Friday, August 22, 2025

ಸತ್ಯ | ನ್ಯಾಯ |ಧರ್ಮ

ಕರ್ತವ್ಯದ ಜೊತೆ ಸಮಾಜದ ಒಳಿತಿಗಾಗಿ ದುಡಿಯುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದೇವೆ – ಡಿವೈಎಸ್‌ಪಿ ಪ್ರಮೋದ್‌ ಕುಮಾರ್‌

ಸಕಲೇಶಪುರ : ಡ್ರಗ್ಸ್ ಮುಕ್ತ ಸಕಲೇಶಪುರ ಆಂದೋಲನ ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಪ್ರಮೋದ್‌ ಕುಮಾರ್‌ ಮತನಾಡುತ್ತಾ ಡ್ರಗ್ಸ್‌ ದಾಸರ ಕುರಿತು ಅಥವಾ ಡ್ರಗ್ಸ್‌ ಇರುವುದನ್ನು ಕಂಡವರು ತಮ್ಮ ಪಾಡಿಗೆ ತಾವು ಇರುವುದೇ ಅನಾಹುತಗಳಿಗೆ ಕಾರಣವಾಗಿದೆ. ನಮ್ಮ ಕರ್ತವ್ಯದ ಜತೆಗೆ ಸಮಾಜದ ಒಳಿತಿಗಾಗಿ ದುಡಿಯುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದೇವೆ, ಅದರಿಂದ ಪೊಲೀಸ್‌ ಎನ್ನುವಂತಹ ಒಂದು ಸಮಾಜದ ಆಯುಧ ತುಕ್ಕು ಹಿಡಿಯದಂತೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಡ್ರಗ್ಸ್‌ ಸಂಬಂಧಿತ ವಿಷಗಳು ಕಂಡುಬಂದರೆ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸದೆ, ಮೌನ ವಹಿಸಿದರೆ ಪರೋಕ್ಷವಾಗಿ ನೀವೂ ಕೂಡ ಡ್ರಗ್ಸ್‌ ಸೇವನೆಗೆ ಪ್ರಚೋದಿಸಿದಂತಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಇಲಾಖೆಯೊಂದಿಗೆ ಸಹಕರಿಸಬೇಕು” ಎಂದು ಹೇಳಿದರು. ಸಂವಿಧಾನದ ಪೀಠಿಕೆಯಲ್ಲಿ ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವ ಎನ್ನುವಂತಹ ಅಂಶಗಳಿವೆ. ಆದರೆ ವ್ಯಸನಗಳಿಗೆ ದಾಸರಾದಾಗ ಈ ಮೂರೂ ಪದಗಳ, ಸಂಬಂಧಗಳ ಅರ್ಥವೇ ಇಲ್ಲದಂತಾಗುತ್ತದೆ. ವ್ಯಸನಿಗಳಿಗೆ ಇದರ ಅರಿವೇ ಇಲ್ಲದಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page