Thursday, May 15, 2025

ಸತ್ಯ | ನ್ಯಾಯ |ಧರ್ಮ

ಪ್ರತಾಪ್ ಸಿಂಹ ಆಪ್ತನಿಂದ ಬಿಗ್ ಬಾಸ್ ಸ್ಪರ್ಧಿ ನಮ್ರತಾಗೆ ಕಿರುಕುಳ ; ರಾಜಕಾರಣಿಗಳ ಜೊತೆ ಡೇಟಿಂಗ್ ಗೆ ಒತ್ತಾಯ

ಬಿಗ್​ಬಾಸ್ ಸ್ಪರ್ಧಿ, ನಟಿ ನಮ್ರತಾ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಪದೇ ಪದೆ ಒಂದೇ ರೀತಿಯ ಸಂದೇಶ ಕಳುಹಿಸುವ ಮೂಲಕ ತೀವ್ರ ಕಿರುಕುಳ ನೀಡಿದ ಬಗ್ಗೆ ಜಾಲತಾಣದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಬೇಸತ್ತ ನಮ್ರತಾ ಆತನ ಸಂದೇಶದ ಸ್ಕ್ರೀನ್‌ ಶಾಟ್‌ ತೆಗೆದು ಸ್ಟೋರಿ ಹಂಚಿಕೊಂಡಿದ್ದು, ವ್ಯಕ್ತಿಯ ಬಂಡವಾಳವನ್ನು ಬಯಲು ಮಾಡಿದ್ದಾರೆ.

ತನ್ನ ಇನಿಸ್ಟಾಗ್ರಾಂ ಪ್ರೊಫೈಲ್ ನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಜೊತೆ ನಿಂತ ಫೋಟೋ ಇರುವ ವ್ಯಕ್ತಿ ಕಡೆಯಿಂದ ಈ ಬೇಡಿಕೆ ನಮ್ರತಾ ಗೌಡಗೆ ಬಂದಿದೆ. ಇನಿಸ್ಟಾಗ್ರಾಂ ನಲ್ಲಿ ರೋಷನ್‌ ಎಂಬ ವ್ಯಕ್ತಿ ರಾಕಿ ಜಿ43 (Rocky.g43) ಎನ್ನುವ ಖಾತೆಯಿಂದ ಹಲವು ಬಾರಿ ಸಂದೇಶಗಳನ್ನು ಕಳುಹಿಸಿದ್ದಾನೆ. ರೋಷನ್‌ ಪ್ರೊಫೈಲ್ ಪಿಕ್ಚರ್​ನಲ್ಲಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರೊಂದಿಗಿರುವ ಫೋಟೋ ಇದೆ.

“ನನಗೆ ರಾಜಕಾರಣಿ ಮತ್ತು ವಿಐಪಿಗಳ ನಂಟಿದೆ. ನಾನು ಅವರಿಗಾಗಿ ಪೇಯ್ಡ್ ಡೇಟಿಂಗ್​ಗಳನ್ನು ವ್ಯವಸ್ಥೆ ಮಾಡುತ್ತಿರುತ್ತೇನೆ. ನೀವು ಪೇಯ್ಡ್ ಡೇಟಿಂಗ್​ಗೆ ಬರಲಿಚ್ಛಿಸಿದರೆ ನಿಮ್ಮ ಶುಲ್ಕ ಹೇಳಿ. ನೀವು ಯಾವುದೇ ರೀತಿಯಲ್ಲಿ ನಿಮ್ಮ ಫೋಟೋ, ನಂಬರ್‌ ಅಥವಾ ವೈಯಕ್ತಿಕವಾಗಿ ಯಾವುದೇ ಮಾಹಿತಿಯನ್ನು ನೀಡಬೇಕಿಲ್ಲ. ನೀವು ಹೆಚ್ಚಿನ ಶುಲ್ಕವನ್ನು ಕೇಳಿದರೂ ಅದನ್ನು ನಾವು ನೀಡಲು ಸಿದ್ದ. 200% ಎಲ್ಲವೂ ಖಾಸಗಿ ಆಗಿರುತ್ತದೆ. ಯಾವುದು ಸಹ ಬಹಿರಂಗ ಆಗುವುದಿಲ್ಲ. ನಿಮಗೆ ಆಸಕ್ತಿ ಇದ್ದರೆ ಪ್ರತಿಕ್ರಿಯಿಸಿ” ಎಂದು ರೋಷನ್‌ ಎರಡು ಮೂರು ಬಾರಿ ನಮ್ರತಾ ಅವರಿಗೆ ಸಂದೇಶ ಕಳಿಸಿದ್ದಾನೆ.

ರೋಷನ್‌ ಕಳುಹಿಸಿರುವ ಸಂದೇಶದ ಸ್ಕ್ರೀನ್‌ ಶಾಟ್‌ ಹಂಚಿಕೊಂಡು ಸಾಕಿನ್ನು ನಿಲ್ಲಿಸು ಎಂದು ನಮ್ರತಾ ಬರೆದುಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page