Thursday, June 20, 2024

ಸತ್ಯ | ನ್ಯಾಯ |ಧರ್ಮ

ಬಾಲಕಿ ಮೇಲೆ ಕಿರುಕುಳ ಆರೋಪ : ಡೆಲಿವರಿ ಬಾಯ್‌ ಬಂಧನ

ಮಹಾರಾಷ್ಟ್ರ :  ಯೆವಲೆವಾಡಿಯಲ್ಲಿ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಆಹಾರ ವಿತರಣಾ ವ್ಯಕ್ತಿಯನ್ನು ಪುಣೆ ನಗರ ಪೊಲೀಸರು ಬಂಧಿಸಿದ್ದಾರೆ.

ಬಾಲಕಿ ನೀಡಿರುವ ಆರೋಪದ ಪ್ರಕಾರ, ಬಾಲಕಿಯು ಜೊಮಾಟೊದಲ್ಲಿ ಫುಡ್ ಆರ್ಡರ್‌ ಮಾಡಿದ್ದಾಳೆ. ಈ ಹಿನ್ನಲೆ ರಯೀಸ್ ಶೇಖ್  ಎಂಬಾತ ಫುಡ್‌ ಡೆಲಿವರಿಗಾಗಿ ಬಂದಿದ್ದು, ಆತನು ಫುಡ್‌ ಡೆಲಿವರಿ ನೀಡಿದ ನಂತರ ಬಾಲಕಿ ಬಳಿ ಕುಡಿಯಲು ನೀರು ಕೇಳಿದ್ದಾನೆ. ಹೀಗಾಗಿ ಆಕೆಯು ನೀರು ತಂದು ಕೊಟ್ಟಾಗ, ಆತನು ಆಕೆಯನ್ನು ಹತ್ತಿರಕ್ಕೆ ಎಳೆದು ಅವಳಿಗೆ ಕಿರುಕುಳ ನೀಡಲು ಆರಂಭಿಸಿದ ಎಂದು  ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಹಿನ್ನಲೆ ಪೊಲೀಸರು ಆತನನ್ನು ಬಂಧಿಸಿದ ನಂತರ ಆತನು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ ಎಂದು ಸುದ್ದಿ-ಸಂಸ್ಥೆ ಎಎನ್‌ಐ ವರದಿ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು