ಮಕ್ಕಳ ವಿಧ್ಯಾಭ್ಯಾಸದ ಖರ್ಚು ಸೇರಿದಂತೆ ಪ್ರಮುಖ ಕೆಲಸಗಳಿಗೆ ಹಣ ಹೊಂದಿಸಲು ಅರ್ಜುನ್ ಅವಿರತವಾಗಿ ಕೆಲಸ ಮಾಡುತ್ತಿದ್ದರು. ಆದರೆ ದುರದೃಷ್ಟವಶಾತ್ ಭೂಕುಸಿತ ಈ ಎಲ್ಲಾ ಕನಸುಗಳನ್ನು ನುಚ್ಚು ನೂರು ಮಾಡಿತು.

PPeepal Media Desk

Peepal Media Desk

Peepal Media · ವಿಶೇಷ ವಿಭಾಗ

ಸಂಬಂಧಿತ ಸುದ್ದಿಗಳು