ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಹಾಸನ ವಕ್ಪ್ ಬೋರ್ಡ್ ಕಛೇರಿಯಿಂದ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೂ ಜಾಗೃತಿಗಾಗಿ – ಅಕ್ಮಲ್ ಜಾವೀದ್

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌ ರಾಜ್ಯ

• 1 ನಿಮಿಷದ ಓದು

ಹಾಸನ ವಕ್ಪ್ ಬೋರ್ಡ್ ಕಛೇರಿಯಿಂದ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೂ ಜಾಗೃತಿಗಾಗಿ  – ಅಕ್ಮಲ್ ಜಾವೀದ್

ಹಾಸನ : ಏಪ್ರಿಲ್ 23ರ ಬೆಳಗ್ಗೆ 10.30ಕ್ಕೆ ಹಾಸನದ ವಕ್ಪ್ ಬೋರ್ಡ್ ಕಛೇರಿಯಿಂದ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೂ ಜಾಗೃತಿಗಾಗಿ ಜಾಥ ಹೊರಡುವುದಾಗಿ ವೀರ ಕನ್ನಡಿಗ ಟಿಪ್ಪು ಸೇನೆ ಸಂಸ್ಥಾಪಕ ಅಧ್ಯಕ್ಷ ಅಕ್ಮಲ್ ಜಾವೀದ್ ಮತ್ತು ಸಮಾಜ ಸೇವಕ ಅಜಮ್ ಖಾನ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ವಕ್ಸ್ ಕಾಯ್ದೆ 2025 ಈ ವಕ್ಪ್ ಕಾಯ್ದೆ ಜಾರಿ ಮಾಡಿರುವ ಮತ್ತು ತಿದ್ದುಪಡಿ ಮಾಡಿರುವ ನಮ್ಮ ಕೇಂದ್ರ ಸರ್ಕಾರದಲ್ಲಿ ನಾವು ಮುಸ್ಲಿಂ ಸಮುದಾಯದ ನಾಯಕರಲ್ಲಿ ಹಾಗೂ ಮುಸ್ಲಿಂ ಸಮುದಾಯಗಳ ಧಾರ್ಮಿಕ ಮುಖಂಡರುಗಳಲ್ಲಿ ಮುಸ್ಲಿಂ ಸಮುದಾಯದ ಗ್ರಂಥಗಳನ್ನು ಅಧ್ಯಯನ ಮಾಡದೆ, ನಮ್ಮ ರಾಷ್ಟçದ ಗೌರವಾನ್ವಿತ ಪ್ರಧಾನಮಂತ್ರಿಗಳು ಮತ್ತು ರಾಷ್ಟçಪತಿಯಿಂದ ತುರ್ತಾಗಿ ಅನುಮತಿ ಪಡೆದಿರುವ ಕರಡು ಬಿಲ್ಲನ್ನು ರಾಷ್ಟಾçಧ್ಯಂತ ಮುಸ್ಲಿಂ ಸಮುದಾಯ ಒಪ್ಪಲು ಅಸಾಧ್ಯ, ಈ ಬಿಲ್ಲಿನಲ್ಲಿ ಬಹಳಷ್ಟು ಲೋಪ ದೋಷಗಳಿದ್ದು, ಹಾಗೂ ಸದರಿ 10 ವರ್ಷಕ್ಕೂ ಅಧಿಕಾರದಲ್ಲಿದ್ದು, ಸಹ ಭ್ರಷ್ಟಾಚಾರ ಮಾಡಿರುವ ವಕ್ಸ್ ಆಸ್ತಿಗಳು ಲೂಟಿ ಮಾಡಿರುವ ಪ್ರಭಾವಿಗಳ ಮೇಲೆ ಕ್ರಮಗಳು ಏನು? ಇದನ್ನು ತಿಳಿದುಕೊಳ್ಳಲು ನಾವುಗಳು ಸರ್ವಾನುಮತದಿಂದ ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿಯವರಿಗೆ ಪ್ರಶ್ನಿಸಿದ್ದು, ಇದಕ್ಕೆ ಮುಸ್ಲಿಂ ಸಮುದಾಯದವರು ಕೇಳುತ್ತಿರುವ ಪ್ರಶ್ನೆಗಳಿಗೆ ಪೂರ್ಣ ಪ್ರಮಾಣದ ಉತ್ತರ ನೀಡಬೇಕೆಂದು ವಿನಂತಿಸುತ್ತೇವೆ ಎಂದರು.

