Sunday, August 17, 2025

ಸತ್ಯ | ನ್ಯಾಯ |ಧರ್ಮ

ನೂತನ ಮೇಯರ್ ಆಗಿ ಹೇಮಲತಾ ಕಮಲ್ ಕುಮಾರ್ ಅಧಿಕಾರ ಸ್ವೀಕಾರ

ಹಾಸನ : ಮಹಾನಗರ ಪಾಲಿಕೆ ಮೇಯರ್ ಎಂ. ಚಂದ್ರೇಗೌಡರ ಪ್ರಕರಣದಲ್ಲಿ ಶನಿವಾರದಂದು ಸದಸ್ಯತ್ವವೇ ಅನರ್ಹ ಕೊಂಡ ಹಿನ್ನಲೆಯಲ್ಲಿ ನೂತನ ಮೇಯರ್ ಆಗಿ ಉಪ ಮೇಯರ್ ಶ್ರೀಮತಿ ಹೇಮಲತಾ ಕಮಲ್ ಕುಮಾರ್ ಅದಿಕಾರ ವಹಿಸಿಕೊಂಡರು.

 ಸದಸ್ಯತ್ವ ಅನರ್ಹ ಹಿನ್ನೆಲೆಯಲ್ಲಿ ಮೇಯರ್ ಹುದ್ದೆ ಕಳೆದುಕೊಂಡ ಚಂದ್ರೆಗೌಡ ಪಕ್ಷದ ವಿಪ್ ಉಲ್ಲಂಘನೆ ಕಾರಣದಿಂದ ಸದಸ್ಯತ್ವ ಅನರ್ಹಕ್ಕೆ ಜೆಡಿಎಸ್ ಜಿಲ್ಲಾ ಅದ್ಯಕ್ಷ ಕೆ.ಎಸ್. ಲಿಂಗೇಶ್ ದೂರು ನೀಡಿದ್ದ ಹಿನ್ನಲೆ ವಿಚಾರಣೆ ನಡೆಸಿ ವಿಪ್ ಉಲ್ಲಂಘನೆ ಸಾಭೀತಾದ ಹಿನ್ನೆಲೆಯಲ್ಲಿ ಸದಸ್ಯತ್ವ ಅನರ್ಹ ಗೊಳಿಸಿ ಆದೇಶ ಮೈಸೂರಿನ ಪ್ರಾದೇಶಿಕ ಆಯುಕ್ತರ ನ್ಯಾಯಾಲಯದ ಆದೇಶವಾಯಿತು. ಮೇಯರ್ ಸದಸ್ಯತ್ವ ಅನರ್ಹ ಹಿನ್ನೆಲೆಯಲ್ಲಿ ಮೇಯರ್ ಆಗಿ ಉಪ ಮೇಯರ್ ಆಗಿದ್ದ ಹೇಮಲತಾ ಅದಿಕಾರ ಸ್ವೀಕಾರ ಮಾಡಿ ಪಾಲಿಕೆಯ ಮೇಯರ್ ಕಛೇರಿಯಲ್ಲಿ ಅದಿಕಾರ ಸ್ವೀಕಾರಿಸಿದರು. ಈ ವೇಳೆ ನೂತನ ಮೇಯರ್ ಆಗಿ ಅದಿಕಾರ ವಹಿಸಿಕೊಂಡರ ಹೇಮಲತಾಗೆ ಕ್ಷೇತ್ರದ ಶಾಸಕ ಸ್ವರೂಪ್‌ಪ್ರಕಾಶ್ ಹಾಗು ಜೆಡಿಎಸ್ ಸದಸ್ಯರು ಶುಭಾಶಯ ಕೋರಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page