Saturday, June 15, 2024

ಸತ್ಯ | ನ್ಯಾಯ |ಧರ್ಮ

ಕಳಪೆ ಧ್ವಜ ಮಾರಾಟ: ಕಿಡಿಕಾರಿದ ಕಾಂಗ್ರೆಸ್

ಬೆಂಗಳೂರು: ಭಾರತೀಯ ಧ್ವಜ ಸಂಹಿತೆಯನ್ನು ಉಲ್ಲಂಘಿಸಿ, ವಿರೂಪ ಮತ್ತು ಕಳಪೆಯಾಗಿ ಹೊಲಿದ ಧ್ವಜಗಳನ್ನು ರಾಜ್ಯ ಬಿಜೆಪಿ ತನ್ನ ಕೇಂದ್ರ ಕಛೇರಿಯಲ್ಲಿ ಮಾರಾಟ ಮಾಡುತ್ತಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ಹರ್ ಘರ್ ತಿರಂಗ’ ಅಭಿಯಾನದಡಿಯಲ್ಲಿ ಸಾರ್ವಜನಿಕರಿಗೆ ತ್ರಿವರ್ಣ ಧ್ವಜವನ್ನು ಮಾರಾಟ ಮಾಡಲು ಸಚಿವ ಎಸ್. ಟಿ. ಸೋಮಶೇಖರ್ ಬೆಂಗಳೂರಿನ ಮಲ್ಲೇಶ್ವರಂನಲ್ಲಿನ ಪಕ್ಷದ ಕಛೇರಿಯಲ್ಲಿ ಉದ್ಘಾಟನೆ ಮಾಡಿದ್ದಾರೆ. ಆದರೆ ಬಿಜೆಪಿಯು ಪ್ರಚಾರದ ಹುಚ್ಚಿಗಾಗಿ ಕಳಪೆ ಮತ್ತು ಹಾಳಾದ ಧ್ವಜವನ್ನು ಮಾರಟ ಮಾಡಿದ್ದು, ಇದು ದೇಶಕ್ಕೆ ಎಸಗಿದ ಮಹಾನ್ ದ್ರೋಹ ಎಂದು ಕಾಂಗ್ರೆಸ್ ಟೀಕಿಸಿದೆ.

‘ಆರ್‌.ಎಸ್‌.ಎಸ್ ಮತ್ತು ಬಿಜೆಪಿ ತಮ್ಮೊಳಗಿನ, ತಿರಂಗ ದ್ವೇಷವನ್ನು ತೀರಿಸಿಕೊಳ್ಳಲೆಂದೇ ಧ್ವಜ ಸಂಹಿತೆಯನ್ನು ಬದಲಿಸಿ ರಾಷ್ಟ್ರಧ್ವಜದ ಘನತೆಯನ್ನು ಕುಗ್ಗಿಸುತ್ತದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು