Friday, April 18, 2025

ಸತ್ಯ | ನ್ಯಾಯ |ಧರ್ಮ

ಭ್ರಷ್ಟಾಚಾರ્ದ ಹಿನ್ನೆಲೆ ಬೇಲೂರು ಪುರಸಭೆ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ 

ಬೇಲೂರು ಸ್ವ ಪಕ್ಷದವರೇ ಆದ ಕಾಂಗ್ರೆಸ್ ನ ಪುರಸಭೆ ಅಧ್ಯಕ್ಷರಿಂದ ಭ್ರಷ್ಟಾಚಾರ ನಡೆಯುತ್ತಿದೆ ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಶಾಸಕ ಹುಲ್ಲಳ್ಳಿ ಸುರೇಶ್ ವಿರುದ್ಧ ಕಾಂಗ್ರೆಸ್ ಮುಖಂಡರಿಂದ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಬಸವೇಶ್ವರ ವೃತ್ತದ ಬಳಿ ಪುರಸಭೆ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರಸ್ ಪಕ್ಷ ಆ ಪಕ್ಷದವರೇ ಪುರಸಭೆ ಅದ್ಯಕ್ಷರಾಗಿರುವ ಎ ಆರ್ ಅಶೋಕ್ ವಿರುದ್ಧ  ಭ್ರಷ್ಟಾಚಾರ ,ದೌರ್ಜನ್ಯ ,ದಬ್ಬಾಳಿಕೆ  ಖಂಡಿಸಿ ತೀವ್ರ ವಾಗ್ದಾಳಿ ನಡೆಸಿದರು. ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿ ಶಿವರಾಂ ಪುರಸಭೆಯಲ್ಲಿ ಆಡಳಿತ ದುರ್ಬಲವಾಗಿದ್ದು ಅಲ್ಲಿಯ ಅಧ್ಯಕ್ಷರು ದುರಾಡಳಿತ ನಡೆಸುತ್ತಿರುವುದು ಖಂಡನೀಯ.

ಸಾಂಕೇತಿಕವಾಗಿ ಇಲ್ಲಿ ನಡೆಯುತ್ತಿರುವ ಪುರಸಭೆಯಲ್ಲಿ ದೌರ್ಜನ್ಯ ದಬ್ಬಾಳಿಕೆಯ ಮಾಡುತ್ತಿರುವ ಬಗ್ಗೆ ಪಕ್ಷಾತೀತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ.ಹನುಮಂತನಗರದಲ್ಲಿ ವಾಸವಿದ್ದಂತ ಮನೆಯನ್ನು ಧ್ವಂಸ ಮಾಡಿದ್ದಾರೆ.ಆಲ್ಲಿ ರಸ್ತೆ (ದಾರಿ) ಇತ್ತು ಎಂದು ಯಾವುದೇ ನೊಟೀಸ್, ಸರ್ವ್ ಮಾಡದೆ,  ನೇರವಾಗಿ ಜೆಸಿಬಿ ಮುಖಾಂತರ ವಾಸವಿದ್ದ ಮನೆಯನ್ನು ಧ್ವಂಸ ಮಾಡಿದ್ದಾರೆ‌.ಈಗ ಅವರಿಗೆ ವಾಸಿಸಲು ಮನೆಯಿಲ್ಲದೆ ನಿರ್ಗತಿಕರಾಗಿದ್ದಾರೆ‌.ಇದು ಕಾನೂನು ಬಾಹಿರ ಚಟುವಟಿಕೆ ಆಗಿದೆ.ಈ ಒಂದು ಚಟುವಟಿಕೆ ಪುರಸಭೆಯಲ್ಲೇ ನಡಿತಾ ಇದೆ ಎಂದರೆ ಇದಕ್ಕೆಲ್ಲಾ ಶಾಸಕರ ಕುಮ್ಮಕ್ಕೇ ಕಾರಣವಾಗಿದೆ.ಬಡವರ ಮನೆಯನ್ನು ಹೊಡೆದು ದೌರ್ಜನ್ಯ ಮಾಡಿದ್ದಾರೆ. ವಾಸಿಸುವ ಜನರಿಗೆ ರಕ್ಷಣೆ ಇಲ್ಲ ಇದೇ ರೀತಿ ದೌರ್ಜನ್ಯ ನಡೆದರೆ ಬೇಲೂರು ಅರಾಜಕತೆಯಾಗುತ್ತೆ.ಕೂಡಲೇ ತಹಶಿಲ್ದಾರ್ ಅವರು ಸರ್ವೆ ನಡೆಸಿ ಜಾಗ ಯಾರಿಗೆ ಸೇರಿದೆ ಎಂದು ಗುರುತು ಮಾಡಿ ಕೂಡಲೆ ಕ್ರಮ ಕೈಗೊಳ್ಳ ಬೇಕು.ಇಲ್ಲದಿದ್ದರೆ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಮಾಡ ಬೇಕಾಗುತ್ತದೆ. ಕಾನೂನು ಪ್ರಕಾರ ಖಾಸಗಿಯವರಿಗೆ ಸೇರಿದ ಹೆಚ್ಚುವರಿ ಆಗಿರುವ ಖಾತೆ ಕೂಡಲೇ ರದ್ದುಮಾಡುವ ಕೆಲಸ ಪುರಸಭೆ ಮಾಡ

