Wednesday, April 23, 2025

ಸತ್ಯ | ನ್ಯಾಯ |ಧರ್ಮ

ಭಯೋತ್ಪಾದಕ ದಾಳಿ : ಶಂಕಿತರ ಫೋಟೋ ಬಿಡುಗಡೆ ಮಾಡಿದ ಜಮ್ಮು ಕಾಶ್ಮೀರ ಪೊಲೀಸರು

ಭೀಕರ ಭಯೋತ್ಪಾದಕ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಾಲ್ವರು ಭಯೋತ್ಪಾದಕರ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಇವರು ಎಲ್ ಇಟಿ ಉಗ್ರ ಸಂಘಟನೆಯ ಸದಸ್ಯರಾಗಿದ್ದಾರೆ ಎಂದು ಶಂಕಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 26 ಪ್ರವಾಸಿಗರು ಸಾವನ್ನಪ್ಪಿದ್ದರು. ಈಗಾಗಲೇ ಮುಂದಿನ ಕಾರ್ಯಾಚರಣೆ ಭಾಗವಾಗಿ ಪೊಲೀಸರು ರಾಜಧಾನಿ ದೆಹಲಿ ಸೇರಿದಂತೆ ಪ್ರಮುಖ ನಗರಗಳಿಗೆ ಕಟ್ಟೆಚ್ಚರ ಹಾಕಲಾಗಿದೆ.

ಇನ್ನು ಭಯೋತ್ಪಾದಕ ಕೃತ್ಯದ ಭಾಗವಾಗಿ ಲಷ್ಕರ್ ಉಗ್ರ ಸಂಘಟನೆಯ ಅಂಗ ಸಂಸ್ಥೆ ಎಲ್ಇಟಿ ಈ ಕೃತ್ಯದ ಹೊಣೆ ಹೊತ್ತಿದೆ. ಈಗಾಗಲೇ ಭಯೋತ್ಪಾದಕರ ಫೋಟೋಗಳನ್ನು ಬಿಡುಗಡೆ ಮಾಡಲಾಗಿದ್ದು ಉಗ್ರರನ್ನು ಅಬು, ಆಸೀಫ್. ಸುಲೇಮಾನ್ ಎಂದು ಗುರುತಿಸಲಾಗಿದೆ.

ಘಟನೆಯ ನಂತರ, ಭದ್ರತಾ ಪಡೆಗಳು ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ದಾಳಿಕೋರರನ್ನು ಇನ್ನೂ ಗುರುತಿಸಲಾಗಿಲ್ಲ, ಆದರೆ ದಾಳಿಯ ಹಿಂದಿನ ಉದ್ದೇಶ ಮತ್ತು ಜಾಲವನ್ನು ಪತ್ತೆಹಚ್ಚಲು ಗುಪ್ತಚರ ಸಂಸ್ಥೆಗಳು ಪ್ರತಿಯೊಂದು ಕೋನವನ್ನೂ ಪರಿಶೀಲಿಸುತ್ತಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page