Saturday, June 7, 2025

ಸತ್ಯ | ನ್ಯಾಯ |ಧರ್ಮ

ಮಹಾರಾಷ್ಟ್ರದ ಚುನಾವಣೆಯಲ್ಲಿ ಬಿಜೆಪಿ ಐದು ಹಂತದ ಕುತಂತ್ರಗಳು: ರಾಹುಲ್‌ಗಾಂಧಿ

ಹೊಸದಿಲ್ಲಿ: ಕಳೆದ ನವೆಂಬರ್ 2024ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಐದು ಹಂತದ ಮ್ಯಾಜ್‌ ಫಿಕ್ಸಿಂಗ್‌ ಮಾಡಿಕೊಂಡಿದೆ. ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ನಡೆದಿದ್ದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಹಾಗೂ ಅಜಿತ್ ಪವಾರ್ ನಾಯಕತ್ವದ ಎನ್‌ಸಿಪಿಯನ್ನು ಒಳಗೊಂಡಿರುವ ಮಹಾಯುತಿ ಮೈತ್ರಿಕೂಟವು 288 ಸ್ಥಾನಗಳ ಪೈಕಿ, 235 ಸ್ಥಾನಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿತ್ತು. ಈ ಪೈಕಿ ಬಿಜೆಪಿಯೊಂದೇ 132 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಕುರಿತು Indian Express ದಿನಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಲೇಖನ ಬರೆದಿರುವ ರಾಹುಲ್ ಗಾಂಧಿ, ಬಿಜೆಪಿಯ ಗೆಲುವಿನ ಹಿಂದಿನ ಕುತಂತ್ರಗಳ ಬಗ್ಗೆ ಮಾತನಾಡಿದ್ದಾರೆ.

“ಮೊದಲ ಹಂತ ಚುನಾವಣಾ ಆಯೋಗ ನೇಮಕಾತಿಯ ತಿರುಚುವಿಕೆ, ಎರಡನೆ ಹಂತ ಮತಪಟ್ಟಿಗೆ ನಕಲಿ ಮತದಾರರ ಸೇರ್ಪಡೆ, ಮೂರನೆಯ ಹಂತ ಮತದಾನ ಪ್ರಮಾಣದಲ್ಲಿ ಏರಿಕೆ, ನಾಲ್ಕನೆಯ ಹಂತ ಬಿಜೆಪಿ ಗೆಲ್ಲಬೇಕಾದ ಅಗತ್ಯವಿರುವೆಡೆ ನಕಲಿ ಮತದಾನ ನಡೆಸುವುದು ಹಾಗೂ ಐದನೆಯ ಹಂತ ಸಾಕ್ಷ್ಯಾಧಾರಗಳನ್ನು ಬಚ್ಚಿಡುವುದು” ಎಂದು ರಾಹುಲ್‌ ಗಾಂಧಿ ಆರೋಪ ಮಾಡಿದ್ದಾರೆ. ಅಲ್ಲದೆ ಈ ಲೇಖನದ ಪುಟವನ್ನು ಅವರು ತಮ್ಮ ಎಕ್ಸ್ ಪೋಸ್ಟ್‌ನೊಂದಿಗೂ ಹಂಚಿಕೊಂಡಿದ್ದಾರೆ.

ನಾನು ಸಣ್ಣ ಪ್ರಮಾಣದ ವಂಚನೆಯ ಕುರಿತು ಮಾತನಾಡುತ್ತಿಲ್ಲ. ಬದಲಿಗೆ ನಮ್ಮ ರಾಷ್ಡ್ರೀಯ ಸಂಸ್ಥೆಗಳನ್ನು ಕೈವಶ ಮಾಡಿಕೊಂಡು ಬೃಹತ್ ಪ್ರಮಾಣದ ವಂಚನೆ ಎಸಗಲಾಗಿದೆ ಎಂದು ಅವರು ದೂರಿದ್ದಾರೆ.

ಆದರೆ, ರಾಹುಲ್ ಗಾಂಧಿಯ ಆರೋಪಗಳನ್ನು ತಳ್ಳಿ ಹಾಕಿರುವ ಚುನಾವಣಾ ಆಯೋಗ, ನಮ್ಮ ಕಾರ್ಯವಿಧಾನ ಸ್ವಾಯತ್ತವಾಗಿಯೇ ಉಳಿದಿದ್ದು, ನಾವು ಸಾಂವಿಧಾನಿಕ ಕಾನೂನುಗಳಿಗೆ ಕಟಿಬದ್ಧವಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದೆ.

ಈ ನಡುವೆ, ರಾಹುಲ್ ಗಾಂಧಿಯ ಆರೋಪಗಳನ್ನು ‘ಅಪಮಾನಕಾರಿ’ ಎಂದು ಟೀಕಿಸಿರುವ ಬಿಜೆಪಿ, “ರಾಷ್ಟ್ರೀಯ ಸಂಸ್ಥೆಗಳಿಗೆ ಕಳಂಕ ಹಚ್ಚುವ ಕೆಲಸ ಮಾಡಿದೆ. ಈ ಆರೋಪಗಳ ಕುರಿತು ಚುನಾವಣಾ ಆಯೋಗವು ಪದೇ ಪದೇ ನಿಖರವಾಗಿ ವಿವರಿಸಿದ್ದರೂ ರಾಹುಲ್‌ ಗಾಂಧಿ ಹೀಗೆ ಮಾತನಾಡುವುದು ಸರಿಯಲ್ಲ ಎಂದು ಪ್ರತ್ಯುತ್ತರ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page