ಬೇಕು. ಖಾಸಗಿ ಜಾಗ ಯಾರಿಗೆ ಹೆಚ್ಚಾಗಿದೆ ಅದು ಶಾಸಕರ ಪ್ರಭಾವ ದಿಂದಾಗಿ ಆಗಿರೋದು. ಏಕೆಂದರೆ ಅವರು ಬಿಜೆಪಿಯವರು ಇದು ಎಲ್ಲರಿಗೂ ಗೊತ್ತಾಗಿದೆ. ಬಿಜೆಪಿ ವ್ಯಕ್ತಿಗಳ ಪ್ರಭಾವದಿಂದ ಜನಸಾಮಾನ್ಯರಿಗೆ ದೊರಕುವ ಸವಲತ್ತು ದೊರಕುತ್ತಿಲ್ಲ.ಶಾಸಕರು ಪುರಸಭೆಯ ಮಳಿಗೆಗಳ ವಿಚಾರವನ್ನು ಜಿಲ್ಲಾಧಿಕಾರಿಗಳಿಗೆ, ಮುಖ್ಯಾಧಿಕಾರಿ ಗಳಿಗೆ ಪತ್ರ ಬರೆದಿದ್ದು ಮಳಿಗೆ ಇರುವವರಿಗೆ ಮಳಿಗೆ ಕೊಡಬೇಕು.ಅದಕ್ಕೆ ಕೆಲವು ಷರತ್ತು ಗಳನ್ನು ಹಾಕಿ ಪತ್ರ ಬರೆಯುತ್ತಾರೆ.ಹಾಕಿದ ನಿಭಂದನೆಗಳೇ ಬೇರೆ ಇಲ್ಲಿ ಆಗಿರುವ ವ್ಯವಹಾರಗಳೆ ಬೇರೆ.ಒಬ್ಬೊಬ್ಬರ ಮಳಿಗೆಗಳ ವಿಚಾರಕ್ಕೆ ಎಷ್ಟು ಕಲೆಕ್ಷನ್ ಆಗಿದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.ಇವರು ಮಾಡಿರುವ ಅವ್ಯವಹಾರದ ದಾಖಲೆ ಎಲ್ಲಾ ನಮ್ಮತ್ರ ಅಲ್ಲ ಜನರ ಬಳಿಯೇ ಇದೆ ಇದಕ್ಕಿಂತ ಸಾಕ್ಷಿ ಬೇಕಾ.ಇದಕ್ಕೆಲ್ಲಾ ಮೂಲ ಕಾರಣ ನಮ್ಮ ಬೇಲೂರು ಶಾಸಕರೇ ಪ್ರಾಮಾಣಿಕ ವಾಗಿ ನಾವೆಲ್ಲ ಇದರ ಬಗ್ಗೆ ಚರ್ಚೆಮಾಡಬೇಕು.ಈಗಲಾದರೂ ಇವರ ಬಗ್ಗೆ ನಾವು ಧ್ವನಿ ಎತ್ತದಿದ್ದರೆ ಮುಂದೆ ಇವರುಗಳ ಆಟವೇ ನಡೆಯುತ್ತದೆ ನಾವುಗಳು ಕೂಡಲೇ ಎಚ್ಚೆತ್ತುಕೊಂಡು ಇವರುಗಳ ವಿರುದ್ಧ ಪ್ರತಿಭಟನೆ ಮಾಡಿ ಇಲ್ಲಿ ಆಗುತ್ತಿತುವ ಭ್ರಷ್ಠಚಾರಗಳನ್ನು ನಾವು ತಡೆಯಬೇಕಾಗಿದೆ.ಇನ್ನಾದರೂ ಇನವರುಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ನಾವು ಬೃಹತ್ ಮೆರವಣಿಗೆ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬೇಲೂರು ಹಳೆಬೀಡು ಪ್ರಾಧಿಕಾರದ ಅಧ್ಯಕ್ಷ ಹಾಗು ಜಿಪಂ ಮಾಜಿ ಸದಸ್ಯ ಸೈಯದ್ ತೌಫಿಕ್,ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ ಆರ್ ವೆಂಕಟೇಶ್,ಪುರಸಭೆ ಸದಸ್ಯ ರಾದ ಶಾಂತ ಕುಮಾರ್,ದಾನಿ,ಭರತ್,ಪ್ರಸನ್ನ,ರತ್ನ ಸತ್ಯನಾರಾಯಣ್.ಕೆಡಿಪಿ ಸದಸ್ಯ  ಬಿಕ್ಕೋಡು ಚೇತನ್ ಸಿ ಗೌಡ ಸೇರಿದಂತೆ ಇತರರು ಹಾಜರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page