Monday, April 21, 2025

ಸತ್ಯ | ನ್ಯಾಯ |ಧರ್ಮ

ಡಾ.ಬಿ.ಆರ್.ಅಂಬೇಡ್ಕರ್ರವರು ಕಾರ್ಮಿಕ ವಿಮೋಚಕ ದೇವಿಹಳ್ಳಿ ಅಂಬೇಡ್ಕರ್‌ ಜಯಂತಿಯಲ್ಲಿ -‌ ಡಾ. ಶಿವಕುಮಾರ್

ಬೇಲೂರು : ಹಾಸನದ ದೇವಿಹಳ್ಳಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷ ಕೂಡ  ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಅದ್ದೂರಿತಯಾಗಿ ಆಚರಸಿಲಾಯಿತು. ಈ ಸಂಧರ್ಭದಲ್ಲಿ ಅದ್ಯಕ್ಷತೆ ವಹಿಸಿದ ಹಿರಿಯ ದಲಿಒತ ಮುಖಂಡರಾದ ಹೆಕ್.‌ ಸಂದೇಶ್‌ ಮಾತನಾಡುತ್ತಾ. ದೇಶದ ಪ್ರತಿಯೊಬ್ಬರೂ ಬಾಬಾ ಸಾಹೇಬರು ನೀಡಿದ ಸಂವಿಧಾನದ ಆಶ್ರಯದಲ್ಲಿಯೇ ಬದುಕು ನಡೆಸುವ ಜತೆಗೆ ಸರ್ಕಾರದಿಂದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಬಾಬಾ ಸಾಹೇಬರ ಜಯಂತಿಯನ್ನು ಒಂದು ಜಾತಿಗೆ ಸೀಮಿತಗೊಳಿಸಿ ಆಚರಿಸುವಂತಾಗಬಾರದು ಎಂದರು.

ಶೋಷಣೆ, ಅಸಮಾನತೆಯ ವಿರುದ್ಧ ನಿರಂತರವಾಗಿ ಹೋರಾಟ ಮಾಡಿ ನೊಂದವರು, ಬಡವರು, ಅಸ್ಪಶ್ಯರು, ಮಹಿಳೆಯರು, ಕಾರ್ಮಿಕರ ಪರವಾಗಿ ನ್ಯಾಯ ಒದಗಿಸಿಕೊಡಲು ಶ್ರಮಿಸಿದ ಕೀರ್ತಿ ಅಂಬೇಡ್ಕರ್ ‌ಗೆ ಸಲ್ಲಬೇಕು. ತಾವು ಓದಿದ 50 ಸಾವಿರಕ್ಕೂ ಹೆಚ್ಚು ಪುಸ್ತಕಗಳ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡಿದ್ದ ಜ್ಞಾನ ಭಂಡಾರ ಅಂಬೇಡ್ಕರ್ ಅವರದು ಎಂದು ಬಣ್ಣಿಸಿದರು. ಭಾರತ ಬೆಳೆಯುತ್ತಿದ್ದರೂ ಎಲ್ಲ ವರ್ಗಗಳನ್ನು ಒಟ್ಟಾಗಿ ಕೊಂಡೊಯ್ಯುವಲ್ಲಿ‌ ಇನ್ನೂ ಯಶಸ್ವಿಯಾಗಿಲ್ಲ. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಸಾಧ್ಯವಾಗದಿದ್ದರೆ ಶ್ರೀಮಂತರು ಬೆಳವಣಿಗೆಯಾಗುತ್ತದೆ ಹೊರತು ಬಡವರ ಭಾರತವಾಗುವುದಿಲ್ಲ, ಆ ನಿಟ್ಟಿನಲ್ಲಿ ಅಂಬೇಡ್ಕರ್‌ರವರ ಆಶಯದಂತೆ ಭಾರತ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಬೇಕು’ ಎಂದು ಸಲಹೆ ನೀಡಿದರು.ಮತ್ತು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು.

