ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಪ್ರಾಪ್ತ ಬಾಲಕಿಯ ವಿರುದ್ಧ ಇಸ್ಲಾಂ ವಿರೋಧಿ ಮತ್ತು ಲೈಂಗಿಕ ನಿಂದನಾತ್ಮಕ ಕಾಮೆಂಟ್‌: ಆರ್‌ಎಸ್‌ಎಸ್ ಕಾರ್ಯಕರ್ತನ ಬಂಧನಕರ್ನಾಟಕ ವಿಧಾನ ಪರಿಷತ್ ಚುನಾವಣೆ: ನಾಲ್ಕೂ ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು, ಕಾಂಗ್ರೆಸ್‌ಗೆ ಹಿನ್ನಡೆಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌

ಜಿಎಸ್‌ಟಿ ಮಹತ್ವದ ಸಭೆ ಯಾವುದು ಅಗ್ಗ, ಯಾವುದು ದುಬಾರಿ ?

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌ ದೇಶ

• 1 ನಿಮಿಷದ ಓದು

ಜಿಎಸ್‌ಟಿ ಮಹತ್ವದ ಸಭೆ ಯಾವುದು ಅಗ್ಗ, ಯಾವುದು ದುಬಾರಿ ?

ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಮಿತಿಯ 56ನೇ ಸಭೆ ಇಂದು ಆರಂಭಗೊಂಡಿದ್ದು, ದೇಶದ ವ್ಯಾಪಾರ ವಲಯ ಮತ್ತು ಗ್ರಾಹಕರು ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ. ಹಬ್ಬದ ಸಮಯದಲ್ಲಿ ಯಾವ ವಸ್ತುಗಳ ಬೆಲೆ ಇಳಿಯಲಿದೆ ಮತ್ತು ಯಾವ ವಸ್ತುಗಳು ದುಬಾರಿಯಾಗಲಿವೆ ಎಂಬ ಕುತೂಹಲ ಹೆಚ್ಚಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ “ದೀಪಾವಳಿ ಗಿಫ್ಟ್‌” ನೀಡುವ ರೀತಿಯಲ್ಲಿ ಜಿಎಸ್‌ಟಿ ಸುಧಾರಣೆಗಳಾಗಲಿವೆ ಎಂದು ಹೇಳಿದ್ದರು. ಅದರಿಂದಾಗಿ ಹಾಲಿ ಇರುವ ಶೇ 5, ಶೇ 12, ಶೇ 18 ಮತ್ತು ಶೇ 28 ರ ತೆರಿಗೆ ಹಂತಗಳನ್ನು ಸರಳಗೊಳಿಸುವ ಪ್ರಸ್ತಾಪ ಈ ಸಭೆಯಲ್ಲಿ ಚರ್ಚೆಗೆ ಬಂದಿದೆ.

