Thursday, May 29, 2025

ಸತ್ಯ | ನ್ಯಾಯ |ಧರ್ಮ

ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ; ಮಸೂದೆ ವಾಪಸ್ ಕಳಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಸರ್ಕಾರಿ ಕಾಮಗಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕಲ್ಪಿಸುವಂತ ಮಸೂದೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಾಪಸ್ ಕಳಿಸಿದ್ದಾರೆ.ಈ ಹಿಂದೆ ಸರ್ಕಾರಿ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡುವಂತ ಮಸೂದೆಯನ್ನು ವಾಪಾಸ್ ಕಳುಹಿಸಿದ್ದರು. ಆ ಬಳಿಕ ಸ್ಪಷ್ಟೀಕರಣದೊಂದಿಗೆ ವಿಧೇಯಕ ಮರು ಸಲ್ಲಿಕೆ ಮಾಡಲಾಗಿತ್ತು. ಆದರೆ ಈಗ ಮತ್ತೆ ಅದನ್ನು ವಾಪಸ್ ಕಳಿಸಿದ್ದಾರೆ.

ಮಸೂಧೆಗೆ ಸದನದಲ್ಲಿ ಅಂಗೀಕಾರ ನೀಡಲಾಗಿತ್ತು. ಇದಕ್ಕೆ ರಾಜ್ಯಪಾಲರ ಅಂಕಿತ ಒಂದು ಬಾಕಿ ಇತ್ತು. ಆದರೆ ರಾಜ್ಯಪಾಲರು ಎರಡೆರಡು ಬಾರಿ ಮಸೂದೆಗೆ ಸಹಿ ಹಾಕದೇ ವಾಪಸ್ ಮಾಡಿದ್ದು ಸರ್ಕಾರದ ಮುಂದಿನ ನಡೆ ಬಗ್ಗೆ ಕುತೂಹಲಕ್ಕೆ ಕಾರಣವಾಗಿದೆ.

ಆದರೇ ಹಿಂದಿನ ನಿರ್ಧಾರ ಮರುಪರಿಶೀಲನೆಗೆ ರಾಜ್ಯಪಾಲರು ಒಪ್ಪದೇ ಇದೀಗ ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ವಿಧೇಯಕವನ್ನು ವಾಪಾಸ್ ಕಳುಹಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತೆ ಹಿನ್ನಡೆಯಾದಂತೆ ಆಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page