Monday, August 11, 2025

ಸತ್ಯ | ನ್ಯಾಯ |ಧರ್ಮ

ಕಾರ್ಯನಿರತ ಪತ್ರಕರ್ತರನ್ನು ಸನ್ಮಾನಿಸಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ – ಎಂ. ಚಂದ್ರೇಗೌಡ


ಹಾಸನ: ಸಮಾಜದಲ್ಲಿ ನಾವು ವಿವಿಧ ಚಳುವಳಿ, ಆರೋಗ್ಯ ತಪಾಸಣೆ, ಪೌರಕಾರ್ಮಿಕರು ಹಾಗೂ ಇತರರಿಗೆ ಸನ್ಮಾನ ಸೇರಿದಂತೆ ಹಲವಾರು ಕಾರ್ಯಕ್ರಮ ಏರ್ಪಡಿಸುವುದನ್ನ ನೋಡಿದ್ದೇವೆ. ಆದರೇ ಜನನಿ ಪೌಂಢೇಷನ್ ವಿಭಿನ್ನ ರೀತಿ ಕಾರ್ಯನಿರತ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಮಹಾನಗರಪಾಲಿಕೆ ಪೌರರಾದ ಎಂ. ಚಂದ್ರೇಗೌಡ ಶ್ಲಾಘನೇವ್ಯಕ್ತಪಡಿಸಿದರು.


ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜನನಿ ಪೌಂಢೇಷನ್ ಸಂಯುಕ್ತಾಶ್ರಯದಲ್ಲಿ ಭಾನುವಾರದಂದು ಹಮ್ಮಿಕೊಳ್ಳಲಾಗಿದ್ದ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಮಾಧ್ಯಮ ಮಿತ್ರರಿಗೆ ಗೌರವ ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಚಳುವಳಿಗಳು, ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ, ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಸೇರಿದಂತೆ ಎಲ್ಲಾವನ್ನು ಗಮನಿಸಿದ್ದೇವೆ. ಜನನಿ ಪೌಂಢೇಶನ್ ಮೂಲಕ ಹಲವಾರು ಕಾರ್ಯಕ್ರಮಗಳ ಮಾಡಲಾಗಿದ್ದು, ಎಲ್ಲಾರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡಿದ್ದೀರಿ. ಪತ್ರಕರ್ತರಿಗೆ ಮಾಡುತ್ತಿರುವ ಸನ್ಮಾನ ಇದು ನಮ್ಮ ಹಾಸನಕ್ಕೆ ತಂದ ಗೌರವ. ಪತ್ರಕರ್ತರು ಎಂದರೇ ಅವರಿಗೆ ಬಿಡುವೆ ಇರುವುದಿಲ್ಲ. ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಅಂತವರನ್ನ ಗುರುತಿಸಿ ಸನ್ಮಾನ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು. ಇದು ದೇವರು ಮೆಚ್ಚುವ ಕೆಲಸ. ಎಂದು ಶ್ಲಾಘನೆ ವ್ಯಕ್ತಪಡಿಸಿದರು.


ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಹೊಟ್ಟೆ ಹಸಿದವರಿಗೆ ಜಗತ್ತು ಗೊತ್ತು. ಹೊಟ್ಟೆ ತುಂಬಿದವರಿಗೆ ನೀವು ಏನೆ ಹೇಳಿದರೂ ಕೂಡ ಜಗತ್ತಿನ ಯಾವುದೇ ಅರ್ಥವಾಗುವುದಿಲ್ಲ. ಒಂದು ತಲೆ ಮಾರಿನ ಹಿಂದೆ ಬಗ್ಗೆ ತಿಳಿದರೇ ಕಷ್ಟದ ಬಗ್ಗೆ ತಿಳಿದಿತ್ತು. ಪ್ರಸ್ತೂತದಲ್ಲಿ ಮ್ಯಾಜಿಕ್ ಚಪ್ಪಳಿಗಳೆಲ್ಲಾ ಮನೆಯಲ್ಲಿ ಇದ್ದು, ಇವತ್ತಿನ ಸಂದರ್ಭ, ಕಾಲಘಟ್ಟ ಬದಲಾಗಿದೆ ಎಂದು ಬೇಸರವ್ಯಕ್ತಪಡಿಸಿದರು. ನಿಮ್ಮ ಅಜ್ಜ, ಅಜ್ಜಿ, ಮುತ್ತಾತ ಪಟ್ಟ ಕಷ್ಟಗಳು ಇಂದು ಇಲ್ಲ. ಇಡೀ ಮನೆ ಒಳಗೆ ಇಡೀ ಸಂಸಾರ ಇರುತಿತ್ತು. ತುಂಬಿದ ಮೌಲ್ಯಗಳು ಇರುತಿತ್ತು. ಈಗ ಎಲ್ಲಾವೂ ಕೂಡ ದೂರವಾಗಿದೆ. ಎಲ್ಲಾವು ಸಿಕ್ಕರೂ ಸಹ ಮಾನವೀಯ ಗುಣಗಳ, ಮೌಲ್ಯಗಳು ಖಂಡಿತ ಇಂದು ಇಲ್ಲ. ಆಧುನಿಕ ಪ್ರಪಂಚದಲ್ಲಿ ಓಡುತ್ತಿದ್ದೇವೆ. ಆದರೇ ಮಾನವಿಯತೆ ಮರೆಯುತ್ತಿದ್ದೇವೆ ಎಂದು ವಿಷಾಧಿಸಿದರು. ಮೊದಲು ಮಾನವಿಯತೆ, ಮೌಲ್ಯಗಳನ್ನು ಅಳವಡಿಸಿಕೊಂಡು ಸೇವೆ ಮಾಡಿದರೇ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ಸಲಹೆ ನೀಡಿದರು.


ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕರಾದ ಆರ್.ಪಿ. ವೆಂಕಟೇಶ್ ಮೂರ್ತಿ ಮಾತನಾಡಿ, ಇವತ್ತು ಪರಿಸ್ಥಿತಿ ತೀರ ಕೆಟ್ಟು ಹೋಗಿದ್ದು, ಹವಮಾನ ವೈಫರಿತ್ಯದಿಂದ ನಷ್ಟ ಅನುಭವಿಸಬೇಕಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ಇತರೆ ದೇಶಗಳ ಯುದ್ಧ ನಡೆಯುತ್ತಿದೆ. ನಮ್ಮ ಭಾರತ ದೇಶವು ವಿಶ್ವಶಾಂತಿಗಾಗಿ ಹೆಚ್ಚಿನ ರೀತಿ ಮುಂದಾಗಿದೆ. ಸಮಾಜದಲ್ಲಿ ಉತ್ತಮ ವಾತವರಣ ನಿರ್ಮಾಣ ಮಾಡಲು ಪ್ರತಿಯೊಬ್ರರೂ ಮುಂದಾಗಬೇಕು. ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು. ಇದೆ ವೇಳೆ ಜನನಿ ಪೌಂಢೇಶನ್ ಸಂಸ್ಥಾಪಕರಾದ ಹೆಚ್.ಎಸ್. ಭಾನುಮತಿ, ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page