Friday, April 18, 2025

ಸತ್ಯ | ನ್ಯಾಯ |ಧರ್ಮ

ಶೀಘ್ರವೇ GPS ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿ?

ನವದೆಹಲಿ : ದೇಶಾದ್ಯಂತ ಮುಂದಿನ ತಿಂಗಳಿನಿಂದ (ಮೇ.1) ಜಿಪಿಎಸ್ ಆಧಾರಿತ (ಉಪಗ್ರಹ ಆಧಾರಿತ) ಟೋಲ್ ಸಂಗ್ರಹ ವ್ಯವಸ್ಥೆ ಜಾರಿಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಸಂಗತಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಲ್ಲಗಳೆದಿದೆ.

ಮೇ.1ರಿಂದ ಉಪಗ್ರಹ ಆಧಾರಿತ ಟೋಲ್​​ ಕಲೆಕ್ಷನ್​ ವ್ಯವಸ್ಥೆಯ ಜಾರಿ ಕುರಿತಾಗಿ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇಂದು ಸ್ಪಷ್ಟಪಡಿಸಿದೆ. ಅಲ್ಲದೇ ಪ್ರಸ್ತುತ ಚಾಲ್ತಿಯಲ್ಲಿರುವ ಫಾಸ್ಟ್ಯಾಗ್‌ ಟೋಲ್ ಸಂಗ್ರಹ ಮಾದರಿ ವ್ಯವಸ್ಥೆಯೇ ಮುಂದುವರೆಯಲಿದೆ ಎಂದು ಟ್ವೀಟ್ ಮೂಲಕ ಖಚಿತಪಡಿಸಿದೆ.

ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆ ಬಗ್ಗೆ ಸಲಹೆಗಳು ಬಂದಿವೆ. ಆದರೆ ಅದನ್ನು ಜಾರಿಗೆ ತರುತ್ತಿಲ್ಲ. ಕೆಲವು ಕಡೆ ಪ್ರಯೋಗಿಕವಾಗಿ ಎನ್‌ಪಿಆರ್ ಫಾಸ್ಟ್ಯಾಗ್‌ ಆಳವಡಿಕೆಗೆ ಚಿಂತನೆ ಮಾಡಲಾಗುತ್ತಿದೆ. ಆದರೆ ಮೇ 1ರಿಂದ ಜಿಪಿಎಸ್ ಆಧಾರಿತ ಫಾಸ್ಟ್ಯಾಗ್‌ ಟೋಲ್ ಇರಲಿದೆ ಎಂಬ ವರದಿ ಸುಳ್ಳು. ಆ ರೀತಿ ಯಾವ ಚಿಂತನೆ ಇಲ್ಲ ಎಂದಿದೆ.

ಸದ್ಯಕ್ಕೆ ಫಾಸ್ಟ್ಯಾಗ್‌ ಟೋಲ್ ವ್ಯವಸ್ಥೆಯನ್ನು ಪ್ರಾಧಿಕಾರವು ಮುಂದುವರಿಸಲಿದೆ. ಟೋಲ್ ಪ್ಲಾಜಾಗಳ ಮೂಲಕ ವಾಹನಗಳ ಸುಗಮ, ತಡೆರಹಿತ ಸಂಚಾರವನ್ನು ಸಕ್ರಿಯಗೊಳಿಸಲು ಮತ್ತು ಪ್ರಯಾಣದ ಸಮಯ ಕಡಿಮೆ ಮಾಡಲು ‘ANPR-FASTag-ಆಧಾರಿತ ತಡೆ-ಕಡಿಮೆ ಟೋಲಿಂಗ್ ವ್ಯವಸ್ಥೆ’ಯನ್ನು ಆಯ್ದ ಟೋಲ್ ಪ್ಲಾಜಾಗಳಲ್ಲಿ ಜಾರಿಗೆ ತರಲಾಗುವುದು ಎಂದು ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page