Tuesday, July 1, 2025

ಸತ್ಯ | ನ್ಯಾಯ |ಧರ್ಮ

“I LOVE YOU” ಎನ್ನುವುದು ಭಾವನೆಗಳ ಅಭಿವ್ಯಕ್ತಿ ಅಷ್ಟೇ, ಲೈಂಗಿಕ ಉದ್ದೇಶವೇ ಇರಬೇಕೆಂದಿಲ್ಲ: ಹೈಕೋರ್ಟ್

‘ಐ ಲವ್ ಯು’ ಎಂದು ಹೇಳುವುದು ಕೇವಲ ಭಾವನೆಗಳ ಅಭಿವ್ಯಕ್ತಿಯಾಗಿದ್ದು, ಅದು “ಲೈಂಗಿಕ ಉದ್ದೇಶ” ಕ್ಕೆ ಸಮನಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಹೇಳಿದೆ. ಈ ನಿರ್ಣಯದ ಮೂಲಕ 2015 ರಲ್ಲಿ ಹದಿಹರೆಯದ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದ 35 ವರ್ಷದ ವ್ಯಕ್ತಿಯನ್ನು ಖುಲಾಸೆಗೊಳಿಸಿದೆ.

ಯಾವುದೇ ಲೈಂಗಿಕ ಉದ್ದೇಶದಲ್ಲಿ ಅನುಚಿತ ಸ್ಪರ್ಶ, ಬಲವಂತವಾಗಿ ಬಟ್ಟೆ ಬಿಚ್ಚುವುದು, ಅಸಭ್ಯ ಸನ್ನೆಗಳು ಅಥವಾ ಮಹಿಳೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಮಾಡಿದ ಟೀಕೆಗಳು ಸೇರಿರುತ್ತವೆ ಎಂದು ನ್ಯಾಯಮೂರ್ತಿ ಊರ್ಮಿಳಾ ಜೋಶಿ-ಫಾಲ್ಕೆ ಅವರ ಪೀಠ ನೀಡಿದ ಆದೇಶದಲ್ಲಿ ತಿಳಿಸಿದೆ.

ದೂರಿನ ಪ್ರಕಾರ, ಆರೋಪಿತ ವ್ಯಕ್ತಿ ನಾಗ್ಪುರದಲ್ಲಿ 17 ವರ್ಷದ ಸಂತ್ರಸ್ತೆಯನ್ನು ತಡೆದು, ಆಕೆಯ ಕೈ ಹಿಡಿದು ‘I LOVE YOU’ ಎಂದು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಪೋಕ್ಸೊ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆತನನ್ನು ದೋಷಿ ಎಂದು ಘೋಷಿಸಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಸಂತ್ರಸ್ತೆಯೊಂದಿಗೆ ಲೈಂಗಿಕ ಸಂಪರ್ಕ ಸಾಧಿಸುವುದು ಆತನ ನಿಜವಾದ ಉದ್ದೇಶವಾಗಿತ್ತು ಎಂದು ಸೂಚಿಸಲು ಯಾವುದೇ ಬಲವಾದ ದಾಖಲೆಗಳು ಇಲ್ಲ ಎಂದು ಹೇಳಿ, ಹೈಕೋರ್ಟ್ ಆ ವ್ಯಕ್ತಿಯ ಶಿಕ್ಷೆಯನ್ನು ರದ್ದುಗೊಳಿಸಿದೆ.

I LOVE YOU ಎಂದು ವ್ಯಕ್ತಪಡಿಸಿದ ಪದಗಳು ಕಾನೂನಿನ ದಾಖಲೆಗಳಲ್ಲಿ ಸೂಚಿಸಿದಂತೆ ಲೈಂಗಿಕ ಉದ್ದೇಶಕ್ಕೆ ಸಮನಾಗಿರುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ. I LOVE YOU ಎಂದು ಹೇಳುವುದರ ಹಿಂದಿನ ನಿಜವಾದ ಉದ್ದೇಶ ಲೈಂಗಿಕತೆಯ ಕೋನವನ್ನು ಎಳೆಯುವುದಾಗಿತ್ತು ಎಂಬುದನ್ನು ಸೂಚಿಸಲು ಇನ್ನೂ ಹೆಚ್ಚಿನ ಏನಾದರೂ ಇರಬೇಕು ಎಂದು ಹೈಕೋರ್ಟ್ ಹೇಳಿದೆ.

ಪ್ರಕರಣದಲ್ಲಿ ಹುಡುಗಿ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಆರೋಪಿ ವ್ಯಕ್ತಿ ಆಕೆಯ ಕೈ ಹಿಡಿದು, ಆಕೆಯ ಹೆಸರು ಕೇಳಿ “I LOVE YOU” ಎಂದು ಹೇಳಿದ್ದಾನೆ. ಹುಡುಗಿ ಆ ಸ್ಥಳದಿಂದ ಹೊರಟು ಮನೆಗೆ ಹೋಗಿ ಘಟನೆಯ ಬಗ್ಗೆ ತನ್ನ ತಂದೆಗೆ ತಿಳಿಸಿದಳು. ಅದಾದ ನಂತರ ಆತನ ಮೇಲೆ ಎಫ್‌ಐಆರ್ ದಾಖಲಿಸಲಾಯಿತು.

“ಯಾರಾದರೂ ತಾನು ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದರೆ ಅಥವಾ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದರೆ ಅದು ಯಾವುದೇ ರೀತಿಯ ಲೈಂಗಿಕ ಉದ್ದೇಶವನ್ನು ತೋರಿಸುವ ಉದ್ದೇಶಕ್ಕೆ ಸಮನಾಗುವುದಿಲ್ಲ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page