ತದ ನಂತರ ಅತಿಥಿಗಳು ಮುಖ್ಯ ಭಾಷಣಕಾರರಾಗಿ ಆಗಮಿಸಿದ ಅಕ್ಕಾ ಅಕಾಡಿಮಿಯ ಡಾ. ಶಿವಕುಮಾರ್‌ ರವರು ಮಾತನಾಡುತ್ತಾ ಗ್ರಾಮದ ಮಕ್ಕಳೊಂದಿಗೆ ಸ್ವಲ್ಪ ಹೊತ್ತು ಡಾ.ಅಂಬೇಡ್ಕರ್‌ ರವರ ಬಗ್ಗೆ ಮಾಹಿತಿ ಪ್ರಾಶ್ನಾಳಿಯೊಂದೆಗೆ ತಮ್ಮ ಮಾತನ್ನು ಆರಂಭಿಸಿದರು. ದೇವಿಹಳ್ಳಿ ಗ್ರಾಮದದಲ್ಲಿ    ಡಾ.ಅಂಬೇಡ್ಕರ್ ರವರ ಸ್ಮರಣೆಯಯನ್ನು ಮಾಡುತ್ತಿರುವುದು ಸಂತೋಷದ ಸಂಗತಿ ಆದರೆ ಅವರಮನ್ನು ನಾವು ಎಷ್ಟು ಅರ್ಥ ಮಾಡಕೊಂಡಿದ್ದೇವೆ ಎಂಬುದೆ ನನ್ನ ಪ್ರಶ್ನೆಯಾಗಿದೆ. ಈಗಲೂ ನಮ್ಮ ಮನೆಗಳಲ್ಲಿ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ನಾವು ಶಿಕ್ಷಣ ಕೊಡುತ್ತಿಲ್ಲ ಮಕ್ಕಳಿಒಗೂ ಶಿಕ್ಷಷಣಂದ ದೂರು ಇಡುಇವಪ್ರಯತ್ನ ಮಾಡುತ್ತಿರುವುದು ಅತ್ಯಂತ ದುಖದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಡಾ.ಅಂಬೇಡ್ಕರ್ ರವರು ಮಹಿಳಾ ವಿಮೋಚಕ ಎಂದರೆ ತಪ್ಪಾಗಲಾರದು ಏಕೆಂದರೆ ಭಾರತದ ಮಹಿಳೆಯರಿಗೆ ಇವರ ಕೊಡುಗೆ ಅಪಾರ. ಹಾಗೆಯೆ ಕಾರ್ಮಿಕರ ವಿಮೋಕರು ಹೌದು ಇಂದು ಕಾರ್ಮಿಕರಿಗೆ ಕೂಲಿ ಸಿಗುತ್ತಿದೆ ಎಂದರೆ ಅದು  ಡಾ.ಅಂಬೇಡ್ಕರ್ ರವರಿಂದ ಮಾತ್ರ ಹೀಗೆ ಹತ್ತು ಅವರ ಬಗ್ಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೆ ಇರುತ್ತದೆ. ನಾವುಗಳು ಕೂಡ ನಮ್ಮ ಮಕ್ಕಳಿಗೆ ಮುಂದಿನ ಪೀಳಿಗೆಗೆ ಸಂವಿಧಾನವನ್ನು ಅರ್ಥ ಮಾಡಿಸುವುದು ಶಿಕ್ಷಣ, ಸಂಘಟನೆ, ಹೋರಾಟ ಈ ಮೂರು ದಾರಿಗಳ ಬಗ್ಗೆ ಅರಿವು ಮೂಡಿಸಿ ಮಕ್ಕಳನ್ನು ಶಿಷ್ಕಿತರಾಗಿ ಮಾಡುವುದು ನಮ್ಮಲ್ಲರ ಕರ್ತವ್ಯ ಎಂದರು ಕಾರ್ಯಕ್ರಮದಲ್ಲಿ ಡಾ ಶಿವಕುಮಾರ್‌ ಅಕ್ಕಾ ಅಕಾಡೆಮಿ, ಹೆಚ್‌ ಕೆ ಸಂದೇಶ್‌, ಶಾಸಕರಾದ ಹೆಚ್‌ ಕೆ ಸುರೇಶ್‌, ಮಾಜಿ ಅದ್ಯಕ್ಷರು ಎಂ.ಆರ್‌ ವೆಂಕಟೇಶ್‌, ಡಿಜೆ ಬ್ರಹ್ಮೇಶ್ ರವರ ಅಧ್ಯಕ್ಷತೆಯಲ್ಲಿ ಆಶಾ ಶಾಂತಯ್ಯನವರು ಗ್ರಾಮ ಪಂಚಾಯತ್ ಸದಸ್ಯರು, ಹರೀಶ್ ರವರು ಗ್ರಾಮ ಪಂಚಾಯಿತಿ ಸದಸ್ಯರು, ಮಂಜುಳಾ ಸುನಿಲ್ ಕುಮಾರ್, ಮಹಾ ನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕರ ಬಳಗ ದೇವಿಹಳ್ಳಿ ಹಾಗೂ ದೇವಿ ಹಳ್ಳಿ ಗ್ರಾಮಸ್ಥರು ಇನ್ನಿತರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page