ಅಗ್ಗವಾಗಲಿರುವ ವಸ್ತುಗಳು:-

  • ದಿನನಿತ್ಯ ಬಳಕೆಯ ವಸ್ತುಗಳು:
    ಪನ್ನೀರ್, ಪಿಟ್ಜಾ ಬ್ರೆಡ್‌, ಖಾಕ್ರ, ಹಣ್ಣಿನ ರಸ, ಎಳನೀರು, ಮಜ್ಜಿಗೆ, ಚೀಸ್, ಪಾಸ್ತಾ, ಐಸ್‌ಕ್ರೀಂ — ಶೇ 12ರಿಂದ ಶೇ 5ಕ್ಕೆ ಇಳಿಕೆ.
    ಹಲ್ಲುಜ್ಜುವ ಪುಡಿ ಶೇ 12ರಿಂದ ಶೇ 5ಕ್ಕೆ, ಟೂತ್‌ಪೇಸ್ಟ್ ಶೇ 18ರಿಂದ ಶೇ 12ಕ್ಕೆ, ಶಾಂಪೂ, ಎಣ್ಣೆ, ಸೋಪುಗಳು ಶೇ 18ರಿಂದ ಶೇ 5ಕ್ಕೆ ಇಳಿಕೆ.
  • ವಾಹನ ಮತ್ತು ಭಾಗಗಳು:
    1200 ಸಿಸಿ ಗಿಂತ ಕಡಿಮೆ ಸಾಮರ್ಥ್ಯದ ಕಾರುಗಳು, 350 ಸಿಸಿ ಒಳಗಿನ ಬೈಕ್‌ಗಳು ಮತ್ತು ಬಿಡಿಭಾಗಗಳ ತೆರಿಗೆ ಶೇ 28ರಿಂದ ಶೇ 18ಕ್ಕೆ ಇಳಿಕೆ.
  • ಹೋಟೆಲ್ ಮತ್ತು ಮನರಂಜನೆ:
    ₹7,500 ಒಳಗಿನ ಹೋಟೆಲ್ ಕೊಠಡಿ ಬಾಡಿಗೆ ಶೇ 12ರಿಂದ ಶೇ 5ಕ್ಕೆ ಇಳಿಕೆ.
    ಹೋಟೆಲ್ ಮತ್ತು ಮನರಂಜನಾ ಕ್ಷೇತ್ರದ ತೆರಿಗೆ ಶೇ 12ರಿಂದ ಶೇ 5ಕ್ಕೆ ಇಳಿಕೆ.
  • ಔಷಧಿ ಮತ್ತು ವೈದ್ಯಕೀಯ ಸಾಧನಗಳು:
    ಕ್ಯಾನ್ಸರ್ ಔಷಧಿಗಳ ಮೇಲೆ ಜಿಎಸ್‌ಟಿ ರದ್ದು, ಇತರ ಔಷಧಿ ಮತ್ತು ವೈದ್ಯಕೀಯ ಉಪಕರಣಗಳು ಶೇ 12ರಿಂದ ಶೇ 5ಕ್ಕೆ ಇಳಿಕೆ.
    ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆ ತೆರಿಗೆ ವಿನಾಯಿತಿ.
  • ಕೃಷಿ ಕ್ಷೇತ್ರ:
    ರಸಗೊಬ್ಬರಗಳಿಗೆ ಬಳಸುವ ರಾಸಾಯನಿಕಗಳು (ಸಲ್‌ಫ್ಯೂರಿಕ್ ಆಯಸಿಡ್, ನೈಟ್ರಿಕ್ ಆಯಸಿಡ್, ಅಮೋನಿಯಾ) ಶೇ 18ರಿಂದ ಶೇ 5ಕ್ಕೆ ಇಳಿಕೆ.
  • ಜವಳಿ ಕ್ಷೇತ್ರ:
    ಸಿಂಥೆಟಿಕ್ ಯಾರ್ನ್, ಕೈಮಗ್ಗದ ನಾರಿನ ನೂಲು, ಕರಕುಶಲ ವಸ್ತುಗಳ ತೆರಿಗೆ ಶೇ 12ರಿಂದ ಶೇ 5ಕ್ಕೆ ಇಳಿಕೆ.
  • ಇತರೆ ವಸ್ತುಗಳು:
    ಸೌರಶಕ್ತಿ ಕುಕ್ಕರ್, ಪೇಪರ್ ಎರೇಸರ್, ಭೂಪಟ, ಚಾರ್ಟ್, ನೋಟ್‌ಬುಕ್, ಅಟ್ಲಾಸ್, ಛತ್ರಿ — ಶೇ 12ರಿಂದ ಶೇ 5ಕ್ಕೆ ಇಳಿಕೆ.

ದುಬಾರಿಯಾಗಲಿರುವ ವಸ್ತುಗಳು

  • ವಿಲಾಸಿ ಮತ್ತು ಹಾನಿಕಾರಕ ವಸ್ತುಗಳು:
    ತಂಬಾಕು, ಪಾನ್ ಮಸಾಲಾ, ವಿಲಾಸಿ ವಾಹನಗಳ ಮೇಲೆ ಶೇ 40 ತೆರಿಗೆ ಮುಂದುವರಿಕೆ.
  • ಇಲೆಕ್ಟ್ರಿಕ್ ವಾಹನಗಳು (EV):
    ₹20 ಲಕ್ಷ ಮೇಲ್ಪಟ್ಟ ಇವಿ ವಾಹನಗಳು ಶೇ 5ರಿಂದ ಶೇ 18ಕ್ಕೆ ಏರಿಕೆ.
    ₹40 ಲಕ್ಷ ಮೇಲ್ಪಟ್ಟ ಇವಿ ವಾಹನಗಳಿಗೆ ಶೇ 40 ತೆರಿಗೆ.
  • ಕಲ್ಲಿದ್ದಲು:
    ಶೇ 5ರಿಂದ ಶೇ 18ಕ್ಕೆ ಏರಿಕೆ — ಇದು ವಿದ್ಯುತ್ ಶುಲ್ಕದ ಮೇಲೆ ಪರಿಣಾಮ ಬೀರುವ ಸಾಧ್ಯತೆ.
  • ಉಡುಪುಗಳು:
    ₹2,500 ಮೇಲ್ಪಟ್ಟ ಸಿದ್ಧ ಉಡುಪುಗಳು ಶೇ 12ರಿಂದ ಶೇ 18ಕ್ಕೆ ಏರಿಕೆ.

ಜಿಎಸ್‌ಟಿ ಬದಲಾವಣೆಗಳಿಂದ ಸರ್ಕಾರಕ್ಕೆ ಸುಮಾರು ₹50 ಸಾವಿರ ಕೋಟಿ ರೂಪಾಯಿ ಆದಾಯ ನಷ್ಟ ಉಂಟಾಗಬಹುದೆಂದು ಅಂದಾಜಿಸಲಾಗಿದೆ. ಆದರೂ, ಮಧ್ಯಮ ವರ್ಗದ ಗ್ರಾಹಕರಿಗೆ ಹಾಗೂ ವ್ಯಾಪಾರ ವಲಯಕ್ಕೆ ಇದು ಅನುಕೂಲವಾಗಲಿದೆ ಎಂದು ಸಮಿತಿಯು ನಿರೀಕ್ಷಿಸಿದೆ.

ವಿಷಯಗಳು: #news #peepalmedia
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು