Saturday, June 15, 2024

ಸತ್ಯ | ನ್ಯಾಯ |ಧರ್ಮ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ ಗೆ ಅನಾರೋಗ್ಯ

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್‌ @DKShivakumar ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಎಲ್ಲಿಯೂ ಸಹ ಪ್ರಯಾಣ ಮಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ಕಾರಣದಿಂದಾಗಿ ಅವರ ವೇಳಾಪಟ್ಟಿಯಲ್ಲಿ ಈಗಾಗಲೇ ನಿಗದಿಯಾಗಿರುವ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಅನ್ಯಥಾ ಭಾವಿಸದಂತೆ ಟ್ವೀಟ್‌ ಮೂಲಕ ಕರ್ನಾಟಕ ಕಾಂಗ್ರೇಸ್ ಮನವಿ ಮಾಡಿದೆ.

ಡಿ.ಕೆ.ಶಿ ಅವರ ಆರೋಗ್ಯದ ಕುರಿತು ಕಾಂಗ್ರೇಸ್‌ ಮುಖಂಡ ಸರ್ಫರಾಜ್‌ ಅಹಮದ್‌ ಅವರು ಟ್ವೀಟ್‌ ಮಾಡುವ ಮೂಲಕ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು