Friday, June 14, 2024

ಸತ್ಯ | ನ್ಯಾಯ |ಧರ್ಮ

ನಕಲಿ ವೀಸಾ-ಪಾಸ್‌ಪೋರ್ಟ್ ದಂದೆ : ಐವರು ಬಂಧನ

ನವದೆಹಲಿ:  ದೆಹಲಿ ಪೊಲೀಸರು ಪ್ರಮುಖ ನಕಲಿ ಪಾಸ್‌ಪೋರ್ಟ್ ಮತ್ತು ವೀಸಾ ದಂಧೆಯನ್ನು ನಡೆಸುತ್ತಿದ್ದ ತಂಡವನ್ನು ಭೇಧಿಸಿದ್ದು, ಇಂದಿರಾಗಾಂಧಿ ಇಂಟರ್‌ ನ್ಯಾಷನಲ್‌ (ಐಜಿಐ) ವಿಮಾನ ನಿಲ್ದಾಣದ ಘಟಕವು ಅವರನ್ನು ಬಂಧಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 325 ನಕಲಿ ಪಾಸ್‌ಪೋರ್ಟ್‌ಗಳು ಮತ್ತು 1,200 ನಕಲಿ ಸ್ಟಾಂಪ್‌ಗಳನ್ನು ವಶಪಡಿಸಿಕೊಳ್ಳಾಗಿದೆ.

ಈ ಕುರಿತು ಮಾಹಿತಿ ನೀಡಿರುವ  ಡಿಸಿಪಿ (ಐಜಿಐ) ತನು ಶರ್ಮಾ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಪ್ರಯಾಣಿಕ ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ವಶಪಡಿಸಿಕೊಂಡಿರುವ ನಕಲಿ ಪಾಸ್‌ಪೋರ್ಟ್‌ಗಳು ಮತ್ತು ನಕಲಿ ವೀಸಾಗಳ ಬಗ್ಗೆಯೂ ಮಾಹಿತಿ ನೀಡಿರುವ ಅವರು, ಬಂಧಿತರಿಂದ ಆಸ್ಟ್ರೇಲಿಯಾ, ಚೀನಾ, ಮತ್ತು ಇತರ ಯುರೋಪಿಯನ್‌ ರಾಷ್ಟ್ರಗಳು ಸೇರಿದಂತೆ ಒಟ್ಟು 325 ನಕಲಿ ಪಾಸ್‌ಪೊರ್ಟ್‌ಗಳು ಮತ್ತು 175 ಕ್ಕೂ ಹೆಚ್ಚು ನಕಲಿ ವೀಸಾಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು