Tuesday, August 5, 2025

ಸತ್ಯ | ನ್ಯಾಯ |ಧರ್ಮ

ಹದಿಹರೆಯದ ಮಕ್ಕಳು ಮೊಬೈಲ್‌ಗೆ ಬಲಿಯಾಗದೆ ಸಾಧನೆಯಡೆಗೆ ಮುನ್ನೆಡೆಯಿರಿ: ನ್ಯಾ. ಹೇಮಾವತಿ

ಹಾಸನ : ಯುವ ಜನತೆ ಪ್ರಸ್ತೂತದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಕಲಿಯುವ ವಯಸ್ಸಿನಲ್ಲಿ ಸಮಯ ವ್ಯರ್ಥಮಾಡುತ್ತಾ ದೇಶಕ್ಕೆ ಹೊರೆಯಾಗುತ್ತಿದ್ದಾರೆ. ಮಕ್ಕಳು ಮೊಬೈಲ್‌ಗಳಿಗೆ ಬಲೆಯಾಗದೇ ಉದ್ದೇಶವನ್ನರಿತು ತಮ್ಮ ಗುರಿಸಾಧನೆ ಕಡೆಗೆ ಮುನ್ನೇಡೆಯಬೇಕು ಎಂದು ಜಿಲ್ಲಾ ಪ್ರಧಾನ ಹಾಗೂ ಹಿರಿಯ ಸತ್ರ ನ್ಯಾಯಾಧೀಶರಾದ ಶ್ರೀಮತಿ ಹೇಮಾಲತಾ ತಿಳಿಸಿದರು.
ನಗರದ ಎವಿಕೆ ಕಾಲೇಜು ಸಭಾಂಗಣದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರ ಹಾಗೂ ಇತರೆ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯಿದೆಗಳ ಸಂರಕ್ಷಣೆ ಬಗ್ಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶ ಅತಿ ಹೆಚ್ಚು ಮಾನವ ಸಂಪನ್ಮೂಲವನ್ನು ಹೊಂದಿದ ದೇಶ. ಶೇಕಡ.40 ಮಹಿಳೆಯರು ತುಂಬಿದ್ದಾರೆ. ಇವರು ಉತ್ತಮ ಶಿಕ್ಷಣ, ಕೌಸಲ್ಯಗಳಿಸಿದರೆ ಆ ದೇಶ ಮತ್ತು ಸಮಾಜಕ್ಕೆ ಅಮುಲ್ಯ ಸಂಪನ್ಮೂಲವಾಗುತ್ತಾರೆ. ಆದರೆ ಯುವ ಜನತೆ ಮೊಬೈಲ್‌ಗಳಿಗೆ ಬಲೆಯಾದ ಸಂಪನ್ಮೂಲವಾಗುವ ಬದಲು ದುಶ್ಚಟಗಳು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿ ತಮ್ಮ ಅಮುಲ್ಯ ಕಲಿಯುವ ವಯಸ್ಸಿನಲ್ಲಿ ಸಮಯ ವ್ಯರ್ಥಮಾಡುತ್ತಾ ದೇಶಕ್ಕೆ ಹೊರೆಯಾಗುತ್ತಿದ್ದಾರೆ ಹಾಗಾಗಿ ಹರಿಹರೆಯದ ಮಕ್ಕಳು ಸಾಮಾಜಿಕ ಜಾಲತಾಣ, ಮೊಬೈಲ್‌ಗಳಿಗೆ ಬಲಿಯಾಗದೆ ತಮ್ಮ ಗುರಿ ಸಾಧನೆಯಡೆಗೆ ಮುನ್ನೆಡೆಯಿರಿ ಎಂದು ಸಲಹೆ ನೀಡಿದರು. ಮುಂದುವರೆದು ಮಕ್ಕಳು ನಮ್ಮ ಅಮುಲ್ಯ ಆಸ್ತಿ, ನಿಮಾಗೆ ಸಮಾಜ, ಕುಟುಂಬ ಹಾಗೂ ದೇಶ ಉತ್ತಮ ಅವಕಾಶಗಳನ್ನು ಕಲ್ಪಿಸಿದೆ, ಉತ್ತಮ ಪೌಷ್ಠಿಆಹಾರ ಸಿಗುತ್ತದೆ. ಈ ಅವಕಾಶ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಿರಿ, ಹೊಸ-ಹೊಸ ಅನ್ವಿಲಷಣೆಯಲ್ಲಿ ತೊಡಗಿ ಸಾಧಿಸಿ, ದೇಶ ಮುನ್ನೆಡನೆ ಎಂದು ಆಶಯ ವ್ಯಕ್ತಪಡಿಸಿದರು.


ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶ್ರೀಮತಿ ಬಿ.ಕೆ. ದಾಕ್ಷಾಯಣಿ ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿಯೂ ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿವೆ. ಹರಿಹರೆಯದ ಮಕ್ಕಳು ತಮ್ಮ ವಯಸ್ಸಿನಲ್ಲಿ ಆಗುವ ಬದಲಾವಣೆ, ಬೆಳವಣಿಗೆಯಿಂದ ಆಕರ್ಷಣೆಗಳಿಗೆ ಒಳಗಾಗುತ್ತಾರೆ. ಸಣ್ಣ ವಯಸ್ಸಿನಲ್ಲಿ ಮನೆ ಬಿಟ್ಟು ಓಡಿಹೋಗುವುದು, ಬಾಲ್ಯವಿವಾಹಕ್ಕೆ ಒಳಾಗಾಗುವುದು, ತದ ನಂತರ ಲೈಂಗಿಕ ದೌರ್ಜನ್ಯಗಳಿಗೆ ಒಳಗಾಗುತ್ತಾರೆ. ಇದರಿಂದ ಚಿಕ್ಕ ವಯಸ್ಸಿನಲ್ಲಿ ಲೈಂಗಿಕ ದೌರ್ಜನ್ಯಗಳಿಗೆ ಒಳಗಾಗಿ ತಮ್ಮ ಅಮುಲ್ಯ ಜೀವನ ಹಾಳುಮಾಡಿಕೊಳ್ಳಬಾರದು, ಜೀವನದಲ್ಲಿ ಉತ್ತಮ ಆಲೋಚನೆ, ನಡವಳಿಕೆ ಬೆಳಸಿಕೊಳ್ಳಿ ಉತ್ತಮ ಪ್ರಜೆಗಳಾಗಿ ಎಂದು ಕಿವಿಮಾತು ಹೇಳಿದರು.


ಕಾರ್ಯಕ್ರಮದಲ್ಲಿ ಅಥಿತಿಯಾಗಿ ಭಾಗವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಜಿ. ದಿಲೀಪ್ ಮಾತನಾಡುತ್ತಾ, ಜಿಲ್ಲೆಯಲ್ಲಿ ಕಂಡು ಬರುವ ಅನಾಥ, ಪರಿತ್ಯಕ್ತ, ಸಂಕಷ್ಟ ಹಾಗೂ ಹಿಂಸೆ ದೌರ್ಜನ್ಯಗಳಿಗೆ ಒಳಗಾಗಿ ಬರುವ ಮಕ್ಕಳಿಗೆ ರಕ್ಷಣೆ, ಆಪ್ತ ಸಮಾಲೋಚನೆ, ಶಿಕ್ಷಣ ಹಾಗೂ ವಸತಿಯುತ ಪುನರ್‌ವಸತಿ ಕಲ್ಪಿಸಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಶ್ರಮಿಸುತ್ತಿದೆ. ಯಾವುದೇ ಸಂಕಷ್ಟ ಪರಿಸ್ಥಿತಿಯಲ್ಲಿನ ಮಕ್ಕಳು ಕಂಡುಬAದರೆ 1098ಗೆ ಕರೆ ಮಾಡಿ ಸಹಾಯ ಪಡೆಯಲು ತಿಳಿಸಿದರು. ಇದೆ ವೇಳೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕಾಂತರಾಜು ಬಾಲ್ಯವಿವಾಹಕ್ಕೆ ಕಾರಣಗಳು, ಪರಿಣಾಮಗಳು ಹಾಗೂ ಕಾನೂನಿನ ಕುರಿತು ಹಾಗೂ ಪೋಕ್ಸೋ ಕಾಯ್ದೆಯ ಬಗ್ಗೆ ಮಕ್ಕಳಿಗೆ ಪರಿಚಯಿಸಿದರು. ಎ.ವಿ.ಕೆ. ಪಿ ಯು ಕಾಲೇಜು ಹಾಸನ ಇವರು ವಹಿಸಿದ್ದರು, ವೇಧಿಕೆಯಲ್ಲಿ ಉಪನ್ಯಾಸಕರದ ಮುರುಳಿ, ಸುನೀಲ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page