Friday, July 11, 2025

ಸತ್ಯ | ನ್ಯಾಯ |ಧರ್ಮ

ಜನ ಸಮಸ್ಯೆ ಹೇಳ್ಕೊಂಡ್ರೆ ‘ಜೈ ಶ್ರೀರಾಮ್’ ಘೋಷಣೆ ಕೂಗಿ ಪಲಾಯನಗೈದ ಬಿಜೆಪಿ ಸಚಿವ

ಧಾರ್ಮಿಕ ವಿಚಾರಗಳಿಂದಲೇ ಜನರ ಭಾವನೆಗಳನ್ನು ಕೆರಳಿಸಿ ಮತ ಬೇಟೆ ಮಾಡುತ್ತಿದ್ದ ಬಿಜೆಪಿಯ ಅಸಲಿ ಬಣ್ಣ ಮತ್ತೆ ಬಯಲಾಗಿದೆ. ಉತ್ತರ ಪ್ರದೇಶದಲ್ಲಿ ಸಮಸ್ಯೆ ಹೇಳಿಕೊಂಡು ಬಂದ ಜನರ ನಡುವೆ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿ ಜನರ ಗಮನ ಬೇರೆಡೆಗೆ ಸೆಳೆದು ಸಚಿವನೊಬ್ಬ ಪಲಾಯನ ಮಾಡಿದ ಘಟನೆ ಈಗ ಎಲ್ಲೆಡೆ ವೈರಲ್ ಆಗಿದೆ.

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಸರ್ಕಾರ ರಚನೆಗೂ ಮುನ್ನ 24 ಗಂಟೆ ವಿದ್ಯುತ್ ಸೇರಿದಂತೆ ಇನ್ನಿತರ ಭರವಸೆಗಳನ್ನು ನೀಡಿತ್ತು. ಆದಿತ್ಯನಾಥ್ ಸಂಪುಟದ ಸಚಿವನಿಗೆ ಜನರು ಹೂಮಾಲೆ, ಘೋಷಣೆಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸುತ್ತಾ ಈ ಬಗ್ಗೆ ಒಂದೊಂದಾಗಿ ಪ್ರಶ್ನಿಸಲು ಶುರು ಮಾಡಿದ್ದಾರೆ. ಜನರು ಸಚಿವ ಬಳಿ ಕಷ್ಟ ಹೇಳಿಕೊಳ್ಳಲು ಬಂದಾಕ್ಷಣ ವಾತಾವರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

‘ಸಚಿವರೇ, 24 ಗಂಟೆ ವಿದ್ಯುತ್ ಭರವಸೆ ನೀಡಿದ್ದೀರಿ, ಆದರೆ 3 ಗಂಟೆಯೂ ಸಿಗುತ್ತಿಲ್ಲ!’ ಎಂದು ಒಬ್ಬ ಸಮಸ್ಯೆ ಹೇಳಿಕೊಳ್ಳುತ್ತಾನೆ. ಅದರ ಹಿಂದೆಯೇ ಮತ್ತೋರ್ವ ‘ವ್ಯಾಪಾರ ಸಮುದಾಯ ಸಂಕಷ್ಟದಲ್ಲಿದೆ, ಏನಾದರೂ ಮಾಡಿ!’ ಎಂದು ಅಂಗಲಾಚಿದ ದೃಶ್ಯ ವಿಡಿಯೋದಲ್ಲಿ ಸ್ಪಷ್ಟವಾಗಿ ಬಂದಿದೆ.

ಜನ ಅಷ್ಟೆಲ್ಲಾ ಸಮಸ್ಯೆ ಹೇಳಿಕೊಳ್ಳುವಾಗ ಸಚಿವ ಸ್ವಲ್ಪ ಕೂಡ ಅವರಿಗೆ ಸ್ಪಂದಿಸಿದಂತೆ ಕಂಡಿಲ್ಲ. ಬದಲಾಗಿ ಜನರ ದೂರುಗಳೇ ಜೋರಾದಾಗ, ಸಚಿವರು ಇದ್ದಕ್ಕಿದ್ದಂತೆ ‘ಜೈ ಶ್ರೀ ರಾಮ್’, ‘ಜೈ ಬಜರಂಗಬಲಿ’ ಎಂದು ಘೋಷಣೆ ಕೂಗಲು ಶುರುಮಾಡುತ್ತಾರೆ. ಆ ಘೋಷಣೆಗೆ ಅವರ ಜೊತೆಗಿದ್ದ ಬೆಂಬಲಿಗರೂ ಸಹ ದನಿಗೂಡಿದ್ದು ವಿಡಿಯೋದಲ್ಲಿ ಕಂಡು ಬಂದಿದೆ. 

ಆ ಕ್ಷಣ ಸಮಸ್ಯೆ ಹೇಳಿಕೊಳ್ಳಲು ಬಂದ ಜನ ಏಕಾಏಕಿ ವಿಚಲಿತರಾದಂತೆ ಕಂಡುಬಂದಿದೆ. ನೋಡು ನೋಡುತ್ತಿದ್ದಂತೆಯೇ ಸಚಿವ ಕಾರ್ ಹತ್ತಿ ಇದ್ದ ಜಾಗದಿಂದ ಪರಾರಿಯಾದ ವಿಡಿಯೋ ಈಗ ವೈರಲ್ ಆಗಿದೆ. ಜನರ ಕೈಗೆ ಉಳಿಯುವುದು ಈಡೇರದ ಭರವಸೆಗಳು ಮತ್ತು ವಿದ್ಯುತ್ ಕೊರತೆಯ ಕಷ್ಟಗಳು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ಸಂಪಾದಿತ ವಿಡಿಯೋ ಎಂದು ಶಂಕಿಸಿದರೆ, ಇನ್ನು ಕೆಲವರು ಇದನ್ನು ಆಡಳಿತದ ನಿರ್ಲಕ್ಷ್ಯದ ಸಂಕೇತವೆಂದು ಕರೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page