Monday, July 21, 2025

ಸತ್ಯ | ನ್ಯಾಯ |ಧರ್ಮ

ಅಧಿವೇಶನದ ಸಮಯದಲ್ಲಿ ಫೋನಿನಲ್ಲಿ ಪೋಕರ್‌ ಆಡುತ್ತಾ ಕುಳಿತ ಕೃಷಿ ಸಚಿವ

ಪುಣೆ: ವಿಧಾನಸಭಾ ಅಧಿವೇಶನ ನಡೆಯುತ್ತಿರುವಾಗ, ರಾಜ್ಯ ಸಚಿವರು ತಮ್ಮ ಫೋನಿನಲ್ಲಿ ಆಟ ಆಡುತ್ತಿರುವುದು ಕಂಡುಬಂದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದೆ.

ಎನ್‌ಸಿಪಿ (ಅಜಿತ್ ಪವಾರ್) ಕೃಷಿ ಸಚಿವ ಮಾಣಿಕ್ರಾವ್ ಕೊಕಟೆ ಅವರು ವಿಧಾನಸಭೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿದ್ದಾಗ ತಮ್ಮ ಫೋನ್‌ನಲ್ಲಿ ಆನ್‌ಲೈನ್ ಪೋಕರ್ ಆಡುತ್ತಿರುವುದು ಕಂಡುಬಂದಿದೆ.

ಪ್ರತಿಪಕ್ಷ ಎನ್‌ಸಿಪಿ (ಶರದ್ ಪವಾರ್) ನಾಯಕ ರೋಹಿತ್ ಪವಾರ್ ತಮ್ಮ ಎಕ್ಸ್ ಖಾತೆಯಲ್ಲಿ ಇದರ ವೀಡಿಯೊವನ್ನು ಪೋಸ್ಟ್ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.

“ರಾಜ್ಯದಲ್ಲಿ ಪ್ರತಿದಿನ ಸರಾಸರಿ ಎಂಟು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹಲವು ಕೃಷಿ ಸಮಸ್ಯೆಗಳು ಬಾಕಿ ಉಳಿದಿವೆ. ಬಿಜೆಪಿಯನ್ನು ಸಂಪರ್ಕಿಸದೆ ಏನೂ ಮಾಡಲು ಸಾಧ್ಯವಿಲ್ಲದ ಕಾರಣ, ಸಚಿವರು ಬೇರೆ ಕೆಲಸವಿಲ್ಲದ ಕಾರಣ ಪೋಕರ್ ಆಡಿ ಸಮಯ ಕಳೆಯುತ್ತಿರುವುಂತೆ ಕಾಣುತ್ತಿದೆ” ಎಂದು ಅವರು ಟೀಕಿಸಿದರು.

ಈ ಘಟನೆಯ ಬಗ್ಗೆ ವಿರೋಧ ಪಕ್ಷಗಳು ಆಕ್ರೋಶಗೊಂಡಿವೆ. ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿವೆ. ಶಿವಸೇನೆ (ಯುಬಿಟಿ) ಬಣವು ಸಚಿವರು ಹಿಂದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಟೀಕಿಸಿತು ಮತ್ತು ಅವರ ನಡವಳಿಕೆ ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಪಕ್ಷವು ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page