Tuesday, July 1, 2025

ಸತ್ಯ | ನ್ಯಾಯ |ಧರ್ಮ

‘ಬ್ಯಾಂಗಲ್ ಬಂಗಾರಿ’ಗೆ ಭರ್ಜರಿ ರೆಸ್ಪಾನ್ಸ್… ಎಕ್ಕ ಸಿನಿಮಾದ ಲವ್ ನಂಬರ್ ಗೆ 10 ಮಿಲಿಯನ್ ವೀವ್ಸ್

ಎಕ್ಕ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಗೀತೆ ಎಲ್ಲೆಡೆ ವೈರಲ್ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ನಾಯಕ ಯುವರಾಜ್ ಕುಮಾರ್ ಹಾಗೂ ನಾಯಕಿ ಸಂಜನಾ ಆನಂದ್ ಬ್ಯಾಂಗಲ್ ಬಂಗಾರಿ ಅಂತಾ ಕುಣಿದು ಕುಪ್ಪಳಿಸಿದ್ದರು.

ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದ ಹಾಡಿಗೆ ಆಂತೋನಿ ದಾಸ್ ಕಂಠ ಕುಣಿಸಿದ್ದರು. ಚರಣ್ ರಾಜ್ ಸಂಗೀತ, ಯುವ-ಸಂಜನಾ ಕುಣಿದ ಬಂಗಾಲ್ ಬಂಗಾರಿ ಗೀತೆ ಸಖತ್ ಹಿಟ್ ಕಂಡಿದೆ. ಕೇವಲ 22 ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್ ವೀಕ್ಷಣೆ ಕಂಡಿರುವ ಹಾಡು, ಟಾಪ್ ಮ್ಯೂಸಿಕ್ ವಿಡಿಯೋ ಕೆಟಗರಿಯಲ್ಲಿ 29ನೇ ಸ್ಥಾನ ಪಡೆದಿದೆ. ಅತಿ ಕಡಿಮೆ ಸಮಯದಲ್ಲಿ ಬ್ಯಾಂಗಲ್ ಬಂಗಾರಿ ದಾಖಲೆ ಬರೆದಿದ್ದು, ಚಿತ್ರತಂಡದ ಖುಷಿಗೆ ಕಾರಣವಾಗಿದೆ.

ನಾಯಕಿ ಸಂಜನಾ ಆನಂದ್ ಇಲ್ಲಿ ಬ್ಯಾಂಗಲ್ ಬಂಗಾರಿ ಆಗಿದ್ದಾರೆ. ಯವರಾಜ್ ಕುಮಾರ್ ಲೈಫ್ ಅಲ್ಲಿ ಬರೋ ಈ ಬಂಗಾರಿಗೆ ಬ್ಯಾಂಗಲ್ ತೊಡಿಸಿದಾಗ ಶುರು ಆಗೋ ಹಾಡು ಇದಾಗಿದೆ. ಸಂಭ್ರಮಾಚರಣೆಯ ಕ್ಷಣದ ಈ ಗೀತೆಗೆ ಮುರಳಿ ಮಾಸ್ಟರ್ ಒಳ್ಳೆ ಸ್ಟೆಪ್‌ಗಳನ್ನೆ ಕಂಪೋಸ್ ಮಾಡಿದ್ದಾರೆ.

ಎಕ್ಕ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತದ ಮೋಡಿ ಇಡೀ ಚಿತ್ರಕ್ಕಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಒಟ್ಟಿಗೆ ಸೇರಿ ಈ ಚಿತ್ರವನ್ನ ನಿರ್ಮಿಸಿದ್ದಾರೆ.

ಚಿತ್ರದಲ್ಲಿ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ನಟಿಸಿದ್ದಾರೆ. ಬಾಲಿವುಡ್‌ನ ಅತುಲ್ ಕುಲಕರ್ಣಿ ಕೂಡ ನಟಿಸಿದ್ದಾರೆ. ಇವರಲ್ಲದೆ ಈ ಚಿತ್ರದಲ್ಲಿ ಸಂಜನಾ ಆನಂದ್ , ಸಂಪದಾ ಸೇರಿ ಇಬ್ಬರು ನಾಯಕಿಯರಿದ್ದಾರೆ. ಜುಲೈ-18 ರಂದು ಎಕ್ಕ ಸಿನಿಮಾ ಬಿಡುಗಡೆಯಾಗುತ್ತಿದ್ದು, ಯುವರಾಜ್ ಕುಮಾರ್ ಎರಡನೇ ಸಿನಿಮಾ ಇದಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page