Thursday, September 11, 2025

ಸತ್ಯ | ನ್ಯಾಯ |ಧರ್ಮ

ಸೊಸೆಗೆ ವರದಕ್ಷಿಣೆ ಕಿರುಕುಳದ ಆರೋಪ: ನಿರ್ದೇಶಕ ಎಸ್.ನಾರಾಯಣ್ ವಿರುದ್ಧ ಎಫ್ಐಆರ್ ದಾಖಲು;

ಕನ್ನಡದ ಹೆಸರಾಂತ ನಿರ್ದೇಶಕ ಎಸ್ ನಾರಾಯಣ್ ಅವರ ಮಗ ಪವನ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು,ಸೊಸೆ ಪವಿತ್ರಾ ಅವರು ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ದೂರು ದಾಖಲು ಮಾಡಿದ್ದಾರೆ. ಹಾಗೂ ದೂರಿನಲ್ಲಿ ಸ್ವತಃ ಎಸ್ ನಾರಾಯಣ್ ಹೆಸರೂ ಸೇರಿರುವ ಹಿನ್ನೆಲೆಯಲ್ಲಿ ಅವರ ಮೇಲೂ ಎಫ್​ಐಆರ್ ದಾಖಲಾಗಿದೆ.

2021ರಲ್ಲಿ ಎಸ್.ನಾರಾಯಣ್​ ಪುತ್ರ ಪವನ್ ಹಾಗೂ ಪವಿತ್ರಾ ಮದುವೆ ನಡೆದಿತ್ತು. ಅದ್ದೂರಿಯಾಗಿ ಮದುವೆ ಮಾಡಿದ್ದರು. ಆದರೆ, ನಾಲ್ಕು ವರ್ಷ ಕಳೆಯುವುದರೊಳಗೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ.

ಮದುವೆಯಲ್ಲಿ ಒಂದು ಲಕ್ಷ ಮೌಲ್ಯದ ಉಂಗುರ ಮದುವೆ ಖರ್ಚು ಮಾಡಿದ್ದರು ಕೆಲಸ ಇಲ್ಲದೆ ಎಸ್ ನಾರಾಯಣ ಪುತ್ರ ಪವನ್ ಮನೆಯಲ್ಲಿಯೇ ಇದ್ದ ಕಾರಣ ಅವೆಲ್ಲವನ್ನೂ ಮಾರಾಟ ಮಾಡಲಾಗಿದೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ನಾನೇ ಮನೆಯನ್ನು ನಡೆಸುತ್ತಿದ್ದೆ. ಕೆಲಸ ಮಾಡಿ ಪವನ ಪತ್ನಿ ಪವಿತ್ರ ಮನೆ ನಡೆಸುತ್ತಿದ್ದರು. ಈ ವೇಳೆ ತಾಯೆ ಒಡೆಯವೇಯನ್ನು ಅಡವಿಟ್ಟು ಪವಿತ್ರ ಹಣ ಕೊಟ್ಟಿದ್ದಾರೆ. ಆದರೆ ಕಲಾ ಸಾಮ್ರಾಟ ಟೀಂ ಅಕಾಡೆಮಿ ಲಾಸ್ ಆಗಿ ಕ್ಲೋಸ್ ಆಗಿತ್ತು. ಬಳಿಕ 10 ಲಕ್ಷ ರೂಪಾಯಿ ಸಾಲ ಮಾಡಿ ಪತ್ನಿ ಪವಿತ್ರ ಪತಿಗೆ ನೀಡಿದ್ದಾರೆ ಆದರೆ ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಪವಿತ್ರ ದೂರು ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page