ನಮ್ಮ ಪೂರ್ವಿಕರು ಮುಸ್ಲಿಂ ಸಮಾಜದ ಏಳಿಗೆಗಾಗಿ ದಾನದ ರೂಪದಲ್ಲಿ ನೀಡಿರುವ ಆಸ್ತಿ ಆಗಿದ್ದು, ಈ ಆಸ್ತಿಗಳನ್ನು ಸಂರಕ್ಷಿಸಿಕೊಳ್ಳಲು ಹಾಗೂ ಇದರ ನಿರ್ವಹಣೆಗಾಗಿ ರೂಪಿಸಿರುವ ಅಂಗವೇ ‘ವಕ್ಸ್ ಬೋರ್ಡ್’. ಇದಕ್ಕೆ ಯಾವುದೇ ಸರ್ಕಾರ ಯಾವುದೇ ರೀತಿಯ ಆಸ್ತಿಯನ್ನು ನೀಡಿರುವುದಿಲ್ಲ. ಮುಸ್ಲಿಮರಿಂದ ಮುಸ್ಲಿಮರಿಗೆ ದಾನದ ರೂಪದಲ್ಲಿ ಬಂದಿರುವ ಆಸ್ತಿಯನ್ನು ಸಂರಕ್ಷಿಸಿ ನಿರ್ವಹಿಸಲು ಇದರ ಪ್ರತಿಫಲವನ್ನು ಸಮಾಜದ ಫಲಾನುಭವಿಗಳಿಗೆ ನ್ಯಾಯೋಚಿತವಾಗಿ ವಿತರಿಸಲು ಸರ್ಕಾರದ ಅಡಿಯಲ್ಲಿ ರೂಪಿಸಲಾಗಿರುವ ಘನ ಉದ್ದೇಶದ ಸಂಸ್ಥೆ ಅಷ್ಟೇ. ಇದರಲ್ಲಿ ನಮ್ಮ ರಾಷ್ಟçದ ಪ್ರಧಾನಿಗಳು ಮುಸ್ಲಿಂ ಸಮುದಾಯದ ಏಳಿಗೆಗಾಗಿ ವಕ್ಸ್ ಮಂಡಳಿಗೆ ನೀಡಿರುವ ಸ್ಥಿರಾಸ್ತಿ ಮತ್ತು ದಾನದ ರೂಪದಲ್ಲಿ ನೀಡಿರುವ ಆಸ್ತಿಗಳ ವಿವರಗಳ ಬಗ್ಗೆ ಸ್ವವಿಮರ್ಶೆ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.


ಮುಸ್ಲಿಂ ಸಮುದಾಯದ ವಕ್ಸ್ ಬಿಲ್ಲು ತಿದ್ದುಪಡಿಗಾಗಿ ‘ವಿಧಾನಸೌಧ ಚಲೋ ಮತ್ತು ಮಾನ್ಯ ರಾಜ್ಯಪಾಲರು, ಮಾನ್ಯ ಮುಖ್ಯಮಂತ್ರಿಗಳು ವಕ್ಸ್ ಸಚಿವರು, ವಕ್ಸ್ ಮಂಡಳಿಯ ರಾಜ್ಯಾಧ್ಯಕ್ಷರು ನಮ್ಮಗಳ ಮನವಿಯನ್ನು ಸಲ್ಲಿಸಲು ಹೊರಟಿರುವ ಕರ್ನಾಟಕದ ಸಹಸ್ರಾರು ಮುಸ್ಲಿಂ ಬಾಂಧವರು ಹಾಗೂ ಹಿತೈಷಿಗಳು, ಈ ಜಾಗೃತಿ ಜಾಥ ದಲ್ಲಿ ಸ್ವಯಂ ಪ್ರೇರಿತರಾಗಿ ಸ್ವಂತ ಖರ್ಚಿನಿಂದ ಬನ್ನಿ ಸಮಾಜಕ್ಕಾಗಿ ಶ್ರಮಿಸೋಣ ಹಾಗೂ ಮುಸ್ಲಿಂ ಏಳಿಗೆಗಾಗಿ ಐಕ್ಯತೆಯಿಂದ ಒಂದುಗೂಡೋಣ ನಮ್ಮ ಆಸ್ತಿ ನಮಗೆ ಇರಲಿ, ಇನ್ನೊಬ್ಬರ ಆಸ್ತಿ ನಮಗೆ ಬೇಡ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜ ಸೇವಕ ಅಜಮ್ ಖಾನ್, ವೀರ ಕನ್ನಡಿಗ ಟಿಪ್ಪು ಸೇನೆ ತಾಲೂಕು ಅಧ್ಯಕ್ಷ ಮುಶೀರ ಅಹಮದ್, ಅರಕಲಗೂಡು ತಾಲೂಕು ಅಧ್ಯಕ್ಷ ಜಮೀರ್ ಅಹಮದ್, ಸಕಲೇಶಪುರ ತಾಲೂಕು ಅಧ್ಯಕ್ಷ ಕಫೀಲ್ ಪಾಶ, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಫಾರೂಕ್ ಇತರರು ಉಪಸ್ಥಿತರಿದ್ದರು.

ವಿಷಯಗಳು: #karnataka #news #peepal #politics
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು